ಮೈಸೂರು: ಮಾನವನಾಗಿ ಜನಿಸಿದ ಮೇಲೆ ನಮ್ಮ ಸಂಸ್ಕಾರಗಳನ್ನು ಅರಿತು ಬದುಕು ಸಾಗಿಸಬೇಕು. ಯಾರು ಸದಾ ಭಗವಂತನ ನಾಮಸ್ಮರಣೆಯಲ್ಲಿ ಇರುತ್ತಾರೊ ಅವರಿಗೆ ಕಷ್ಟದ ಅರಿವು ಬರುವುದಿಲ್ಲ ಎಂದು ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದಂಗಳವರು ಹೇಳಿದರು.
ನಗರದ ಸರಸ್ವತಿಪುರಂನಲ್ಲಿರುವ ಶ್ರೀ ಕೃಷ್ಣ ದಾಮದಲ್ಲಿ ಚಾತುರ್ಮಾಸ ವ್ರತ ನಡೆಸುತ್ತಿರುವ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದಂಗಳ ರವರಿಗೆ ಗುರುಪೂರ್ಣಿಮೆ ಅಂಗವಾಗಿ ಅಪೂರ್ವ ಸ್ನೇಹ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಗುರು ವಂದನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ನೆರೆದ ಭಕ್ತರಿಗೆ ಆಶೀರ್ವಾದ ಮಾಡಿದರು.
ಗುರುವಂದನೆ ಸಲ್ಲಿಸುವ ವೇಳೆ ಅಪೂರ್ವ ಸ್ನೇಹ ಬಳಗದ ಅಧ್ಯಕ್ಷ ಅಪೂರ್ವ ಸುರೇಶ್, ಶ್ರೀ ಕೃಷ್ಣ ಮಿತ್ರ ಮಂಡಳಿಯ ಸುಬ್ರಮಣ್ಯ ತಂತ್ರಿ, ಉದ್ಯಮಿ ಜಯರಾಮ್, ಧನರಾಜ್, ಚಕ್ರಪಾಣಿ, ಮೋಹನ್, ವಾಸು ಇನ್ನಿತರರು ಇದ್ದರು.