ಮಂಡ್ಯ: ಸಂಸದೆ ಸುಮಲತಾ ಅಂಬರೀಷ್ ಟಿಕೆಟ್ ಘೋಷಣೆಯ ಮುನ್ನ ಆದಿಚುಂಚನಗಿರಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ.
ಈ ಹಿಂದೆ ಸುದ್ದಿಗೋಷ್ಠಿವೊಂದರಲ್ಲಿ ಶ್ರೀಗಳ ಆಶೀರ್ವಾದ ಪಡೆದು ಪ್ರಚಾರ ಆರಂಭಿಸುವುದಾಗಿ ಸುಮಲತಾ ಹೇಳಿದ್ದರು. ಅದರಂತೆ ಇದೀಗ ಮೊದಲಿಗೆ ಕಾಲಭೈರವೇಶ್ವರನಿಗೆ ಪೂಜೆ ಸಲ್ಲಿದ್ದಾರೆ. ಬಳಿಕ ಆದಿಚುಂಚನಗಿರಿಯ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಭೇಟಿಯಾಗಿ ಸುಮಲತಾ ಆಶೀರ್ವಾದ ಪಡೆದಿದ್ದಾರೆ.