ಮಂಡ್ಯ: ನಗರದ ಸಂಜಯ್ ಸರ್ಕಲ್ ಬಳಿ ಬೆಳ್ಳಂಬೆಳಗ್ಗೆ ಓರ್ವ ಮಹಿಳೆ ಮದ್ಯ ಸೇವಿಸಿ ತೂರಾಡುತ್ತಾ ಅಲೆದಾಡುತ್ತಿರುವ ಘಟನೆ ನಡೆದಿದೆ.
ಕುಡಿದ ಮತ್ತಿನಲ್ಲಿ ಈಕೆ ರಸ್ತೆಯಲ್ಲಿ ಓಡಾಡುವ ಜನರಿಗೆ ಬೈದಾಡಿದ್ದಾಳೆ, ಅಂಗಡಿಗಳ ಮುಂದೆ ನಿಂತು ವ್ಯಾಪಾರಸ್ಥರಿಗೆ ಮತ್ತು ಅವರ ಗ್ರಾಹಕರಿಗೆ ತೊಂದರೆ ಮಾಡಿದ್ದಾಳೆ. ಆಕೆಯ ವರ್ತನೆಯಿಂದ ಬೇಸತ್ತ ಜನ ನಗರದ ಪಶ್ಚಿಮ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಬಳಿಕ ಮಹಿಳಾ ಕಾನ್ ಸ್ಟೇಬಲ್ ಗಳು ಸ್ಟೇಶನ್ ಕರೆದೊಯ್ದಿದ್ದಾರೆ.