News Karnataka Kannada
Thursday, May 02 2024
ಮಂಡ್ಯ

ನಾಪತ್ತೆಯಾದ ಪತಿಗಾಗಿ ಪತ್ನಿ ಹುಡುಕಾಟ

New Project (14)
Photo Credit :

ಪಾಂಡವಪುರ: ಮದ್ಯ ವ್ಯಸನಿಯಾಗಿದ್ದ ಪತಿ ಮನೆಯಿಂದ ಹೊರಗೆ ಹೋದವರು ಮರಳಿ ಬಂದಿಲ್ಲ ಎಂದು ಪತ್ನಿ ಪಟ್ಟಣದ ಪೊಲೀಸರಿಗೆ ದೂರು ನೀಡಿದ್ದಾರೆ.

ಗುಮ್ಮನಹಳ್ಳಿ ಗ್ರಾಮದ ನಿವಾಸಿ ಶಿವಾನಂದ ಎಂಬಾತನೇ ನಾಪತ್ತೆಯಾದವನು. ಈತ ಆ.28ರಂದು ತನ್ನ ಮನೆಯಿಂದ ಹೊರ ಹೋದವನು ಮರಳಿ ಬಂದಿಲ್ಲ ಎನ್ನಲಾಗಿದ್ದು, ಈ ಸಂಬಂಧ ಪತಿಗಾಗಿ ಹುಡುಕಾಟ ನಡೆಸಿದ ಪತ್ನಿ ಪ್ರೇಮ ಅವರು ಎಲ್ಲಿಯೂ ಪತ್ತೆಯಾಗದ ಹಿನ್ನಲೆಯಲ್ಲಿ ಪಾಂಡವಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಅವರು ನೀಡಿದ ದೂರಿನಲ್ಲಿ ನನ್ನ ಪತಿ ಮದ್ಯವ್ಯಸನಿಯಾಗಿದ್ದು, ಯಾವ ಕೆಲಸವೂ ಮಾಡದೆ ಊರಿನಲ್ಲಿ ಅಲೆದಾಡುತ್ತಾ ವೃಥಾ ಕಾಲ ಕಳೆಯುತ್ತಾ ಮನೆಯಲ್ಲೇ ಇರುತ್ತಿದ್ದರು. ನಾನು ಮೈಸೂರಿನಲ್ಲಿ ಲೂನಾರ್‍ಸ್ ಕಂಪೆನಿಯಲ್ಲಿ ಕೂಲಿ ಮಾಡಿಕೊಂಡಿದ್ದು, ಆ.28ರಂದು ಬೆಳಗ್ಗೆ ಸುಮಾರು 7.15ರ ಸಮಯದಲ್ಲಿ ಎಂದಿನಂತೆ ನಾನು ಕೂಲಿ ಕೆಲಸಕ್ಕಾಗಿ ಮೈಸೂರಿಗೆ ಹೋಗುವಾಗ ಮನೆಯಲ್ಲೇ ಇದ್ದ ಪತಿ ಸಂಜೆ ಸುಮಾರು 7ಗಂಟೆಗೆ ಮೈಸೂರಿನಿಂದ ನಾನು ಮನೆಗೆ ಬಂದ ವೇಳೆ ಮನೆಯಲ್ಲಿ ಕಾಣಲಿಲ್ಲ. ಬಳಿಕ ರಾತ್ರಿಯಾದರೂ ಮನೆಗೆ ಬಾರದ ಕಾರಣ ಅತ್ತೆ ಪುಟ್ಟಮ್ಮ ಮತ್ತು ಮೈದ ರಾಜೇಶ್ ಅವರಿಗೆ ತಿಳಿಸಿದ ನಂತರ ಎಲ್ಲ ಕಡೆ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ. ಮನೆಯಿಂದ ಕಾಣೆಯಾದ ವೇಳೆ ತಿಳಿ ನೀಲಿ ಬಣ್ಣದ ಅರ್ಧ ತೋಳಿನ ಶರ್ಟ್, ಕಾಫಿ ಕಲರ್ ಚಡ್ಡಿ, ಹಸಿರು ಬಣ್ಣದ ಟವೆಲ್ ಹಾಕಿರುತ್ತಾರೆ. ನನ್ನ ಪತಿಯನ್ನು ಪತ್ತೆ ಮಾಡಿಕೊಡಬೇಕು ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಪ್ರೇಮ ಮನವಿ ಮಾಡಿದ್ದಾರೆ.

ಕಾಣೆಯಾದ ಶಿವಾನಂದ 5.2 ಅಡಿ ಎತ್ತರ, ಸಾಧಾರಣ ಶರೀರ, ಕೋಲು ಮುಖ, ಸಾಧಾರಣ ಮೂಗು, ಕಪ್ಪು ಮೈ ಬಣ್ಣ, ತಲೆಯಲ್ಲಿ ಕಪ್ಪು ಕೂದಲು, ಅಲ್ಲಲ್ಲಿ ಬಿಳಿ ಕೂದಲು ಇರುತ್ತೆ. ಸಣ್ಣದಾಗಿ ಮೀಸೆ ಇರುತ್ತೆ, ಎರಡು ಕಿವಿ ಚುಚ್ಚಿದ್ದು, ಕಾಲಿನ ಉಗುರುಗಳು ಮಡಚಿಕೊಂಡಿರುತ್ತವೆ. ಕನ್ನಡ ಭಾಷೆ ಮಾಡಲಿದ್ದು, ಅವಿದ್ಯಾವಂತರಾಗಿದ್ದಾರೆ.  ಈತನ ಸುಳಿವು ಸಿಕ್ಕಲ್ಲಿ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಕೋರಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು