News Karnataka Kannada
Tuesday, April 30 2024
ಮಡಿಕೇರಿ

ಸರಕಾರದ ಸೌಲಭ್ಯ ನಮಗೆ ಬೇಕಿಲ್ಲ ಎಂದ ನಕ್ಸಲ್ ಕಮಾಂಡರ್

ಪದೇ ಪದೇ ಪಶ್ಚಿಮಘಟ್ಟ ದಟ್ಟಾರಣ್ಯಕ್ಕೆ ಹೊಂದಿಕೊಂಡಂತಿರುವ ಮನೆಗಳಿಗೆ ಭೇಟಿ ನೀಡುತ್ತಿರುವ ನಕ್ಸಲ್ ತಂಡ ಮತ್ತೆ ಅರಣ್ಯದಲ್ಲಿ ಮರೆಯಾಗುತ್ತಿದೆ. 30 ದಿನದ ಅಂತರದಲ್ಲಿ ಮೂರು ಕಡೆ ಪ್ರತ್ಯಕ್ಷಗೊಂಡು ದಿನಸಿ ಸಂಗ್ರಹಿಸಲಾಗಿದೆ.
Photo Credit : NewsKarnataka

ಮಡಿಕೇರಿ:  ಪದೇ ಪದೇ ಪಶ್ಚಿಮಘಟ್ಟ ದಟ್ಟಾರಣ್ಯಕ್ಕೆ ಹೊಂದಿಕೊಂಡಂತಿರುವ ಮನೆಗಳಿಗೆ ಭೇಟಿ ನೀಡುತ್ತಿರುವ ನಕ್ಸಲ್ ತಂಡ ಮತ್ತೆ ಅರಣ್ಯದಲ್ಲಿ ಮರೆಯಾಗುತ್ತಿದೆ. 30 ದಿನದ ಅಂತರದಲ್ಲಿ ಮೂರು ಕಡೆ ಪ್ರತ್ಯಕ್ಷಗೊಂಡು ದಿನಸಿ ಸಂಗ್ರಹಿಸಲಾಗಿದೆ. ನಕ್ಸಲರು ಭೇಟಿ ನೀಡಿದ ಮನೆಗಳಿಗೆ ಭೇಟಿ ನೀಡಿ ವಿಶೇಷ ಸಂದರ್ಶನ ನಡೆಸುವ ವೇಳೆ ಸುಬ್ರಮಣ್ಯ ಸಮೀಪದ ಐನಾಕಿಡು ಅಶೋಕ್ ಅವರ ಮನೆಯಲ್ಲಿ ಹಲವು ರೀತಿಯ ಚರ್ಚೆಗಳನ್ನು ನಡೆಸಿರುವುದು ಬೆಳಕಿಗೆ ಬಂದಿದೆ.

ಮಾರ್ಚ್ 22ರಂದು ಭೇಟಿ ನೀಡಿದ ನಕ್ಸಲ್ ತಂಡ ಅವರ ಕೆಲಸದವರೊಂದಿಗೆ ದೀರ್ಘ ಕಾಲದ ಮಾತುಕತೆ ನಡೆಸಿರುವ ಅಶೋಕ್ ಹೇಳಿಕೊಂಡಿದ್ದಾರೆ ಮಾತುಕತೆ ವೇಳೆ “ನಾನು ಪೊಲೀಸರಿಗೆ ಶರಣಗಲಾರೆ” ಎಂಬಿತ್ಯಾದಿ ಹಲವು ವಿಚಾರಗಳು ಮಾತನಾಡಿರುವ ಬಗ್ಗೆ ಅಶೋಕ್ ನಮ್ಮ ಜೊತೆ ಹಂಚಿಕೊಂಡಿದ್ದಾರೆ.

ತಂಡ ಮನೆಗೆ ಭೇಟಿ ನೀಡಿದಾಗ ಸಮಯ 6 ಕಳೆದಿತ್ತು

ಮಾರ್ಚ್ 22ರಂದು ರಾತ್ರಿ ಜಿಟಿ ಜಿಟಿ ಮಳೆಯ ಮಧ್ಯೆ ನಾಲ್ವರು ಬಂದೂಕುದಾರಿಗಳು ಮನೆಯ ಮುಂಭಾಗಕ್ಕೆ ಬಂದಿದ್ದರು, “ನಾವ್ಯಾರೆಂದು ಗೊತ್ತಾ” ಎಂದು ಕೇಳಿದ ಪ್ರಶ್ನೆಗೆ ಅಶೋಕ್ ಅವರ ಮನೆಕೆಲಸ ಮಾಡಿಕೊಂಡಿರುವ ಶಿವಮೊಗ್ಗ ಮೂಲದ ಮನೋಜ್ “ಗೊತ್ತು ಸಾರ್, ನೀವು ಹೋರಾಟಗಾರರಲ್ವೇ?” ಎಂದಾಗ ತಲೆ ಆಡಿಸಿ ೨ ಬಂದೂಕನ್ನು ಬೆಂಚಿನ ಮೇಲೆ ಇಟ್ಟು ಇನ್ನೆರಡನ್ನು ಪಕ್ಕದಲ್ಲಿದ್ದ ಫ್ರಿಡ್ಜ್ ಗೆ ಒರಗಿಸಿದ್ದಾರೆ.

ಶರಣಾಗುವ ಪ್ರಶ್ನೆಯೇ ಇಲ್ಲ: ವಿಕ್ರಂ ಗೌಡ

ನಾನು ಶರಣಾಗುವ ಪ್ರಶ್ನೆಯೇ ಇಲ್ಲ ಎಂದು ನಕ್ಸಲ್ ನಾಯಕ ವಿಕ್ರಂ ಗೌಡ ಹೇಳಿದ್ದಾನೆ, ನಾವು ಶರಣಾದರೆ ನಮಗೆ ಸರಕಾರ ಸೌಲಭ್ಯ ನೀಡುತ್ತದೆ, ಆದರೆ ಸೌಲಭ್ಯಗಳು ಬಡವರಿಗೆ ತಲುಪಲು ನಮ್ಮ ಹೋರಾಟ ಮುಂದುವರೆದಿದೆ ಎಂದು ಹೇಳಿದ್ದಾನೆ. ಅರಣ್ಯ ಭಾಗದ ಆದಿವಾಸಿ ಕುಟುಂಬಗಳು ಮೂಲಬೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ ಅವರ ಪರವಾಗಿ ಯಾರು ಧ್ವನಿ ಎತ್ತುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾನೆ. ನಾಡಿನಲ್ಲಿ ಹೋರಾಡಿದವರು ಯಾವ ಸಫಲತೆಯನ್ನು ಕಂಡಿದ್ದಾರೆ ಎಂದು ಅಶೋಕ್ ಕುಟುಂಬದವರನ್ನೇ ಪ್ರಶ್ನಿಸಿದ ವಿಕ್ರಮ್ ಗೌಡ ನಾವು ಕಾಡಿನಲ್ಲಿಯೇ ಹೋರಾಟ ಮುಂದುವರೆಸುವುದಾಗಿ ಹೇಳಿದ್ದಾನೆ.

ಆದಿವಾಸಿಗಳ ಬಗ್ಗೆಯೂ ಪ್ರಶ್ನೆ

ನಕ್ಸಲ್ ನಾಯಕ ವಿಕ್ರಂ ಗೌಡ ತಂಡದಲ್ಲಿ ನಾಲ್ವರು ಇದ್ದಾರಾದರೂ ವಿಕ್ರಂ ಹಾಗು ಜಿಶಾ ಮಾತ್ರ ಮಾತನಾಡಿದ್ದಾರೆ. ಈ ಅರಣ್ಯವ್ಯಾಪ್ತಿಯಲ್ಲಿ ಇರುವ ಆದಿವಾಸಿ ಮಲೆಕುಡಿಯ ಜನಾಂಗದ ಕುಟುಂಬಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ತೋಟದ ಮೂಲೆ ವ್ಯಾಪ್ತಿಯಲ್ಲಿ ಒಟ್ಟು ೭ ಮಲೆಕುಡಿಯ ಕುಟುಂಬಗಳು ವಾಸಿಸುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿಕೊಂಡಿದ್ದಾರೆ.

ಇಲ್ಲಿಯೂ ಇಬ್ಬರೇ ಮಾತನಾಡಿದ್ದು

ಅಶೋಕ್ ಮನೆಗೆ ಭೇಟಿ ನೀಡಿದ ಶಂಕಿತ ಮಾವೋವಾದಿಗಳ ತಂಡದಲ್ಲಿ ಒಬ್ಬ ವಿಕ್ರಂ ಗೌಡ ಹಾಗು ಜಿಶಾ ಮಾತ್ರ ಆಕ್ಟಿವ್ ಆಗಿದ್ದು ಮತ್ತಿಬ್ಬರು ಯಾವುದೇ ಮಾತುಗಳನ್ನಾಡಿಲ್ಲ. “ಈ ಪ್ಲಾಸ್ಟಿಕ್ ಚೀಲಕ್ಕೆ ಹಾಕಿ ಕೊಡಿ” ಎಂದು ಹೇಳಿದ್ದು ಬಿಟ್ಟರೆ ೧ ಗಂಟೆಗೂ ಹೆಚ್ಚು ಸಮಯದಲ್ಲಿ ಅವರಿಬ್ಬರೂ ಬೇರೇನೂ ಮಾತನಾಡಲಿಲ್ಲ. ತೀರಾ ಬಸವಳಿದಂತೆ ಕಂಡ ಅವರಿಬ್ಬರೂ ಕಾಡಿನೊಳಗಿನ ಹೋರಾಟದಲ್ಲಿ ಆಸಕ್ತಿ ಕಳೆದುಕೊಂಡಂತೆ ಕಂಡುಬಂದಿದೆ. ಕೂಜಿಮಲೆಯಲ್ಲಿ ಕೂಡ ದಿನಸಿ ಖರೀದಿಸಿ ಹೊರಡುವಾಗ ವಿಕ್ರಂ ಗೌಡ ಹಾಗು ಜಿಶಾ ಎಲ್ಲರೊಂದಿಗೆ ಮಾತನಾಡಿ ಹೊರಡುವ ವೇಳೆಯಲ್ಲಿ ಅಲ್ಲಿದ್ದವರ ಕೈಕುಲುಕಿ ತೆರಳಿದ್ದರು. ಬಿಳಿನೆಲೆ ಶಿವರಾಮ ಗೌಡರ ಮನೆಯಲ್ಲಿಯೂ ಇಬ್ಬರು ಮಾತ್ರ ಮಾತನಾಡಿದ್ದಾರೆ.

ಉಳಿದ ಅನ್ನ ಸಾಂಬಾರ್ ನೀಡಲು ಮನವಿ

ಐನಕಿಡು ಅಶೋಕ್ ಮನೆಯಲ್ಲಿ ನಕ್ಸಲ್ ತಂಡ “ಮನೆಮಂದಿಗೆ ಊಟಕ್ಕೆ ಇಟ್ಟು ಉಳಿದ ಅನ್ನ ಸಾಂಬಾರ್ ನಮಗೆ ಕೊಡಿ” ಎಂದು ಕೇಳಿರುವ ತಂಡ ಸೌಜನ್ಯದಿಂದಲೇ ನಡೆದುಕೊಂಡರು ಎಂದು ಅಶೋಕ್ ಹೇಳುತ್ತಾರೆ. “ಮನೆಯಲ್ಲಿದ್ದ ಅನ್ನದ ಜೊತೆ ಬೆಳ್ಳರಿ ಸಾರು ನೀಡಿದ್ದು ಹೌದು” ಎಂದು ಅಶೋಕ್ ಪತ್ನಿ ಹೇಳುತ್ತಾರೆ. ಅಕ್ಕಿ, ಉಪ್ಪು, ಮೆಣಸು, ಹಾಗು ಟೊಮೊಟೊ ಪಡೆದು ಹಣ ನೀಡಲು ಮುಂದಾಗಿದ್ದಾರೆ. ಆದರೆ ಅಶೋಕ್ ಹಣ ಸ್ವೀಕರಿಸಲಿಲ್ಲ. ಮನೆಯವರ ಪ್ರಕಾರ “ನಮಗೆ ಯಾರೋ ನೆಂಟರು ಬಂದಂತೆ ಭಾಸವಾಯಿತು, ಮಗಳು ನಿಮ್ಮ ಹೆಸರೇನು ಎಂದು ಕೇಳಿದಕ್ಕೆ ಆತ ಜೋರಾಗಿ ನಕ್ಕಿದ್ದ” ಈಗಾಗಲೇ ತಡವಾಗಿದೆ ನಾವು ಇನ್ನು ತೆರಳುತ್ತೇವೆ” ಎಂದು ತಂಡ ಅಲ್ಲಿಂದ ದಟ್ಟವಾದ ಕಾಡಿನತ್ತ ಕಣ್ಮರೆಯಾಗಿದೆ.

ಎಡಕುಮೇರಿ ಮೂಲಕ ಕುದುರೆಮುಖ ಹೊರಟೆವು ಎಂದ ವಿಕ್ರಂ ಗೌಡ

ಏಪ್ರಿಲ್ ನಾಲ್ಕರಂದು ಸುಬ್ರಮಣ್ಯ ಗುಂಡ್ಯ ರಸ್ತೆಯ ರಾಜ್ಯ ಹೆದ್ದಾರಿಯಯಿಂದ ೩೦೦ ಮೀಟರು ದೂರದಲ್ಲಿರುವ ಶಿವರಾಮೇಗೌಡರ ಮನೆಯಿಂದ ೬ ಜನರ ನಕ್ಸಲ್ ತಂಡ ಅಲ್ಲಿಂದ ಹೊರಡುವ ವೇಳೆ “ನಾವು ಕಾಗಿನೆಲೆ, ಹೊಂಗೇನಹಳ್ಳ, ಎಡಕುಮೇರಿ, ಕಾಡುಮನೆ ಮೂಲಕ ಕುದ್ರೆಮುಖ ತಲುಪಿ ಮತ್ತೆ ಕೇರಳ ಹಿಂದುರುವುದಾಗಿ” ಹೇಳಿದ್ದಾರೆ. ಹೊರಡುವ ಮುನ್ನ ೫ ಟ್ಯಾಬ್ ಹಾಗು ೪ ಮೊಬೈಲ್ ( ಆಂಟೆನಾ ಇರುವ ಹಳೆಯ ಮಾದರಿಯ ಫೋನ್)ಚಾರ್ಜ್ ಮಾಡಿ ತೆರಳಿದ್ದಾರೆ.

ಮತ್ತೆ ಕಾಣಿಸಿಕೊಳ್ಳುವ ಸಾಧ್ಯತೆ

ಏಪ್ರಿಲ್ ೪ ರಂದು ಕಾಣಿಸಿಕೊಂಡ ೬ ಜನರ ನಕ್ಸಲ್ ತಂಡ ೫ ಸೇರು ಅಕ್ಕಿ ( ಅಂದಾಜು ೭ಕೆಜಿ ) ಪಡೆದು ತೆರಳಿರುವ ತಂಡ ಇಷ್ಟು ದಿನ ಅದೇ ದಿನಸಿಯಲ್ಲಿ ದಿನದೂಡಿದೆಯೇ ಎಂಬ ಅನುಮಾನಗಳು ಪೊಲೀಸ್ ವಲಯದಲ್ಲಿ ವ್ಯಕ್ತವಾಗಿದೆ. ೧೪ ದಿನವಾದರೂ ಎಲ್ಲೂ ಕಾಣಿಸಿಕೊಳ್ಳದ ಮಾವೋವಾದಿಗಳಿಗೆ ಬೆಳ್ತಂಗಡಿ ಭಾಗದಲ್ಲಿ ನಕ್ಸಲ್ ಸಹಾನುಭೂತಿ ಉಳ್ಳವರು ಇದ್ದಾರೆ ಎಂಬುವುದು ಸತ್ಯ. ಈ ಮದ್ಯೆ ದಿನಸಿ ಪಡೆದಿರುವ ಅಥವಾ ಖರೀದಿಸಿರುವ ಸಾಧ್ಯತೆಯನ್ನು ಕೂಡ ತಳ್ಳಿಹಾಕುವಂತಿಲ್ಲ.

ಪದೇ ಪದೇ ಪಶ್ಚಿಮಘಟ್ಟ ದಟ್ಟಾರಣ್ಯಕ್ಕೆ ಹೊಂದಿಕೊಂಡಂತಿರುವ ಮನೆಗಳಿಗೆ ಭೇಟಿ ನೀಡುತ್ತಿರುವ ನಕ್ಸಲ್ ತಂಡ ಮತ್ತೆ ಅರಣ್ಯದಲ್ಲಿ ಮರೆಯಾಗುತ್ತಿದೆ. 30 ದಿನದ ಅಂತರದಲ್ಲಿ ಮೂರು ಕಡೆ ಪ್ರತ್ಯಕ್ಷಗೊಂಡು ದಿನಸಿ ಸಂಗ್ರಹಿಸಲಾಗಿದೆ. ನಕ್ಸಲರು ಭೇಟಿ ನೀಡಿದ ಮನೆಗಳಿಗೆ ಭೇಟಿ ನೀಡಿ ವಿಶೇಷ ಸಂದರ್ಶನ ನಡೆಸುವ ವೇಳೆ ಸುಬ್ರಮಣ್ಯ ಸಮೀಪದ ಐನಾಕಿಡು ಅಶೋಕ್ ಅವರ ಮನೆಯಲ್ಲಿ ಹಲವು ರೀತಿಯ ಚರ್ಚೆಗಳನ್ನು ನಡೆಸಿರುವುದು ಬೆಳಕಿಗೆ ಬಂದಿದೆ.

ಮಾರ್ಚ್ ೨೨ರಂದು ಭೇಟಿ ನೀಡಿದ ನಕ್ಸಲ್ ತಂಡ ಅವರ ಕೆಲಸದವರೊಂದಿಗೆ ದೀರ್ಘ ಕಾಲದ ಮಾತುಕತೆ ನಡೆಸಿರುವ ಅಶೋಕ್ ಹೇಳಿಕೊಂಡಿದ್ದಾರೆ ಮಾತುಕತೆ ವೇಳೆ “ನಾನು ಪೊಲೀಸರಿಗೆ ಶರಣಗಲಾರೆ” ಎಂಬಿತ್ಯಾದಿ ಹಲವು ವಿಚಾರಗಳು ಮಾತನಾಡಿರುವ ಬಗ್ಗೆ ಅಶೋಕ್ ನಮ್ಮ ಜೊತೆ ಹಂಚಿಕೊಂಡಿದ್ದಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು