News Karnataka Kannada
Saturday, May 04 2024
ಮಡಿಕೇರಿ

ಹಿರಿಯರನ್ನು ಗೌರವಿಸಿ,ಕೊಡವ ಸಂಸ್ಕೃತಿಯನ್ನು ಬೆಳಗಿಸಿ- ಮೇಜರ್ ಜನರಲ್ ಎಂ.ಕಾರ್ಯಪ್ಪ

ಕೊಡವ ಕೌಟುಂಬಿಕ ಕ್ರೀಡಾ ಹಬ್ಬಗಳು ಸಾಂಸ್ಕೃತಿಕವಾಗಿಯೂ ಪ್ರಾಮುಖ್ಯತೆ ಪಡೆದುಕೊಂಡಿದೆ.ಅಂತರಾಷ್ಟ್ರೀಯ ಮಟ್ಟದಲ್ಲಿ ಕೊಡಗಿನ ಕ್ರೀಡಾಪಟುಗಳು ಸಾಧನೆ ಮಾಡುತ್ತಿರುವದು ಹೆಮ್ಮೆಯ ವಿಚಾರ
Photo Credit : NewsKarnataka

ಮಡಿಕೇರಿ: ಕೊಡವ ಕೌಟುಂಬಿಕ ಕ್ರೀಡಾ ಹಬ್ಬಗಳು ಸಾಂಸ್ಕೃತಿಕವಾಗಿಯೂ ಪ್ರಾಮುಖ್ಯತೆ ಪಡೆದುಕೊಂಡಿದೆ.ಅಂತರಾಷ್ಟ್ರೀಯ ಮಟ್ಟದಲ್ಲಿ ಕೊಡಗಿನ ಕ್ರೀಡಾಪಟುಗಳು ಸಾಧನೆ ಮಾಡುತ್ತಿರುವದು ಹೆಮ್ಮೆಯ ವಿಚಾರ. ಇವತ್ತು ವಿಶ್ವದಲ್ಲಿ ಕ್ರಿಕೆಟ್ ಪ್ರತಿಷ್ಠೆಯ ಕ್ರೀಡೆಯಾಗಿದ್ದು ಇದೀಗ ಪ್ರಥಮ ಬಾರಿಗೆ ಕೊಡವ ಕ್ರಿಕೆಟ್ ಹಬ್ಬದಲ್ಲಿ ದಾಖಲೆಯ 49 ಮಹಿಳಾ ತಂಡಗಳು ಪಾಲ್ಗೊಂಡಿರುವದು ಉತ್ತಮ ಬೆಳವಣಿಗೆ.ಹಾಕಿಯಂತೆ ಇಲ್ಲಿನ ಕ್ರಿಕೆಟ್ ಪಟುಗಳೂ ಭಾರತೀಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯಲು ಶ್ರಮ ವಹಿಸಬೇಕು ಎಂದರು.

ದೇಶದ ಬೇರೆ ಬೇರೆ ಪ್ರದೇಶದಲ್ಲಿ ಉದ್ಯೋಗದಲ್ಲಿರುವವರು ಒಂದೆಡೆ ಸೇರಲು ಕೊಡವ ಕ್ರೀಡೋತ್ಸವ ವೇದಿಕೆಯಾಗಿದೆ. ಯುವ ಸಮುದಾಯವು ಕೊಡವ ಪದ್ಧತಿ ಪರಂಪರೆ, ಆತ್ಮ ಗೌರವವನ್ನು ಕಾಪಾಡುವ ಕೆಲಸ ಮಾಡಬೇಕು ಎಂದು ಅಭಿಪ್ರಾಯ ಪಟ್ಟರು. ಚೆಟ್ಟಳ್ಳಿಯಲ್ಲಿ ಮೊದಲ ಮಹಿಳಾ ಕ್ರಿಕೆಟ್- ಐಚೆಟ್ಟಿರ ಸುನಿತಾ

ಚೆಟ್ಟಳ್ಳಿ ಲೇಡೀಸ್ ಕ್ಲಬ್ ಮೂಲಕ ಪ್ರಾಯೋಗಿಕವಾಗಿ ವಿವಾಹಿತ ಮಹಿಳೆಯರ ಕ್ರಿಕೆಟ್ ಆಯೋಜಿಸಲಾಗಿದ್ದು, ದ್ವಿತೀಯ ವರ್ಷವೂ ಯಶಸ್ವಿಯಾಗಿ ನಡೆಸಲಾಯಿತು.ಇದೀಗ ಅರಮಣಮಾಡ ಕುಟುಂಬಸ್ಥರು 49 ಮಹಿಳಾ ತಂಡಗಳ ನಡುವೆ ಕ್ರಿಕೆಟ್ ಆಯೋಜಿಸಿರುವದು ಉತ್ತಮ ಬೆಳವಣಿಗೆ ಎಂದು ಕೊಡಗಿನಲ್ಲಿ ಮಹಿಳಾ ಕ್ರಿಕೆಟ್ ಗೆ ಉತ್ತೇಜನ ನೀಡುತ್ತಿರುವ ಐಚೆಟ್ಟಿರ ಸುನಿತಾ ಅಭಿಪ್ರಾಯಪಟ್ಟರು.

ಕೊಡಗು ಜಿಲ್ಲೆಯಲ್ಲಿ ರಕ್ತಗತವಾಗಿ ಕ್ರೀಡೆ ಬಂದಿದೆ.ಅಡಿಗೆ ಮನೆಯಿಂದ ಕ್ರಿಕೆಟ್ ಪಿಚ್ ಗೆ ಹೆಣ್ಣು ಮಕ್ಕಳು ಪಾದಾರ್ಪಣೆ ಮಾಡುತ್ತಿದ್ದಾರೆ. ಮಹಿಳಾ ಸಬಲೀಕರಣ, ಸಮಾನತೆ, ನಾಯಕತ್ವ ಬೆಳವಣಿಗೆಗೆ ಹೆಚ್ಚಾಗಿ ಮಹಿಳೆಯರು ಕ್ರೀಡೆಯತ್ತ ಒಲವು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಬೇಸಿಗೆ ಕ್ರೀಡಾ ಶಿಬಿರ ಸದುಪಯೋಗವಾಗಲಿ- ಅಂಜಪರವಂಡ ಬಿ.ಸುಬ್ಬಯ್ಯ ಒಂದೇ ಕ್ರೀಡೆಯತ್ತ ಒಲವು ಬೆಳೆಸಿಕೊಳ್ಳದೆ ಆಸಕ್ತಿದಾಯಕ ಕ್ರೀಡೆಯಲ್ಲಿ ಸಾಧನೆ ಮಾಡುವಂತೆಯೂ ಬೇಸಿಗೆ ಕ್ರೀಡಾ ಶಿಬಿರ ಸದುಪಯೋಗ ಮಾಡಿಕೊಳ್ಳುವಂತೆಯೂ ಮಾಜಿ ಹಾಕಿ ಒಲಂಪಿಯನ್,ಅರ್ಜುನ ಪ್ರಶಸ್ತಿ ವಿಜೇತ,ಹಾಕಿ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಡಾ.ಎ.ಬಿ.ಸುಬ್ಬಯ್ಯ ಅಭಿಪ್ರಾಯಪಟ್ಟರು.

ಬೆಂಗಳೂರು ವಿ.ವಿ.ಯಲ್ಲಿ ತಾವು ವ್ಯಾಸಂಗ ಮಾಡುತ್ತಿದ್ದಾಗ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಅಖಿಲ ಭಾರತ ವಿಶ್ವ ವಿದ್ಯಾಲಯ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತ್ತು.ಆದರೆ ಇದೀಗ ಭಾರತ ಹಾಕಿ ತಂಡದಲ್ಲಿ ಕೊಡಗಿನ ಆಟಗಾರರ ಕೊರತೆ ಕಂಡು ಬಂದಿದೆ.
ಇಲ್ಲಿನ ಯುವ ಜನಾಂಗಕ್ಕೆ ಹಾಕಿ,ಕ್ರಿಕೆಟ್,ಜೂಡೋ, ಬಾಕ್ಸಿಂಗ್,ಟೆನ್ನೀಸ್ ಸೇರಿದಂತೆ ಹಲವು ಕ್ರೀಡೆಗಳಲ್ಲಿ ಸಾಧನೆ ಮಾಡಲು ಅವಕಾಶವಿದೆ ಎಂದು ಹೇಳಿದರು.

‌‌ ಅರಮಣಮಾಡ ಕೌಟುಂಬಿಕ ಕ್ರಿಕೆಟ್ ತಂಡದ ಅಧ್ಯಕ್ಷ ಎ.ಕೆ.ಸುರೇಶ್ ಅವರು ಮಾತನಾಡಿ, ಸುಮಾರು 40 ಮಂದಿ ತಾಮನೆ ಮಹಿಳೆಯರು ಕ್ರೀಡಾಕೂಟಕ್ಕೆ ರೂ.5 ಲಕ್ಷ ವಂತಿಗೆ ಸಂಗ್ರಹಿಸಿ ಸಹಕರಿಸಿದ್ದಾರೆ.ಕುಟುಂಬ ಸದಸ್ಯರು,ಪದಾಧಿಕಾರಿಗಳ ಸಹಕಾರದಿಂದಾಗಿ ಉತ್ತಮ ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಸಾಧ್ಯವಾಯಿತು.ಸೇನೆಯಲ್ಲಿಯೂ ಅರಮಣಮಾಡ ಕುಟುಂಬಸ್ಥರು ದೇಶ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.ಮೇ‌19 ರವರೆಗೆ ಜರುಗುವ ಅರಮಣಮಾಡ ಕ್ರಿಕೆಟ್ ಹಬ್ಬಕ್ಕೆ ಇದೇ ಸಂದರ್ಭ ಎಲ್ಲರ ಸಹಕಾರ ಕೋರಿದರು.

ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ.ಮಹದೇವಪ್ಪ ಅವರ ಆಪ್ತ ಕಾರ್ಯದರ್ಶಿ ಚೊಟ್ಟೆಯಂಡಮಾಡ ಕೆ.ರಾಜೇಂದ್ರ , ಕೊಡವ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷ ಕೀತಿಯಂಡ ಕಾರ್ಸನ್, ವಿಜಯಲಕ್ಷ್ಮಿ ಪ.ಪೂ.ಕಾಲೇಜು ಅಧ್ಯಕ್ಷರಾದ ಅಳಮೇಂಗಡ ಬೋಸ್ ಮಂದಣ್ಣ, ಬಾಳೆಲೆ ಗ್ರಾ.ಪಂ.ಅಧ್ಯಕ್ಷೆ ಜಾನಕಿ ಕಾವೇರಪ್ಪ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಸ್ವಾಗತ ಅರಮಣಮಾಡ ಮುತ್ತು ಮುತ್ತಪ್ಪ,ಅಜಯ್ ಅಪ್ಪಣ್ಣ ವಂದಿಸಿದರು.
– ಟಿ.ಎಲ್.ಶ್ರೀನಿವಾಸ್.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು