News Karnataka Kannada
Saturday, May 04 2024
ಮಡಿಕೇರಿ

ಮಡಿಕೇರಿ: ಮೂರ್ನಾಡುವಿನಲ್ಲಿ ಶ್ರೀ ಕೃಷ್ಣ ಸಂಧಾನ ಯಕ್ಷಗಾನ ತಾಳಮದ್ದಳೆ

Sri Krishna Sadhana Yakshagana Talamaddale in Moornadu
Photo Credit : By Author

ಮಡಿಕೇರಿ: ಮೂರ್ನಾಡು ಸುಜ್ಞಾನ ಸೇವಾ ಟ್ರಸ್ಟ್ ಆರಂಭೋತ್ಸವದ ಪ್ರಯುಕ್ತ ಮಹಾಭಾರತ ಕಥೆಯಲ್ಲಿ ಬರುವ “ಶ್ರೀ ಕೃಷ್ಣ ಸಂಧಾನ” ಕಥಾ ವಸ್ತುವಿನ ಯಕ್ಷಗಾನ ತಾಳಮದ್ದಳೆ ನಡೆಯಿತು.

ಸುಜ್ಞಾನ ಸೇವಾ ಟ್ರಸ್ಟ್ನ ಸಭಾಭವನದಲ್ಲಿ ನಡೆದ ಕಾರ್ಯಕ್ರಮವನ್ನು ಶಕ್ತಿ ದಿನಪತ್ರಿಕೆಯ ಪ್ರಧಾನ ಸಂಪಾದಕ ಜಿ.ರಾಜೇಂದ್ರ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಭಗವದ್ಗೀತೆ ಪ್ರತಿಯೊಬ್ಬರ ದೈನಂದಿನ ಜೀವನದಲ್ಲಿ ಬರುವ ಸಮಸ್ಯೆಗಳಿಗೆ ಪರಿಹಾರವಿರುವ ಅಮೂಲ್ಯ ಗ್ರಂಥ. ಹದಿನೆಂಟು ಅಧ್ಯಾಯದಿಂದ ಕೂಡಿರುವ ಈ ಭಗವದ್ಗೀತೆಯನ್ನು ಪ್ರತಿಯೊಬ್ಬರು ಮನೆಯಲ್ಲಿ ದಿನಕ್ಕೊಂದು ಶೋಕವಾದರು ಒದಬೇಕು. ಅದರಿಂದ ಸಮಾಜದಲ್ಲಿ ಹೇಗೆ ಬದುಕಬೇಕು, ಸವಾಲುಗಳನ್ನು ಹೇಗೆ ಎದುರಿಸಬೇಕು ಎನ್ನುವ ಬಗ್ಗೆ ಸ್ವಯಂ ಅರ್ಥವಾಗುತ್ತದೆ ಎಂದರು.

ಮಕ್ಕಳು, ಯುವಕರು ಭಗವದ್ಗೀತೆಯನ್ನು ತಿಳಿದುಕೊಂಡರೆ ಅತ್ಮಹತ್ಯೆಯಂತ ನಿರ್ಧಾರವನ್ನು ತಡೆಗಟ್ಟಬಹುದಾಗಿದೆ ಎಂದು ನುಡಿದರು. ಭಗವದ್ಗೀತೆಯಲ್ಲಿ ಶ್ರೀ ಕೃಷ್ಣನು ಹೇಳಿರುವ ಕೆಲವು ನುಡಿಗಳು ಮತ್ತು ಅವುಗಳ ಅರ್ಥವನ್ನು ತಿಳಿಸಿಕೊಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಸ್ತಾವಿಕ ಮಾತನಾಡಿದ ಶ್ರೀ ಸುಜ್ಞಾನ ಸೇವಾ ಟ್ರಸ್ಟ್ನ ಅಧ್ಯಕ್ಷ ಡಾ.ಮಹಭಲೇಶ್ವರ್ ಭಟ್, ಸುಜ್ಞಾನ ಸೇವಾ ಟ್ರಸ್ಟ್ ಹಿಂದು ಧರ್ಮ ಪ್ರಚಾರಕ್ಕೆಂದೆ ಆರಂಭಿಸಿರುವುದು. ಧರ್ಮ ಗ್ರಂಥದ ಲಿಪಿ ಸಂಸ್ಕೃತದಲ್ಲಿ ಇರುವುದರಿಂದ ಬ್ರಾಹ್ಮಣರು ಮಾತ್ರ ಗ್ರಂಥಸಾರವನ್ನು ತಿಳಿದುಕೊಳ್ಳುವುದು ಎಂದು ಸಾಮಾನ್ಯ ಜನರು ತಿಳಿದುಕೊಂಡಿದ್ದಾರೆ. ಧರ್ಮ ಗ್ರಂಥದಿAದ ಬಹುತೇಕ ಜನ ಅಂತರ ಕಾಯ್ದುಕೊಂಡಿದ್ದಾರೆ. ಆದರೆ ಪ್ರತಿಯೊಬ್ಬ ಹಿಂದೂ ಜಾತಿ ಭೇದಗಳಿಲ್ಲದೆ ಇದರ ಅರ್ಥವನ್ನು ತಿಳಿದುಕೊಳ್ಳಬೆನ್ನುವುದು ಸಂಘಟನೆಯ ಉದ್ದೇಶ ಎಂದರು.

ಕಾಂತೂರು-ಮೂರ್ನಾಡು ಪಂಚಾಯಿತಿ ಅಧ್ಯಕ್ಷೆ ಸುಜಾತ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಧರ್ಮ ಜ್ಯಾತತ್ಯ ಕಾರ್ಯಗಳು ನಡೆಯುತ್ತಲೇ ಇದೆ. ಇಂತಹ ಕಾರ್ಯಕ್ರಮದಿಂದ ನಮ್ಮ ಸ್ವಾವಲಂಬನೆಯ ಆತ್ಮಸ್ಥೆರ್ಯ ಹೆಚ್ಚುತ್ತದೆ. ಯಕ್ಷಗಾನ ಹಾಗೂ ತಾಳಮದ್ದಳೆ ಇವುಗಳು ನಮ್ಮ ಮೂಲ ಪರಂಪರೆಯ ಕಲೆಯಾಗಿದ್ದು, ಇನ್ನೂ ಹೆಚ್ಚಿನ ಯಕ್ಷಗಾನ ಸಂಘಟನೆಗಳು ನಡೆಯಬೇಕೆಂದು ತಿಳಿಸಿದರು.

ದಾನಿಗಳಾದ ಅವರೆಮಾದಂಡ ಸುಗುಣ, ಮೂರ್ನಾಡು ಹಿರಿಯ ಪ್ರಾಥಮಿಕ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ದಿನೇಶ್, ಹಿರಿಯ ಯಕ್ಷಗಾನ ತಾಳಮದ್ದಳೆ ಕಲಾವಿದ ವಿನಾಯಕ ಹೆಗಡೆ, ವಿದ್ವಾನ್ ಪಂಡಿತ್ ಜನಾರ್ದನ್ ಭಟ್ ಹಾಜರಿದ್ದರು.

ಕಾರ್ಯಕ್ರವನ್ನು ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ.ಸುಕುಮಾರ್ ನಿರೂಪಿಸಿದರು. ಅನ್ನಪೂರ್ಣೆಶ್ವರಿ ಸಹಕಾರ ಪತ್ತಿನ ಸಹಕಾರ ಸಂಘದ ನಿರ್ದೇಶಕಿ ಬಿ.ಬಿ.ಜಯಂತಿ ಸ್ವಾಗತಿಸಿದರು. ಮೀನಾಕ್ಷಿ ಕೇಶವ ವಂದಿಸಿದರು. ಹೇಮ, ಲಿಖಿತ, ಸ್ವಪ್ನ, ಜ್ಞಾನೇಶ್, ಪ್ರಮೋದ್ ಕಾರ್ಯಕ್ರಮ ನಿರ್ವಹಿಸಿದರು.

ಹಿಮ್ಮೆಳದಲ್ಲಿ ಭಾಗವತರಾಗಿ ಗಜಾನನ ಹೆಗಡೆ ಕುಮಟಾ, ಮೃದಂಗವಾದಕರಾಗಿ ನಾಗಭೂಷಣ ಜೋಶಿ, ಚಂಡೆ ವಾದಕರಾಗಿ ನರಸಿಂಹ ಹೆಗಡೆ, ದುರ್ಯೋಧನನ ಪಾತ್ರದಲ್ಲಿ ಡಾ.ಮಹಭಲೇಶ್ವರ್ ಭಟ್, ಧರ್ಮರಾಯನ ಪಾತ್ರದಲ್ಲಿ ಪಂಡಿತ್ ಜನಾರ್ದನ್ ಭಟ್, ಭೀಮನ ಪಾತ್ರದಲ್ಲಿ ನಾಗಭೂಷಣ ಹೆಗಡೆ, ದ್ರೌಪತಿಯ ಪಾತ್ರದಲ್ಲಿ ಅನಂತ ಹೆಗಡೆ, ಅರ್ಜುನನ ಪಾತ್ರದಲ್ಲಿ ಪ್ರಮೋದ್ ಹೆಗಡೆ, ವಿದುರನ ಪಾತ್ರದಲ್ಲಿ ಗಜಾನನ ಹೆಗಡೆ, ಸಹದೇವನ ಪಾತ್ರದಲ್ಲಿ ಮಾನ್ಯ, ಕರ್ಣನ ಪಾತ್ರದಲ್ಲಿ ಗಣೇಶ್ ಭಟ್ ಕಾಣಿಸಿಕೊಂಡರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1620
Coovercolly Indresh

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು