News Karnataka Kannada
Saturday, May 04 2024
ಮಡಿಕೇರಿ

ಮಡಿಕೇರಿ: ದಸರಾ ಸಾಂಸ್ಕೖತಿಕ ಕಾಯ೯ಕ್ರಮಗಳಿಗೆ ಕಲಾ ತಂಡದಿಂದ ಅಜಿ೯ ಆಹ್ವಾನ

Art troupe invited for Dasara cultural activities
Photo Credit : By Author

ಮಡಿಕೇರಿ: ಮಡಿಕೇರಿ ದಸರಾ ಜನೋತ್ಸವ -2022 ರ ಸಾಂಸ್ಕೖತಿಕ ಸಮಿತಿ ವತಿಯಿಂದ 9 ದಿನಗಳ ವೈವಿಧ್ಯಮ ಸಾಂಸ್ಕೖತಿಕ ಕಾಯ೯ಕ್ರಮಗಳಿಗಾಗಿ ಕಲಾತಂಡಗಳಿಂದ ಅಜಿ೯ ಆಹ್ವಾನಿಸಲಾಗಿದೆ ಎಂದು ದಸರಾ ಸಾಂಸ್ಕೖತಿಕ ಸಮಿತಿ ಅಧ್ಯಕ್ಷ ಬಿ.ಎಂ.ಹರೀಶ್ ತಿಳಿಸಿದ್ದಾರೆ.

ನಗರದ ಗಾಂಧಿ ಮೈದಾನದಲ್ಲಿ ಸೆ.26 ರಿಂದ 9 ದಿನಗಳ ಕಾಲ ನಡೆಯುವ ಸಾಂಸ್ಕೖತಿಕ ಕಾಯ೯ಕ್ರಮಗಳಿಗಾಗಿ ನಾಡಿನ ಕಲಾತಂಡ, ಕಲಾವಿದರಿಂದ ವೈವಿಧ್ಯಮಯ ಕಾಯ೯ಕ್ರಮಗಳಿಗಾಗಿ ಅಜಿ೯ ಆಹ್ವಾನಿಸಲಾಗಿದೆ.

ಕಲಾತಂಡ, ಕಲಾವಿದರು ತಾವು ಪ್ರದಶ೯ನ ನೀಡಲಿರುವ ಕಲಾಪ್ರಕಾರ, ಅಗತ್ಯವಿರುವ ಅವಧಿಯ ಮಾಹಿತಿಯೊಂದಿಗೆ ತಮ್ಮ ಪೂಣ೯ ವಿಳಾಸ, ದೂರವಾಣಿ ಸಂಖ್ಯೆಯೊಂದಿಗೆ ಅಜಿ೯ಗಳನ್ನು ಸೆಪ್ಟಂಬರ್ 15 ರೊಳಗಾಗಿ ಅಧ್ಯಕ್ಷರು, ಮಡಿಕೇರಿ ದಸರಾ ಸಾಂಸ್ಕೖತಿಕ ಸಮಿತಿ, ನಗರಸಭಾ ಕಛೇರಿ, ಮಡಿಕೇರಿ-571201 ಇಲ್ಲಿಗೆ ಕಳುಹಿಸಬೇಕು. ಅರ್ಜಿಯನ್ನು madikeridasara@gmail.com ಮೇಲ್ ಮೂಲಕ ಕೂಡ ಕಳುಹಿಸಬಹುದು.  ಅನಂತರ ಬಂದ ಅಜಿ೯ಗಳನ್ನು ಪರಿಗಣಿಸಲಾಗುವುದಿಲ್ಲ.

ಒಂದು ಕಲಾತಂಡಕ್ಕೆ , ಕಲಾವಿದರಿಗೆ ಮಡಿಕೇರಿ ದಸರಾ ಸಾಂಸ್ಕೖತಿಕ ಕಾಯ೯ಕ್ರಮಗಳ 9 ದಿನಗಳ ಪೈಕಿ ಒಂದು ಬಾರಿ ಮಾತ್ರ ಪ್ರದಶ೯ನ ನೀಡಲು ಅವಕಾಶ ಇದೆ. ಸೋಲೋ ಹಾಡು ಅಥವಾ ನೃತ್ಯಕ್ಕೆ ಅವಕಾಶ ಇಲ್ಲ. ಒಂದು ತಂಡದಲ್ಲಿ ಕನಿಷ್ಟ 4 ಮಂದಿ ಇರಬೇಕು.

ಕಲಾತಂಡಗಳ ಆಯ್ಕೆಯಲ್ಲಿ ಮಡಿಕೇರಿ ದಸರಾ ಸಾಂಸ್ಕೖತಿಕ ಸಮಿತಿ ಆಯ್ಕೆಯೇ ಅಂತಿಮವಾಗಿದೆ ಎಂದೂ ಹರೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1620
Coovercolly Indresh

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು