ಮಡಿಕೇರಿ: ಮಡಿಕೇರಿ ನಗರಸಭಾ ಶಾಲೆಯ ವಿದ್ಯಾರ್ಥಿಗಳಿಗೆ ರೋಟರಿ ಮಡಿಕೇರಿ ವತಿಯಿಂದ ಪುಸ್ತಕಗಳು ಮತ್ತು ಶೈಕ್ಷಣಿಕ ಪರಿಕರಗಳನ್ನು ವಿತರಿಸಲಾಯಿತು.
ರೋಟರಿಯನ್ ಅನಂತ ಸುಬ್ಬರಾವ್ ಪುಸ್ತಕಗಳನ್ನು ಹಾಗೂ ರೋಟರಿಯನ್ ಡಾ.ಜಿ.ಪಾಟ್ಕರ್ ಇಬ್ಬರು ಶಿಕ್ಷಕರಿಗೆ ಮಾಸಿಕ ಗೌರವಧನ ನೀಡಿದರು.
ರೋಟರಿ ಅಧ್ಯಕ್ಷ ಕೆ.ಸಿ.ಕಾರ್ಯಪ್ಪ, ಕಾರ್ಯದರ್ಶಿ ಸುದಯ್ ನಾಣಯ್ಯ, ವಲಯ ಲೆಫ್ಟಿನೆಂಟ್ ಎನ್.ಡಿ.ಅಚ್ಚಯ್ಯ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.