News Karnataka Kannada
Monday, April 29 2024
ಮಡಿಕೇರಿ

ಮಡಿಕೇರಿ: ವಸತಿ ಯೋಜನೆಗಳಡಿ ಮಂಜೂರಾಗಿರುವ 2852 ಮನೆಗಳಲ್ಲಿ ಕೇವಲ 81 ಮನೆ ನಿರ್ಮಾಣ

Madikeri: Out of 2,852 houses sanctioned under housing schemes, only 81 houses were constructed in Madikeri.
Photo Credit : By Author

ಮಡಿಕೇರಿ, ಡಿ.27: ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ ವಿವಿಧ ವಸತಿ ಯೋಜನೆಗಳಡಿ ಮಂಜೂರಾಗಿರುವ 2852 ಮನೆಗಳಲ್ಲಿ ಇಲ್ಲಿಯವರೆಗೆ ಕೇವಲ 81 ಮಾತ್ರ ಪೂರ್ಣಗೊಂಡು, 1008 ಮನೆಗಳು ವಿವಿಧ ಹಂತಗಳಲ್ಲಿರುವ ಮಾಹಿತಿಯನ್ನು ಸರ್ಕಾರ ಅಧಿವೇಶನದಲ್ಲಿ ನೀಡಿದೆ. ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಅವರ ಪ್ರಶ್ನೆಗೆ ಉತ್ತರ ನೀಡಿದ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ ಬಸವ ವಸತಿ ಯೋಜನೆಯಡಿ 1846 ಮನೆಗಳು ಮಂಜೂರಾಗಿದ್ದು, ಇದರಲ್ಲಿ 48 ಮನೆಗಳು ಪೂರ್ಣಗೊಂಡಿದ್ದು, 777 ಮನೆಗಳ ನಿರ್ಮಾಣ ಪ್ರಗತಿಯಲ್ಲಿದೆ. 1008 ಮನೆಗಳ ನಿರ್ಮಾಣ ಇನ್ನೂ ಆರಂಭವಾಗಬೇಕಿದ್ದು, 13 ಮನೆಗಳ ನಿರ್ಮಾಣವನ್ನು ತಡೆಹಿಡಿಯಲಾಗಿದೆ ಎಂದರು.

ಡಾ.ಬಿ.ಆರ್.ಅಂಬೇಡ್ಕರ್ ನಿವಾಸ್ ಯೋಜನೆಯಡಿ(ಗ್ರಾಮೀಣ) ಮಂಜೂರಾದ 654 ಮನೆಗಳಲ್ಲಿ 8 ಮನೆಗಳಷ್ಟೆ ಪೂರ್ಣವಾಗಿದ್ದು, 173 ವಿವಿಧ ಹಂತಗಳಲ್ಲಿದ್ದು, 7 ಮನೆಗಳನ್ನು ತಡೆಹಿಡಿಯಲಾಗಿದೆ. ದೇವರಾಜ ಅರಸು ಯೋಜನೆಯಡಿ(ಗ್ರಾಮೀಣ) 5 ಮನೆಗಳು ಮಂಜೂರಾಗಿದ್ದು, 1 ಮನೆ ಪೂರ್ಣವಾಗಿದೆ, 4 ಮನೆಗಳ ನಿರ್ಮಾಣ ಪ್ರಾರಂಭವಾಗಬೇಕಿದೆ.

ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ(ಗ್ರಾಮೀಣ) 2 ಮನೆ ಮಂಜೂರಾಗಿದ್ದು, 1 ಮನೆ ಪೂರ್ಣವಾಗಿದ್ದರೆ ಮತ್ತೊಂದು ಮನೆ ಪ್ರಗತಿಯಲಿದೆ. ಗ್ರಾಮೀಣ ಭಾಗದಲ್ಲಿ ಒಟ್ಟು ಮಂಜೂರಾದ 2507 ಮನೆಗಳಲ್ಲಿ 58 ಮನೆಗಳು ಪೂರ್ಣವಾಗಿದ್ದರೆ, 951 ಪ್ರಗತಿಯಲ್ಲಿದೆ. 1478 ಮನೆಗಳ ನಿರ್ಮಾಣ ಇನ್ನಷ್ಟೆ ಪ್ರಾರಂಭವಾಗಬೇಕಿದೆ.

ವಾಜಪೇಯಿ ನಗರ ವಸತಿ ಯೋಜನೆಯಡಿ 143 ಮನೆಗಳು ಮಂಜೂರಾಗಿದ್ದು, ಯಾವುದೇ ಮನೆಗಳು ಪೂರ್ಣವಾಗಿಲ್ಲ. 19 ಮನೆಗಳು ಪ್ರಗತಿಯಲ್ಲಿದೆ. 124 ಮನೆಗಳ ನಿರ್ಮಾಣ ಇನ್ನಷ್ಟೆ ಆಗಬೇಕಾಗಿದೆ. ಡಾ. ಬಿ.ಆರ್. ಅಂಬೇಡ್ಕರ್ ನಿವಾಸ್(ನಗರ) ಯೋಜನೆಯಲ್ಲಿ ಮಂಜೂರಾದ 52 ಮನೆಗಳಲ್ಲಿ ಯಾವುದೂ ಪೂರ್ಣವಾಗಿಲ್ಲ. 8 ಮನೆಗಳಷ್ಟೆ ವಿವಿಧ ಹಂತಗಳಲ್ಲಿದ್ದು, 44 ಮನೆಗಳ ನಿರ್ಮಾಣವಾಗಬೇಕಾಗಿದೆ.ಪ್ರಧಾನ ಮಂತ್ರಿ ಆವಾಸ್(ನಗರ) ಯೋಜನೆಯಡಿ 150 ಮನೆಗಳು ಮಂಜೂರಾಗಿದ್ದರೆ, 23 ಪುರ್ಣವಾಗಿದೆ. 30 ಮನೆಗಳು ವಿವಿಧ ಹಂತಗಳಲ್ಲಿದ್ದು, 97 ಆರಂಭವಾಗಬೇಕಾಗಿದೆಯಷ್ಟೆ. ಒಟ್ಟಾಗಿ ನಗರ ಪ್ರದೇಶಕ್ಕೆ ಮಂಜೂರಾದ 345 ಮನೆಗಳಲ್ಲಿ 23 ಪೂರ್ಣವಾಗಿದ್ದರೆ, 57 ವಿವಿಧ ಹಂತಗಳಲ್ಲಿದ್ದು, 265 ಮನೆಗಳ ನಿರ್ಮಾಣ ಇನ್ನಷ್ಟೆ ನಡೆಯಬೇಕಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1620
Coovercolly Indresh

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು