News Karnataka Kannada
Friday, May 03 2024
ಮಡಿಕೇರಿ

ಮಡಿಕೇರಿ: ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾವಳಿಯ ವಿಜೇತರ ಪಟ್ಟಿ ಪ್ರಕಟ

table tennis
Photo Credit :

ಮಡಿಕೇರಿ: ಕೊಡಗು ಟೇಬಲ್ ಟೆನ್ನಿಸ್ ಅಸೋಸಿಯೇಷನ್ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಒಳಾಂಗಣ ಕ್ರೀಡಾಂಗಣದಲ್ಲಿ ನಾಲ್ಕು ದಿನಗಳ ಕಾಲ ನಡೆದ ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾವಳಿಯ ವಿಜೇತರ ಪಟ್ಟಿ ಪ್ರಕಟವಾಗಿದೆ.

ಸಬ್ ಜೂನಿಯರ್ ಬಾಲಕರ ವಿಭಾಗದಲ್ಲಿ ಸಹದ್ ಪ್ರಥಮ, ಐಜಾನ್ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಸಬ್ ಜೂನಿಯರ್ ಬಾಲಕಿರ ವಿಭಾಗದಲ್ಲಿ ಶೀಫ ಪ್ರಥಮ, ಬಿನಿಷ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.ಸಬ್ ಜೂನಿಯರ್(ಪದವಿ ಹಾಗೂ ಪದವಿ ಪೂರ್ವ) ಹುಡುಗರ ವಿಭಾಗದಲ್ಲಿ ಪ್ರಜ್ವಲ್ ಪ್ರಥಮ, ಚೇತನ್ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಬಾಲಕರ ಡಬಲ್ಸ್ ವಿಭಾಗದಲ್ಲಿ ಚೇತನ ಹಾಗೂ ಪ್ರಜ್ವಲ್ ಪ್ರಥಮ, ತುಷಾರ್ ಹಾಗೂ ಆಶಿನ್ ದ್ವಿತೀಯ, ಬಾಲಕಿಯರ್ ಸಿಂಗಲ್ಸ್‍ನಲ್ಲಿ ಎನ್.ಬಿ.ಪೂಜಾ ಪ್ರಥಮ, ತನ್ವಿಕಾ ದ್ವಿತೀಯ, ಬಾಲಕಿಯ ಡಬಲ್ಸ್ ವಿಭಾಗದಲ್ಲಿ ಅನುಷಾ, ಪೂಜಾ ಪ್ರಥಮ, ತನ್ವಿಕ, ಅಮೃತ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಬಾಲಕ ಹಾಗೂ ಬಾಲಕಿರ ಡಬಲ್ಸ್ ವಿಭಾಗದಲ್ಲಿ ವಿಧಿಶ, ಶಶಾಂಕ್ ಪ್ರಥಮ, ಅನನ್ಯ ಹಾಗೂ ಪುನೀತ್ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಪುರುಷರ ವಿಭಾಗದಲ್ಲಿ ಪಿ.ಎಲ್.ಮಂಜುನಾಥ್ ಪ್ರಥಮ, ಡೆರಿಕ್ ಡಿಸೋಜಾ ದ್ವಿತೀಯ, ಪುರುಷರ ಡಬಲ್ಸ್‍ನಲ್ಲಿ ಆಕಾರ್‍ಶ್ ಪ್ರಥಮ, ಪಿ.ಎಲ್.ಮಂಜುನಾಥ್ ಹಾಗೂ ರಾಮ್ ದೇವ್ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಮಹಿಳಾ ವಿಭಾಗದಲ್ಲಿ ರೀನಾ ಪ್ರಥಮ, ನಮಿತಾ ದ್ವಿತೀಯ, ಮಹಿಳಾ ಡಬಲ್ಸ್‍ನಲ್ಲಿ ನಮಿತಾ, ಪೂಜಾ ಪ್ರಥಮ, ಎನ್.ಬಿ.ಪುಜಾ, ಲ್ಯಾಕ್‍ಮಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಮಿಕ್ಸ್ ಡಬಲ್ಸ್ ವಿಭಾಗದಲ್ಲಿ ಪಿ.ಎಲ್.ಮಂಜುನಾಥ್, ರೀನಾ ಪ್ರಥಮ, ರಚನ್ ಪೊನ್ನಪ್ಪ, ನಮಿತಾ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ವೆಟರೆನ್ಸ್ ವಿಭಾಗದಲ್ಲಿ ಭಾಗವಹಿಸಿದ ಎಲ್ಲರನ್ನು ಜಂಟಿ ವಿಜೇತರೆಂದು ಘೋಷಿಸಿ ಪ್ರಶಸ್ತಿ ನೀಡಲಾಯಿತು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1620
Coovercolly Indresh

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು