News Karnataka Kannada
Thursday, May 09 2024
ಮಡಿಕೇರಿ

ಮಡಿಕೇರಿ: ಸೆ.೨೯ ರಂದು ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘದ ಸಾಂಬಾರ ಪದಾರ್ಥಗಳ ಮಳಿಗೆ ಉದ್ಘಾಟನೆ

Yelakki
Photo Credit : By Author

ಮಡಿಕೇರಿ: ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘದ ಸಾಂಬಾರ ಪದಾರ್ಥಗಳ ಮಳಿಗೆಯ ಉದ್ಘಾಟನೆ ಹಾಗೂ ಸನ್ಮಾನ ಕಾರ್ಯಕ್ರಮ ಸೆ.೨೯ ರಂದು ನಡೆಯಲಿದೆ.

ಅಂದು ಬೆಳಗ್ಗೆ ೧೧ ಗಂಟೆಗೆ ಸಂಘದ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಮಳಿಗೆಯನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಮಾಜಿ ಸಚಿವ ಎಂ.ಸಿ.ನಾಣಯ್ಯ ಉದ್ಘಾಟಿಸಲಿದ್ದಾರೆ.

ಏಲಕ್ಕಿ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಸೂದನ ಎಸ್.ಈರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಪಾಲ್ಗೊಳ್ಳಲಿದ್ದು, ಅತಿಥಿಗಳಾಗಿ ನಗರಸಭಾ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಸದಸ್ಯರುಗಳಾದ ರಾಜೇಶ್ ಯಲ್ಲಪ್ಪ, ಎಸ್.ಸಿ.ಸತೀಶ್, ಸಹಕಾರ ಸಂಘಗಳ ಉಪನಿಬಂಧಕ ಹೆಚ್.ಎನ್.ರಮೇಶ್, ಸಂಬಾರ ಮಂಡಳಿಯ ಸಹಾಯಕ ನಿರ್ದೇಶಕ ಎಸ್.ಎಸ್.ಬಿಜು
ಹಾಗೂ ಸಹಕಾರ ಸಂಘಗಳ ಸಹಾಯಕ ನಿಬಂಧಕ ಎಂ.ಈ.ಮೋಹನ್ ಉಪಸ್ಥಿತರಿರುವರು.

ಕಾರ್ಯಕ್ರಮದಲ್ಲಿ ಸಂಘದ ಮಾಜಿ ಅಧ್ಯಕ್ಷರುಗಳಾದ ಹುದೇರಿ ಬಿ.ರಾಜೇಂದ್ರ, ಮುದ್ದಂಡ, ಬಿ.ದೇವಯ್ಯ, ಮಾಚೇಟಿರ ಚೋಟು ಕಾವೇರಪ್ಪ ಹಾಗೂ ಬಿ.ಈ.ಬೋಪಯ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು.

ಸಂಘದಲ್ಲಿ ಕಳೆದ ೩೫-೪೦ ವರ್ಷಗಳಿಂದ ಸ್ಥಗಿತಗೊಂಡಿದ್ದ ಏಲಕ್ಕಿ ಮಾರಾಟ ವ್ಯವಹಾರವನ್ನು ಕಳೆದ ವರ್ಷದಿಂದ ಆರಂಭಗೊಳಿಸಲಾಗಿದ್ದು, ಏಲಕ್ಕಿ ಹಾಗೂ ಇನ್ನಿತರ ಸಾಂಬಾರ ಬೆಳೆಗಾರರಿಗೆ ಉತ್ತಮದರ
ದೊರಕಿಸಿ ಕೊಡುವುದು, ಏಲಕ್ಕಿ ಮತ್ತು ಕರಿಮೆಣಸು ಸಂಘದ ಮೂಲಕ ಖರೀದಿಸುವುದು ಹಾಗೂ ಠೇವಣಿ ಇಟ್ಟುಕೊಂಡು ಉತ್ತಮ ದರಕ್ಕೆ ಮಾರಾಟ ಮಾಡಿ ಬೆಳೆಗಾರರಿಗೆ ಅನುಕೂಲ ಮಾಡಿಕೊಡುವ ಪ್ರಯತ್ನ
ಸಂಘದ್ದಾಗಿದೆ ಎಂದು ಅಧ್ಯಕ್ಷ ಸೂದನ ಎಸ್.ಈರಪ್ಪ ತಿಳಿಸಿದ್ದಾರೆ.

ಏಲಕ್ಕಿ ಮತ್ತು ಕರಿಮೆಣಸನ್ನು ಸಂಘದ ಮೂಲಕ ಖರೀದಿಸುವುದು ಹಾಗೂ ಠೇವಣಿ ಇಟ್ಟುಕೊಂಡು ಉತ್ತಮ ದರಕ್ಕೆ ಮಾರಾಟ ಮಾಡಿ ಬೆಳೆಗಾರರಿಗೆ ಅನುಕೂಲ ಕಲ್ಪಿಸುವ ಪ್ರಯತ್ನ ಮಾಡಲಾಗುತ್ತಿದೆ.

ಬೆಳೆಗಾರ ಮತ್ತು ಗ್ರಾಹಕರಿಗೆ ಸಂಘ ಕೊಂಡಿಯಾಗಿದ್ದು, ಬೆಳೆಗಾರರನ್ನು ವಂಚಿಸುವ ವ್ಯಾಪಾರಿಗಳಿಗೆ ಕಡಿವಾಣ ಹಾಕಲು ಮುಂದಾಗುತ್ತೇವೆ. ಅಲ್ಲದೆ ಕೊಡಗಿನ ಇತರ ಉತ್ಪನ್ನಗಳನ್ನು ಗುಣಮಟ್ಟದೊಂದಿಗೆ
ಯಾವುದೇ ಕಲಬೆರಕೆ ಇಲ್ಲದೆ ನೇರವಾಗಿ ಗ್ರಾಹಕರಿಗೆ ತಲುಪಿಸುವಂತಾಗಲೂ ಸಂಘ ಯತ್ನಿಸುತ್ತಿದೆ ಎಂದು ಸೂದನ ಎಸ್.ಈರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1620
Coovercolly Indresh

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು