Categories: ಮಡಿಕೇರಿ

ಬಿಟ್ಟಂಗಾಲ: ಯುವತಿಯನ್ನು ಹತ್ಯೆ ಮಾಡಿದ ಆರೋಪಿಯ ಮೃತ ದೇಹ ಕೆರೆಯಲ್ಲಿ ಪತ್ತೆ

ಬಿಟ್ಟಂಗಾಲ: ಕಳೆದ ಭಾನುವಾರ ರಾತ್ರಿ ಬಿಟ್ಟಂಗಾಲ ಸಮೀಪದ ನಾಂಗಾಲ ಗ್ರಾಮದಲ್ಲಿ ಆರತಿ ಎಂಬಾಕೆಯನ್ನು ಹತ್ಯೆ ಮಾಡಿದ ಆರೋಪಿ ಕಂಡಂಗಾಲ ಗ್ರಾಮದ ಟವಿ ತಿಮ್ಮಯ್ಯನ ಮೃತ ದೇಹ 1ನೇ ರುದ್ರಗುಪ್ಪೆಯ ಕೆರೆಯಲ್ಲಿ ತಡ ರಾತ್ರಿ ಪತ್ತೆಯಾಗಿದೆ. ಈತನೇ ಹಂತಕ ಎನ್ನುವ ಅನುಮಾನಕ್ಕೆ ಕಾರಣ.

ಬೆಂಗಳೂರಿನಲ್ಲಿ ಐಟಿ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದ ಆರತಿ ಇತ್ತೀಚಿಗೆ ಪೊಲೀಸ್ ಇಲಾಖೆಗೆ ನೇಮಕಗೊಂಡಿದ್ದಳು. ಹೊಸ ನೌಕರಿ ದೊರೆತ ಸಂಭ್ರಮದಲ್ಲಿದ್ದ ಈಕೆಗೆ ಟವಿ ತಿಮ್ಮಯ್ಯ ಹತ್ಯೆ ಮಾಡುವ ಮೂರು ದಿನಗಳಿಂದ ಕಿರುಕುಳ ನೀಡುತ್ತಿದ್ದ ಅಲ್ಲದೇ ಈತನೇ ಕೊಲೆಯಾಗಿರುವ ಆರತಿಯ ಮೊಬೈಲ್ ಗೆ ಕೊನೆಯ ಕರೆ ಮಾಡಿದವನಾಗಿದ್ದಾನೆ ಎಂದು ಹೇಳಲಾಗಿದೆ. ಆರತಿ ಕೊಲೆಯಾಗಿರುವ ಸ್ಥಳದಿಂದ ತುಸು ದೂರದಲ್ಲಿ ಟವಿ ತಿಮ್ಮಯ್ಯನ ಹೆಲ್ಮೆಟ್ ದೊರೆತಿದೆ.

ಅನುಮಾನದಿಂದ ಪೊಲೀಸರು ಕಂಡಂಗಾಲದಲ್ಲಿರುವ ಮನೆಯವರನ್ನು ವಿಚಾರಿಸಿದಾಗ ಈತ ಮನೆಯಿಂದ ಹೆಲ್ಮೆಟ್ ನೊಂದಿಗೆ ಹೋದವನು ಹಿಂತಿರುಗಿ ಬಂದಾಗ ಹೆಲ್ಮೆಟ್ ಇರಲಿಲ್ಲ ಎಂಬ ಮಾಹಿತಿ ಲಭಿಸಿದೆ. ಈ ಎಲ್ಲಾ ಅಂಶಗಳು ಈತನೇ ಆರತಿಯನ್ನು ಹತ್ಯೆ ಮಾಡಿರಬಹುದು ಎಂಬ ಅನುಮಾನದ ಹುತ್ತ ಸುತ್ತಲಾರಾಂಭಿಸಿದೆ.

ತನಿಖೆಯ ಜಾಡು ಹಿಡಿದ ಪೊಲೀಸರಿಗೆ 1ನೇ ರುದ್ರಗುಪ್ಪೆಯ ಕೆರೆಯ ಬಳಿ ಟವಿಯ ಮೊಬೈಲ್, ಪಾದರಕ್ಷೆ, ಖಾಲಿ ಮದ್ಯದ ಬಾಟಲಿ ಹಾಗೂ ಅರ್ಧ ಖಾಲಿಯಾಗಿರುವ ವಿಷದ ಬಾಟಲಿ ಕಂಡುಬಂದಿದೆ. ಆರತಿಯನ್ನು ಕೊಲೆ ಮಾಡಿದ ನಂತರ ಗಡಿಬಿಡಿಯಲ್ಲಿ ಹೆಲ್ಮೆಟ್ ನ್ನು ಅಲ್ಲಿಯೇ ಬಿಟ್ಟು ಹಿಂತಿರುಗಿ ಬಂದು ಮದ್ಯದೊಂದಿಗೆ ವಿಷ ಬೆರೆಸಿ ಸೇವಿಸಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿತ್ತು.

ಈತನಿಗಾಗಿ ಎರಡು ದಿನಗಳಿಂದ ಕೆರೆಯಲ್ಲಿ ಶೋಧಕಾರ್ಯ ನಡೆಸಲಾಯಿತಾದರೂ ಪ್ರಯೋಜನವಾಗಿರಲಿಲ್ಲ. ನೆನ್ನೆ ಕೆರೆಯ ನೀರನ್ನು ಖಾಲಿ ಮಾಡಿ ಕಾರ್ಯಾಚರಣೆ ನಡೆಯಿಸಿದಾಗ ತಡ ರಾತ್ರಿ ಮೃತ ದೇಹ ಪತ್ತೆಯಾಗಿದೆ. ಈತ ಆರತಿಯನ್ನು ಕೊಲೆ ಮಾಡಿದ ನಂತರ ಮದ್ಯದೊಂದಿಗೆ ವಿಷ ಬೆರೆಸಿ ಸೇವಿಸಿದ ನಂತರ ಕೆರೆಗೆ ಹಾರಿ ಇಹಲೋಕ ತ್ಯಜಿಸಿದ್ದಾನೆ.

Gayathri SG

Recent Posts

ಇಂದು 8 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್, 23 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ

ರಾಜ್ಯದ ಕೆಲವಡೆ ಬಾರಿ ಮಳೆಯಾಗುವ ಸಾಧ್ಯತೆ ಇರುವ ಕಾರಣ ಹವಮಾನ ಇಲಾಖೆ 8 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್, 23 ಜಿಲ್ಲೆಗಳಿಗೆ…

20 mins ago

ಇಂದು ತಾಯಂದಿರ ದಿನ : ಈ ದಿನದ ಮಹತ್ವ ,ಹಿನ್ನೆಲೆ ಏನು?

ತಾಯಂದಿರ ದಿನ , ತಾಯಂದಿರ ಗೌರವಾರ್ಥ ರಜಾದಿನವನ್ನು ವಿಶ್ವದಾದ್ಯಂತ ದೇಶಗಳಲ್ಲಿ ಆಚರಿಸಲಾಗುತ್ತದೆ. ಅದರ ಆಧುನಿಕ ರೂಪದಲ್ಲಿ ರಜಾದಿನವು ಹುಟ್ಟಿಕೊಂಡಿತುಯುನೈಟೆಡ್ ಸ್ಟೇಟ್ಸ್…

38 mins ago

ಇಂದಿನ ರಾಶಿ ಫಲ : ಯಾರಿಗೆ ಶುಭ, ಯಾರಿಗೆ ಅಶುಭ

ವಾರದ ಆರಂಭದಲ್ಲೇ ಶುಭ ಸುದ್ದಿ. ಮನೆಯಲ್ಲಿ ಕಾರ್ಯಕ್ರಮಗಳು ನಡೆಯಲಿದೆ. ಉದ್ಯೋಗಿಗಳಿಗೆ ಒತ್ತಡ ಹೆಚ್ಚಲಿದ್ದು, ವಾರಾಂತ್ಯದಲ್ಲಿ ಎಲ್ಲವೂ ಸರಿದೂಗಲಿದೆ. ಕಾರ್ಮಿಕರಿಗೆ ಲಾಭ.…

52 mins ago

ಇಂದು ಶಂಕರ ಜಯಂತಿ : ಶಂಕರಾಚಾರ್ಯರ ಕುರಿತ ಕುತೂಹಲಕರ ಸಂಗತಿಗಳು ಇಲ್ಲಿವೆ

ಹೆಸರೇ ಸೂಚಿಸುವಂತೆ, ಆದಿ ಶಂಕರ ಜಯಂತಿಯನ್ನು ಭಾರತೀಯ ತತ್ವಜ್ಞಾನಿ ಮತ್ತು ದೇವತಾಶಾಸ್ತ್ರಜ್ಞ ಆದಿ ಶಂಕರರ ಜನ್ಮದಿನದ ಸವಿ ನೆನಪಿಗಾಗಿ ಆಚರಿಸಲಾಗುತ್ತದೆ.…

1 hour ago

ರಿಚರ್ಡ್‌ ಹ್ಯಾನ್ಸೆನ್‌ಗೆ ಸೆಲ್ಕೋದ ಪ್ರತಿಷ್ಠಿತ ʼಸೂರ್ಯಮಿತ್ರʼ ಪ್ರಶಸ್ತಿ

ಅಭಿವೃದ್ಧಿಶೀಲ ರಾಷ್ಟ್ರಗಳ ಗ್ರಾಮೀಣ ಪ್ರದೇಶಗಳಲ್ಲಿ ಸೌರವಿದ್ಯುತ್ ಸೌಲಭ್ಯವನ್ನು ಹೆಚ್ಚಿಸಲು, ಆಧುನಿಕ ಫೋಟೋ ವೋಲ್ಟಾಯಿಕ್‌ (ಪಿವಿ) ತಂತ್ರಜ್ಞಾನವನ್ನು ಮೈಕ್ರೋ ಫೈನಾನ್ಸ್ ಸಂ‍ಸ್ಥೆಗಳ…

9 hours ago

ಜಿಯೋ ಬಂಪರ್‌ ಆಫರ್‌ : 15 ಒಟಿಟಿ ಆ್ಯಪ್ಲಿಕೇಷನ್‌ ಜೊತೆ ಅನ್‌ಲಿಮಿಟೆಡ್ ಡೇಟಾ ಪ್ಲಾನ್

ಜಿಯೋ ಇದೀಗ ಮತ್ತೊಂದು ಹೊಚ್ಚ ಹೊಸ ಪ್ಲಾನ್ ಘೋಷಿಸಿದೆ. ನೆಟ್‌ಫ್ಲಿಕ್ಸ್‌ನ ಬೇಸಿಕ್ ಪ್ಲಾನ್, ಅಮೆಜಾನ್ ಪ್ರೈಮ್ ಸೇರಿದಂತೆ 15 ಒಟಿಟಿ…

9 hours ago