Categories: ಮೈಸೂರು

ಮೈಸೂರಿನ ಕೆ.ಆರ್.ಕ್ಷೇತ್ರದ ಏಳು ಉದ್ಯಾನಗಳ ಅಭಿವೃದ್ಧಿಗೆ ಚಾಲನೆ

ಮೈಸೂರು: ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಉದ್ಯಾನವನಗಳ ಸಮಗ್ರ ಅಭಿವೃದ್ಧಿಗೆ ಕಾರ್ಯಯೋಜನೆ ಸಿದ್ದಗೊಂಡಿದ್ದು, ಆ ಪೈಕಿ  ಏಳು ಉದ್ಯಾನವನಗಳ ಅಭಿವೃದ್ಧಿಗೆ ಶಾಸಕ ಎಸ್.ಎ.ರಾಮದಾಸ್ ಚಾಲನೆ ನೀಡಿದ್ದಾರೆ.

ಕ್ಷೇತ್ರದ ವಾರ್ಡ್  ನಂಬರ್ 55ರ ಚಾಮುಂಡಿಪುರಂ ಭಾಗದ ತಗಡೂರು ರಾಮಚಂದ್ರ ಉದ್ಯಾನವನ, ಶಂಕರನಾರಾಯಣ ಸ್ವಾಮಿ ದೇವಸ್ಥಾನದ ಎದುರು ಇರುವ ಉದ್ಯಾನವನ, ವಾರ್ಡ್ ನಂಬರ್ 51ರ ಅಗ್ರಹಾರ ಭಾಗದ ರಾಮಾನುಜ ರಸ್ತೆ 10ನೇ ಕ್ರಾಸ್‌ನಲ್ಲಿರುವ ಉದ್ಯಾನವನ, ಗನ್ ಹೌಸ್ ವೃತ್ತದ ಬಳಿ ಇರುವ ಬಸವೇಶ್ವರ ಉದ್ಯಾನವನ, ವಿಶ್ವಮಾನವ ಕುವೆಂಪು ಉದ್ಯಾನವನ, ವಾರ್ಡ್ ನಂಬರ್ 52ರ ಇಟ್ಟಿಗೆಗೂಡು ಭಾಗದ ಕರಗ ದೇವಸ್ಥಾನದ ಎದುರಿರುವ ಉದ್ಯಾನವನ, ಕೆಸಿ ನಗರ ಭಾಗದಲ್ಲಿರುವ ಜೋಡಿ ಉದ್ಯಾನವನಕ್ಕೆ ಶಾಸಕ ರಾಮದಾಸ್ ಭೂಮಿಪೂಜೆ ನೆರವೇರಿಸಿದರು.

ಈ ವೇಳೆ ಮಾತನಾಡಿದ ಶಾಸಕ ಎಸ್.ಎ.ರಾಮದಾಸ್, ಕ್ಷೇತ್ರದಲ್ಲಿ 16 ಪಾರ್ಕ್‌ಗಳನ್ನು ವಿಷಯಾಧಾರಿತ ಪಾರ್ಕ್‌ಗಳಾಗಿ ನಿರ್ಮಾಣ ಮಾಡಲಾಗಿದೆ. ಯೋಗ, ಆರೋಗ್ಯ, ಕನಕದಾಸ, ವಿeನ, ಬಸವೇಶ್ವರ ಸೇರಿದಂತೆ ವಿವಿಧ ವಿಚಾರಗಳನ್ನು ಸಮಾಜಕ್ಕೆ ನೀಡುವ ದೃಷ್ಟಿಯಿಂದ ಯೋಜನೆ  ಕೈಗೊಳ್ಳಲಾಗಿದೆ ಎಂದು ಹೇಳಿದರು.

ಏಳು ಉದ್ಯಾನವನಗಳ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಮುಂದಿನ 2 ತಿಂಗಳಲ್ಲಿ ಈ ಉದ್ಯಾನವನಗಳು ಅಭಿವೃದ್ಧಿ ಆಗಲಿವೆ. ಉದ್ಯಾನವನ  ಅಭಿವೃದ್ಧಿಯೊಂದಿಗೆ ಅದರ ನಿರ್ವಹಣೆಯೂ ಕೂಡ ಮುಖ್ಯವಾಗಿದೆ. ಅಪ್ಪು ಹಾಗೂ ಅವರ ತಂಡ ಈ ಭಾಗದ ಉದ್ಯಾನವನ ನಿರ್ವಹಣೆ ಮಾಡಲಿದೆ. ಅಭಿವೃದ್ಧಿ, ಹಸಿರೀಕರಣ ಹಾಗೂ ವ್ಯಾಯಾಮಕ್ಕೆ ಅನುಕೂಲ ಆಗುವ ಗುರಿ ನಮ್ಮದಾಗಿದೆ ಎಂದು ತಿಳಿಸಿದರು.

ಈ ವೇಳೆ ನಗರಪಾಲಿಕೆ  ಸದಸ್ಯರಾದ ಮಾವಿ ರಾಮಪ್ರಸಾದ್, ಬಿ.ವಿ.ಮಂಜುನಾಥ್, ಛಾಯಾದೇವಿ, ಮುಖಂಡರಾದ ಪುರುಷೋತ್ತಮ, ಶಿವಪ್ಪ, ಬಾಲಕೃಷ್ಣ, ವಿದ್ಯಾಅರಸ್, ಉಮಾಶಂಕರ್, ಸಂದೀಪ್, ಕಿರಣ, ವಿಜಯಾ, ಬೇಬಿ, ಪವನ್, ವಿನಯ, ಮಲ್ಲಿಕಾರ್ಜುನ, ಮುರುಳಿ, ಧರ್ಮೇಂದ್ರ, ಶಾಂತ, ಮಂಜುನಾಥ್, ರಾಜಕುಮಾರ್, ಮಹೇಶ್, ಶಿವು, ಚಂದ್ರು, ನಂಜಪ್ಪ, ನಂಜುಂಡಸ್ವಾಮಿ, ಪ್ರಸನ್ನ, ಗೋಕುಲ, ನವೀನ್, ಹರೀಶ್, ಸುಂದರ್, ಸೋಮು, ಅಪ್ಪು, ದಾಮೋದರ್, ಸುಬ್ರಹ್ಮಣ್ಯ, ವೆಂಕಟರಾಮ, ಯೋಗೇಂದ್ರ, ವಿಶ್ವನಾಥ್ ಹಾಜರಿದ್ದರು.

Ashika S

Recent Posts

ಅಂಜಲಿ ಅಂಬಿಗೇರ ಕೊಲೆ ಪ್ರಕರಣ: ಹುಬ್ಬಳ್ಳಿ-ಧಾರವಾಡ ಡಿಸಿಪಿ ಪಿ ರಾಜೀವ್ ಅಮಾನತು

ಅಂಜಲಿ ಅಂಬಿಗೇರ ಕೊಲೆ  ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ-ಧಾರವಾಡ ಡಿಸಿಪಿ ಪಿ.ರಾಜೀವ್ ಅಮಾನತು ಮಾಡಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವೈಫಲ್ಯ ಹಿನ್ನೆಲೆ  ಅಮಾನತು…

14 mins ago

ಹುಬ್ಬಳ್ಳಿ ಕೊಲೆ ಪ್ರಕರಣ : ಆರೋಪಿ ಎನ್‌ಕೌಂಟರ್‌ಗೆ ಆಗ್ರಹ

ಹುಬ್ಬಳ್ಳಿಯ ವೀರಾಪುರ ಓಣಿ ನಿವಾಸಿ ಅಂಜಲಿ ಅಂಬಿಗೇರ್‌ ಕೊಲೆ ಆರೋಪಿಗೆ ಎನ್‌ಕೌಂಟರ್‌ ಮಾಡಬೇಕೆಂದು ಟೋಕರೆ ಕೋಳಿ ಸಮಾಜ ಸಂಘ ಆಗ್ರಹಿಸಿದೆ.

27 mins ago

ಗತವೈಭವ ಸಾರುವ ಅಪರೂಪದ ಸಂಗೀತ ರುದ್ರೇಶ್ವರ ದೇವಸ್ಥಾನ

ಚಾಲುಕ್ಯರ ಕಾಲದಲ್ಲಿ ಸಂಗೀತ ವಿಶ್ವವಿದ್ಯಾಲಯದ ತಾಣವಾಗಿದ್ದ ಗೋರಟಾ(ಬಿ)ದಲ್ಲಿ ಗತವೈಭವ ಸಾರುವ ಸದುದ್ದೇಶದಿಂದ ಸಂಗೀತ ರುದ್ರೇಶ್ವರರ ವಿಶಿಷ್ಟ ಮತ್ತು ಅಪರೂಪದ ದೇವಸ್ಥಾನ…

40 mins ago

ನ್ಯೂಸ್ ಕರ್ನಾಟಕ ವರದಿಗೆ ಎಚ್ಚೆತ್ತ ತಾಲ್ಲೂಕು ಆಡಳಿತ : ಗ್ರಾಮಕ್ಕೆ ತಹಶೀಲ್ದಾರ್ ಭೇಟಿ

ಸಮಸ್ಯೆ ಬಗೆಹರಿಸಿ ಇಲ್ಲದಿದ್ದರೆ ಒಂದು ತೊಟ್ಟು ವಿಷ ಕೊಡಿ ಎಂದು ಗ್ರಾಮವನ್ನೇ ತೊರೆಯಲು ಮುಂದಾಗಿದ್ದ ಗ್ರಾಮಸ್ಥರಿಗೆ ನಂಜನಗೂಡು ತಹಶೀಲ್ದಾರ್ ಶಿವಕುಮಾರ್…

56 mins ago

ಭಗವಂತ ಖೂಬಾ ಹ್ಯಾಟ್ರಿಕ್‌ ಜಯ ನಿಶ್ಚಿತ : ಶೈಲೇಂದ್ರ

ಮೂರನೇ ಸಲ ಕೇಂದ್ರ ಸಚಿವ ಭಗವಂತ ಖೂಬಾ ಅವರು ಬೀದರ್‌ ಲೋಕಸಭಾ ಕ್ಷೇತ್ರದಿಂದ ಜಯ ಗಳಿಸುವುದು ನಿಶ್ಚಿತ' ಎಂದು ಬಿಜೆಪಿ…

1 hour ago

ಭಾರತೀಯರಿಗೆ ಗುಡ್‌ ನ್ಯೂಸ್‌ : ವೀಸಾ ಇಲ್ಲದೆ ರಷ್ಯಾಕ್ಕೆ ಹೋಗುವ ಅವಕಾಶ

ವಿದೇಶಕ್ಕೆ ಸುತ್ತಬೇಕು ಎನ್ನುವ ಪ್ರವಾಸಿಗರಿಗೆ ಒಂದು ಶುಭ ಸುದ್ದಿ. ಭಾರತೀಯರು ಇನ್ನು ಶೀಘ್ರದಲ್ಲೇ ವೀಸಾ ಇಲ್ಲದೆ ರಷ್ಯಾ ಪ್ರವಾಸ ಮಾಡಬಹುದು.…

1 hour ago