News Karnataka Kannada
Friday, May 03 2024
ಮಡಿಕೇರಿ

ಸಿಡ್ನಿಯಲ್ಲಿ ನಡೆಯುತ್ತಿರುವ ಹಿರಿಯರ ಕ್ರೀಡಾಕೂಟದಲ್ಲಿ ಕೊಡಗಿನ ಮೂವರಿಗೆ 5 ಪದಕ

5 medals for three from Kodagu at the ongoing Senior Games in Sydney
Photo Credit : By Author

ಕೊಡಗು: ಕೊಡಗಿನ ಮೂವರು ಕ್ರೀಡಾಪಟುಗಳು ಭಾರತವನ್ನು ಪ್ರತಿನಿಧಿಸಿ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಮಾಸ್ಟರ್ ಗೇಮ್ಸ್ ಚಾಂಪಿಯನ್ಶಿಪ್ ನಲ್ಲಿ ಭಾಗವಹಿಸಿ ಇಂದು ಒಟ್ಟು 5 ಪದಗಳನ್ನು ಪಡೆದುಕೊಂಡಿದ್ದಾರೆ.

ಅದರಲ್ಲೂ ವಿಶೇಷವೆಂಬಂತೆ ಇಬ್ಬರು ಸಹೋದರರು ಈ ಹಿರಿಯರ ಕ್ರೀಡಾಕೂಟದಲ್ಲಿ ಭಾಗವಹಿಸಿ ಸಾಧನೆ ಮಾಡಿ ಬೆರಗು ಗೊಳಿಸಿದ್ದಾರೆ ಗೋಣಿಕೊಪ್ಪ ಹಾಗೂ ಕದನೂರು ಗ್ರಾಮಗಳ ನಿವಾಸಿಗಳಾದ ಪಾಲೆಕಂಡ ಬೆಳ್ಳಿಯಪ್ಪ ಹಾಗೂ ಪಾಲೆಕಂಡ ಬೋಪಯ್ಯ ಭಾರತವನ್ನು ಪ್ರತಿನಿಸಿದ ಅಪರೂಪದ ಸಹೋದರರು. ಇವರಿಬ್ಬರೂ ಭಾರತದಲ್ಲಿ ನಡೆದ ಮಾಸ್ಟರ್ಸ್ ಗೇಮ್ಸ್ ಕ್ರೀಡಾಕೂಟದಲ್ಲಿ ಇದುವರೆಗೆ 13 ಚಿನ್ನದ ಪದಕಗಳನ್ನು ಪಡೆದುಕೊಂಡಿದ್ದರು.

ಜವಲಿನ್ ಥ್ರೋ ಹಾಗೂ ಡಿಸ್ಕಸ್ ಥ್ರೋ ನಲ್ಲಿ, ಹಾಗು ಬೆಳ್ಳಿಪ್ಪನವರು 100 ,200 , 1500 ಮೀಟರ್ ಕಾಲ್ನಡಿಗೆ ರೈಸ್ನಲ್ಲಿ ಭಾಗವಹಿಸಿದ್ದಾರೆ ಹಿರಿಯರ ಕ್ರೀಡಾಕೂಟದಲ್ಲಿ ಬಿಎಸ್ಎನ್ಎಲ್ ನ ನಿವೃತ್ತ ಉದ್ಯೋಗಿ, ಕರ್ನಾಟಕದ ಮಾಸ್ಟರ್ಸ್ ಕ್ರೀಡಾಕೂಟ ಸಂಘದ ಅಧ್ಯಕ್ಷೆ ಮರಾಮಡ ಮಾಚಮ್ಮ ಇವರುಗಳು ಕೂಡ ಈ ಕ್ರೀಡಾಕೂಟದಲ್ಲಿ ಭಾಗವಹಿಸಿ ಪದಕ ಗಳಿಸಿದ್ದಾರೆ. ಇವರನ್ನು ಸಿಡ್ನಿ ಯ ಕ್ರೀಡಾಕೂಟದಲ್ಲಿ ಚಾನೆಲ್ ಕೂರ್ಗ್ ನ ಬಳಗದ ಸದ್ಯಸರೊಬ್ಬರು ಭೇಟಿ ಮಾಡಿ ಅವರ ಸಾಧನೆಯನ್ನು ಪ್ರಶಂಶಿಸಿ ಸುದ್ಧಿಯನ್ನು ಕಳುಹಿಸಿ ಕೊಟ್ಟಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1620
Coovercolly Indresh

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು