News Karnataka Kannada
Saturday, May 11 2024
ಮಡಿಕೇರಿ

ವಿಂಟರ್ ಬಯಾಥ್ಲಾನ್ ನಲ್ಲಿ ಭವಾನಿಗೆ ಚಿನ್ನದ ಪದಕ

Madikeri
Photo Credit :

ಮಡಿಕೇರಿ: ಜಮ್ಮು- ಕಾಶ್ಮೀರದ ಗುಲ್ಮಾರ್ಗ್‌ನಲ್ಲಿ ನಡೆದ ರಾಷ್ಟ್ರೀಯ ವಿಂಟರ್ ಬಯಾಥ್ಲಾನ್ ಚಾಂಪಿಯನ್‌ಶಿಪ್‌-2022ರಲ್ಲಿ ಕೊಡಗಿನ ಯುವತಿ ಟಿ.ಎನ್. ಭವಾನಿ ಅವರು, ಒಂದು ಚಿನ್ನದ ಪದಕ ಮತ್ತು ಎರಡು ಬೆಳ್ಳಿ ಪದಕವನ್ನು ಪಡೆಯುವ ಮೂಲಕ ರಾಷ್ಟ್ರಮಟ್ಟದಲ್ಲಿ ಕರ್ನಾಟಕದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ.

ರಾಷ್ಟ್ರೀಯ ವಿಂಟರ್ ಬಯಾಥ್ಲಾನ್ ಚಾಂಪಿಯನ್‌ಶಿಪ್‌ ಗುಲ್ಮಾರ್ಗ್‌ನಲ್ಲಿ ನಡೆಯುತ್ತಿದ್ದು, ಈ ಕ್ರೀಡೆಯಲ್ಲಿ ದಕ್ಷಿಣ ಭಾರತದಿಂದ  ಸ್ಪರ್ಧಿಸಿರುವ ಏಕೈಕ ಸ್ಪರ್ಧಿಯಾಗಿರುವ ಭವಾನಿ ಮಾರ್ಚ್  19 ರಿಂದ 21ರವರೆಗೆ ನಡೆದ  ಹತ್ತು ಮತ್ತು ಐದು ಕಿ.ಮೀ. ರೇಸ್ ನಲ್ಲಿ ಎರಡು ಬೆಳ್ಳಿಯ ಪದಕ ಪಡೆದಿದ್ದರೆ, ಮಾ. 23 ರಿಂದ 25ರವರೆಗೆ ನಡೆಯಲಿರುವ ನ್ಯಾಷನಲ್ ನಾರ್ಡಿಕ್ (ಕ್ರಾಸ್ ಕಂಟ್ರಿ) ಸ್ಕೀಯಿಂಗ್ ನಲ್ಲಿ ಚಿನ್ನದ ಪಡೆದು ಎಲ್ಲರ ಗಮನಸೆಳೆದಿದ್ದಾರೆ.

ಕರ್ನಾಟಕದ ಕಾಶ್ಮೀರ ಎಂದೇ  ಕರೆಯಲ್ಪಡುವ ಕೊಡಗಿನಲ್ಲಿ ಹುಟ್ಟಿದ ಭವಾನಿ ಅವರು ಸ್ಕೀಯಿಂಗ್ ನ್ನು ಆಯ್ಕೆ ಮಾಡಿಕೊಂಡು ಬಳಿಕ ದೇಶ, ವಿದೇಶಗಳಲ್ಲಿ ವಿಶೇಷ ತರಬೇತಿಯನ್ನು ಪಡೆದು ಇದೀಗ ರಾಷ್ಟ್ರೀಯ ವಿಂಟರ್ ಬಯಾಥ್ಲಾನ್ ಚಾಂಪಿಯನ್‌ ಶಿಪ್‌ ಗಮನಾರ್ಹ ಸಾಧನೆ ಮಾಡಿದ್ದಾರೆ.

ಇನ್ನು ವಿಂಟರ್ ಬಯಾಥ್ಲಾನ್ ಸ್ಪರ್ಧೆ ಹೇಗಿರುತ್ತದೆ ಎಂದರೆ ಹಿಮಚ್ಛಾದಿತ ಪರ್ವತದ ಕಡಿದಾದ ಪ್ರದೇಶದಲ್ಲಿ ಸ್ಕೀಯಿಂಗ್ ನ ಪರಿಕರಗೊಂದಿಗೆ ಸ್ಪರ್ಧಿಗಳು ಭಾಗವಹಿಸಬೇಕಾಗುತ್ತದೆ. ಮೂರೂವರೆ ಕೆಜಿ ತೂಕದ ರೈಫಲ್ ನೊಂದಿಗೆ ಜಾರುತ್ತಾ ನಿಗದಿತ ಗುರಿಯಲ್ಲಿ ಗುಂಡು ಹಾರಿಸಬೇಕು. ಯಾರು ಹೆಚ್ಚು ಗುರಿಯಿಟ್ಟು ಹೊಡೆಯುತ್ತಾ ಮುನ್ನಡೆಯುತ್ತಾರೋ ಅವರು ಗೆಲುವು ಪಡೆಯುತ್ತಾರೆ.

ತಲಾ ಐದು ಮತ್ತು ಹತ್ತು ಕಿ.ಮೀ. ಸ್ಪರ್ಧೆಯಲ್ಲಿ ಭಾಗವಹಿಸಿದ ಭವಾನಿ ಹತ್ತರ ಪೈಕಿ ಏಳು, ಐದರ ಪೈಕಿ ಮೂರು ಗುರಿ ತಲುಪಿ ಬೆಳ್ಳಿ ಪದಕ ಪಡೆದಿದ್ದಾರೆ. ಇನ್ನು ಮಾ.23ರಂದು ನಡೆದ ನ್ಯಾಷನಲ್ ನಾರ್ಡಿಕ್ (ಕ್ರಾಸ್ ಕಂಟ್ರಿ) ಸ್ಕೀಯಿಂಗ್ ನಲ್ಲಿ ಮೊದಲ ಸ್ಥಾನ ಪಡೆದು ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು