News Karnataka Kannada
Sunday, May 12 2024
ಮಡಿಕೇರಿ

ಲಾರಿಯಲ್ಲಿ ಅಕ್ರಮ ಗೋಸಾಗಾಟ ಪತ್ತೆ: ಆರೋಪಿಗಳು ಪರಾರಿ, 24 ಗೋವುಗಳ ರಕ್ಷಣೆ

Cows
Photo Credit : News Kannada

ಮಡಿಕೇರಿ : ತಾಲ್ಲೂಕಿನ ಸಂಪಾಜೆ ಅರಣ್ಯ ತಪಾಸಣಾ ಗೇಟ್ ಬಳಿ ನಿನ್ನೆ ರಾತ್ರಿ KA- 05- AA -8605 ನೋಂದಣಿ ಸಂಖ್ಯೆಯ ಐಶರ್ ಲಾರಿಯಲ್ಲಿ ಯಾರಿಗೂ ಸಂಶಯ ಬಾರದ ರೀತಿಯಲ್ಲಿ ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದಾಗ ಪತ್ತೆ ಹಚ್ಚಿದ ಇಲಾಖಾ ಅಧಿಕಾರಿಗಳು ಲಾರಿ ಸಮೇತ 24 ಗೋವುಗಳನ್ನು ವಶಕ್ಕೆ ಪಡೆದಿದ್ದಾರೆ.

ಇಲಾಖಾ ಸಿಬ್ಬಂದಿಗಳು ತಪಾಸಣೆಗೆ ಮುಂದಾಗುತ್ತಿದ್ದಂತೆ ಲಾರಿಯಲ್ಲಿದ್ದ ಆರೋಪಿಗಳು ಲಾರಿಯಿಂದ ಜಿಗಿದು ಓಡಿ ಕತ್ತಲ್ಲಲ್ಲಿ ಪರಾರಿಯಾಗಿರುತ್ತಾರೆ. ಒಂದಷ್ಟು ದೂರ ಸಿಬ್ಬಂದಿಗಳು ಬೆನ್ನಟ್ಟಿದರಾದರೂ ಕತ್ತಲು ಆವರಿಸಿದ್ದ ಕಾರಣ ಆರೋಪಿಗಳು ಪರಾರಿಯಾದರು.

ಆರೋಪಿಗಳು ಗೋವುಗಳನ್ನು ತುಂಬಿಕೊಂಡು ಮಡಿಕೇರಿ ಮಾರ್ಗದಿಂದ ಸುಳ್ಯ ಕಡೆಗೆ ತೆರಳುತ್ತಿದ್ದು ಸಂಪಾಜೆ ಗೇಟ್ ಬಳಿ ತಪಾಸಣೆ ವೇಳೆಗೆ ಅಕ್ರಮ ಗೋ ಸಾಗಾಟ ಬೆಳಕಿಗೆ ಬಂದಿದೆ. ನಾಲ್ಕು ತಿಂಗಳ ಹಿಂದೆಯೂ ಸಹ ತಡರಾತ್ರಿ ಮದೆನಾಡು ಬಳಿ ಲಾರಿಯೊಂದು ಅಪಘಾತಕ್ಕೀಡಾದಾಗ ಅದರಲ್ಲಿ 25 ಕ್ಕೂ ಹೆಚ್ಚು ಗೋವುಗಳಿದ್ದು ಆರೋಪಿಗಳು ಕೂಡಲೇ ಗೋವುಗಳನ್ನು ಕೆಳಗಿಳಿಸಿ ತಪ್ಪಿಸಿಕೊಂಡಿದ್ದರು. ಸ್ಥಳೀಯರು ಸುತ್ತಮುತ್ತಲಲ್ಲಿದ್ದ ಆ ಗೋವುಗಳನ್ನು ಕೊಂಡೊಯ್ದಿದ್ದರು.

ಸಂಪಾಜೆ ಚೆಕ್ ಪೋಸ್ಟ್ ಮೂಲಕ ನಿರಂತರವಾಗಿ ಕೇರಳ ಮತ್ತು ಮಂಗಳೂರಿನ ಕಸಾಯಿಖಾನೆಗಳಿಗೆ ಸಿಬ್ಬಂದಿಗಳ ಸಹಕಾರದಿಂದಲೇ ಅಕ್ರಮವಾಗಿ ಗೋಸಾಗಾಟವಾಗುತ್ತಿರುವ ಬಗ್ಗೆ ಹಿಂದು ಜಾಗರಣ ವೇದಿಕೆಯು ಹಲವು ಬಾರಿ ಪೋಲೀಸ್ ಇಲಾಖೆಗೆ ಮಾಹಿತಿ ನೀಡಿತ್ತು. ಇದೀಗ ಪತ್ತೆಯಾದ ಅಕ್ರಮ ಗೋಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1620
Coovercolly Indresh

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು