News Karnataka Kannada
Thursday, May 02 2024
ಮಡಿಕೇರಿ

ಮಾಡೆಲಿಂಗ್‌ ಆಕಾಂಕ್ಷಿಗಳಿಗೆ ಲಕ್ಷಾಂತರ ರೂಪಾಯಿ ಹಣಕ್ಕೆ ಬ್ಲಾಕ್‌ ಮೇಲ್‌ ; ಕೊಡಗಿನ ಯುವಕ ಬಂಧನ

Prapanch Nachappa
Photo Credit : News Kannada

ಮಡಿಕೇರಿ ಜ. 12 : ಮಾಡೆಲಿಂಗ್‌ ಕ್ಷೇತ್ರದಲ್ಲಿ ಆಸಕ್ತಿಯುಳ್ಳ ಯುವತಿಯರ ಅರೆನಗ್ನ ಫೋಟೋಗಳನ್ನು ಪಡೆದು ಅದನ್ನು  ಪುನಃ ನಗ್ನವಾಗಿ ಎಡಿಟ್‌ ಮಾಡಿ  ಅವರನ್ನೇ ಬ್ಲಾಕ್‌ ಮೇಲ್‌ ಮಾಡಿ  ವಂಚಿಸುತಿದ್ದ ಮೂಲತಃ ಮಡಿಕೇರಿ ನಗರದ ರಾಜಾಸೀಟ್‌ ಸಮೀಪದ ಯುವಕನನ್ನು ಹಲಸೂರು ಪೋಲೀಸರು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸೋಮವಾರ ಬಂಧಿತನಾದ ಈ ಯುವಕನನ್ನು ಪ್ರಪಂಚ್‌ ನಾಚಪ್ಪ (23 ) ಎಂದು ಗುರುತಿಸಲಾಗಿದ್ದು,ಈತ ಫ್ರೇಜರ್‌ ಟೌನ್‌ ನಿವಾಸಿ ಆಗಿದ್ದು, ಖಾಸಗೀ ಕಾಲೇಜೊಂದರಲ್ಲಿ ಒದುತಿದ್ದ ಎನ್ನಲಾಗಿದೆ. ಈತನು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂ ನಲ್ಲಿ ಅಂದವಾದ ಯುವತಿ ಹೆಸರಿನಲ್ಲಿ ನಕಲಿ ಖಾತೆ ತೆರೆಯುತಿದ್ದ. ತಾನು ಮಾಡೆಲಿಂಗ್ ಮಾಡುತ್ತಿದ್ದು, ಮಾಡೆಲಿಂಗ್ ಕ್ಷೇತ್ರಕ್ಕೆ ಬರಲು ಆಸಕ್ತಿಯಿರುವವರು ನನ್ನನ್ನು ಸಂಪರ್ಕಿಸಬಹುದು ಎಂದು ಪೋಸ್ಟ್ ಹಾಕುತಿದ್ದ.

ಇದನ್ನು ನೋಡಿದ ಮಾಡೆಲಿಂಗ್‌ ಆಕಾಂಕ್ಷಿ ಯುವತಿಯರು ಈತನೂ ಮಹಿಳೆಯೇ ಎಂದು ಭಾವಿಸಿ ಆತನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಆರೋಪಿಗೆ ಸಂದೇಶ ಕಳುಹಿಸುತ್ತಿದ್ದರು. ಬಳಿಕ ಸಂದೇಶ ಕಳುಹಿಸಿದ ಯುವತಿಯರಿಗೆ ತನ್ನ ಮೊಬೈಲ್ ನಂಬರ್ ಕಳಿಸುತ್ತಿದ್ದ. ಯುವತಿಯರು ಸಂಪರ್ಕಿಸಿದ ಕೂಡಲೇ ಮಾಡೆಲಿಂಗ್‌ಗೆ ಅಗತ್ಯವಿರುವ ಅರೆಬೆತ್ತಲೆ ಫೋಟೋ ಕಳುಹಿಸುವಂತೆ ಸೂಚಿಸುತ್ತಿದ್ದ. ಯುವತಿಯರು ಕಳುಹಿಸುತ್ತಿದ್ದ ಫೋಟೋ ನಂತರ ಅರೆಬೆತ್ತಲೆ ಫೋಟೋಗಳನ್ನು ಕಳಿಸಿಕೊಡಿ, ಮಾಡೆಲಿಂಗ್‌ ಕ್ಷೇತ್ರದಲ್ಲಿ ಬೋಲ್ಡ್‌ ಆಗಿದ್ದರೆ ಮಾತ್ರ ಒಳ್ಳೆಯ ಅವಕಾಶ ಸಿಗುತ್ತದೆ ಏಂದು ಪುಸಲಾಯಿಸುತಿದ್ದ. ಅಲ್ಲದೆ ಕಳಿಸಿದ ಒಂದು ಫೋಟೋಗೆ 2000 ರೂಪಾಯಿ ನೀಡುವುದಾಗಿ  ಆಮಿಷವೊಡ್ಡುತಿದ್ದ. ಫೋಟೋ ಕಳಿಸಿದ ನಂತರ ಬಿಕಿನಿ ಧರಿಸಿದ ಚಿತ್ರ ಕಳಿಸಿಕೊಡಿ ಅದಕ್ಕೆ 10 ಸಾವಿರ ರೂಪಾಯಿ ಸಿಗುತ್ತದೆ ಎಂದು ಆಮಿಷ ಒಡ್ಡುತಿದ್ದ. ಪುನಃ ಸಂಪೂರ್ಣ ನಗ್ನ ಚಿತ್ರ ಕಳಿಸಿಕೊಡಲು ಹೇಳುತಿದ್ದ. ಅವರು ಕಳಿಸಿಕೊಡದಿದ್ದಾಗ ಆಕಾಂಕ್ಷಿಗಳ ಅರೆ ಬೆತ್ತಲೆ ಚಿತ್ರ ಗಳನ್ನೇ ಅಶ್ಲೀಲ ಚಿತ್ರಗಳಿಗೆ ಮಾರ್ಫಿಂಗ್ ಮಾಡಿ ಪುನಃ ಅದೇ ಯುವತಿಯರ ವಾಟ್ಸ್‌ ಆ್ಯಪ್‌ಗೆ ಕಳುಹಿಸಿ ಆರೋಪಿ ಹಣಕ್ಕೆ ಬೇಡಿಕೆಯಿಡುತ್ತಿದ್ದ. ಹಣ ಕೊಡದಿದ್ದರೆ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಸುತ್ತಿದ್ದ. ಇದರಿಂದ ಆತಂಕಕ್ಕೊಳಗಾದ ಕೆಲ ಯುವತಿಯರು ಆರೋಪಿ ಪ್ರಪಂಚ್‌ ಹೇಳಿದ ಬ್ಯಾಂಕ್ ಖಾತೆಗೆ ಆನ್‌ಲೈನ್ ಮೂಲಕ ಹಣ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಕುರಿತು ಮಾತನಾಡಿದ ಹಲಸೂರು ಇನ್ಸ್‌ಪೆಕ್ಟರ್‌ ಎಂ ಮಂಜುನಾಥ್‌ ಅವರು ಆರೋಪಿ ಮೊದಲು 10 ಸಾವಿರ ರೂ. ಕಳುಹಿಸುವಂತೆ ಸೂಚಿಸಿ ನಂತರ ಹಂತ-ಹಂತವಾಗಿ 1 ಲಕ್ಷ ರೂ.ವರಗೆ ಹಣ ವಸೂಲು ಮಾಡಿರುವ ಕುರಿತು ದೂರು ಇದೆ. ಇದುವರೆಗೂ 20ಕ್ಕೂ ಅಧಿಕ ಯುವತಿಯರು ಆರೋಪಿಯ ಬಲೆಗೆ ಬಿದ್ದಿದ್ದಾರೆ ಎನ್ನುವ ಮಾಹಿತಿ ದೊರೆತಿದೆ ಎಂದರು. ಆರೋಪಿಯಿಂದ ಇದೇ ರೀತಿ ಬ್ಲಾಕ್‌ ಮೇಲ್‌ ಗೆ ಒಳಗಾದ ಯುವತಿಯೊಬ್ಬಳು ಈ ಕುರಿತು 2021 ನವೆಂಬರ್‌ನಲ್ಲಿ ಹಲಸೂರು ಪೊಲೀಸ್ ಠಾಣೆಗೆ ದೂರು ಸಹ ನೀಡಿದ್ದಳು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೋಲೀಸರು ತನಿಖೆ ನಡೆಸಿದ ನಂತರ ಮೊನ್ನೆ ಸೋಮವಾರ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಯ ಹಲವಾರು ಯುವತಿಯರಿಗೆ ಬ್ಲಾಕ್‌ ಮೇಲ್‌ ಮಾಡಿರುವುದು ಧೃಡಪಟ್ಟಿದ್ದು ಈತನ ಮೊಬೈಲ್‌ ಮತ್ತು ಲ್ಯಾಪ್‌ ಟಾಪ್‌ ನ್ನು ಪೋಲೀಸರು ವಶಕ್ಕೆ ಪಡೆಯಲಾಗಿದೆ. . ಈತ ಬ್ಲಾಕ್‌ ಮೇಲ್‌ ನಿಂದಾಗಿ ಎಷ್ಟು ಹಣ ಪಡೆದುಕೊಂಡಿದ್ದಾನೆ ಎಂದು ತಿಳಿದುಬಂದಿಲ್ಲ ,ತನಿಖೆ ಮುಂದುವರೆದಿದೆ ಎಂದು ಇನ್ಸ್‌ಪೆಕ್ಟರ್‌ ತಿಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1620
Coovercolly Indresh

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು