News Karnataka Kannada
Friday, May 03 2024
ಮಡಿಕೇರಿ

ಜಂಬೂರು ಕಾಫಿ ಎಸ್ಟೇಟ್‌ ಗೆ ಅಂತರ್ರಾಷ್ಟ್ರೀಯ ಬೆಸ್ಟ್‌ ಆಫ್‌ ದ ಬೆಸ್ಟ್‌ ಕಾಫಿ ಪ್ರಶಸ್ತಿ

New Project 2021 12 06t132948.469
Photo Credit :

ಮಡಿಕೇರಿ  : ಇಟಲಿಯಲ್ಲಿ ನಡೆದ ಅಂತರ್ರಾಷ್ಟ್ರೀಯ  ಕಾಫಿ ಸಂಸ್ಥೆಯಾದ ಇಲ್ಲಿಕಾಫೆ ಯು  ಉತ್ತಮ ಗುಣಮಟ್ಟದ ಕಾಫಿ ಉತ್ಪಾದಕರಿಗೆ ನೀಡುವ ವಾರ್ಷಿಕ ಅರ್ನೆಸ್ಟೊ ಇಲ್ಲಿ ಇಂಟರ್‌ನ್ಯಾಶನಲ್ ಕಾಫಿ ಅವಾರ್ಡ್( (Ernesto illy international coffee award ) 2021  ರ ಪ್ರಶಸ್ತಿಗೆ  ಮಾದಾಪುರ ಸಮೀಪದ ಜಂಬೂರು ಕಾಫಿ ಎಸ್ಟೇಟ್‌ ಆಯ್ಕೆಯಾಗಿದೆ.  ಕಳೆದ  2016 ರಿಂದ   ನೀಡಲಾಗುತ್ತಿರುವ  ಈ 6 ನೇ ವರ್ಷದ ಪ್ರಶಸ್ತಿಯನ್ನು   ಟಾಟಾ ಕಾಫಿ ಲಿಮಿಟೆಡ್‌ ನ  ಜಂಬೂರು ಎಸ್ಟೇಟ್‌ ಪಡೆದುಕೊಂಡಿದೆ. ಕಳೆದ ಡಿಸೆಂಬರ್‌ 2 ರಂದು ಇಟಲಿಯಲ್ಲಿ ನಡೆದ ಗುಣಮಟ್ಟದ ಕಾಫಿ ಸ್ಪರ್ದೆಯಲ್ಲಿ  ಅತ್ಯತ್ತಮ ಕಾಫಿ ಉತ್ಪಾದಿಸುವ 9 ರಾಷ್ಟ್ರಗಳ 17 ಮಂದಿ ಬೆಳೆಗಾರರು ಭಾಗವಹಿಸಿದ್ದರು.
ಅಂತರಾಷ್ಟ್ರೀಯ ಪಾಕಶಾಸ್ತ್ರ ಮತ್ತು ಕಾಫಿ ತಜ್ಞರ ಸ್ವತಂತ್ರ ಸಮಿತಿಯು ಜಂಬೂರು ಎಸ್ಟೇಟ್‌ ನ ಕಾಫಿಯನ್ನು ಬೆಸ್ಟ್‌ ಆಫ್‌ ದ ಬೆಸ್ಟ್‌ ಎಂದು ಗುರುತಿಸಿ ಮೊದಲ ಸ್ಥಾನ ನೀಡಿದೆ. ಈ ಸ್ಪರ್ದೆಯಲ್ಲಿ ಜಂಬೂರು ಎಸ್ಟೇಟನ್ನು ಬಿ ಎಂ ನಾಚಪ್ಪ ಪ್ರತಿನಿಧಿಸಿದ್ದರು. ಈ ಅಂತರ್ರಾಷ್ಟ್ರೀಯ ಎರಡನೇ ಉನ್ನತ ಪ್ರಶಸ್ತಿಯಾದ   “ಕಾಫಿ ಲವರ್ಸ್ ಚಾಯ್ಸ್” ಪ್ರಶಸ್ತಿಯನ್ನು ಗ್ವಾಟೆಮಾಲಾದ ಪ್ರೋಯೆಕ್ಟೊ ಲಿಫ್ಟ್ ಒಲೋಪಿಟಾ   ಎಸ್ಟೇಟ್‌ ಗೆ
ನೀಡಲಾಯಿತು. ಈ ಸ್ಪರ್ದೆಯಲ್ಲಿ  ಬ್ರೆಜಿಲ್, ಕೊಲಂಬಿಯಾ, ಕೋಸ್ಟರಿಕಾ, ಎಲ್ ಸಾಲ್ವಡಾರ್, ಇಥಿಯೋಪಿಯಾ, ಗ್ವಾಟೆಮಾಲಾ, ಹೊಂಡುರಾಸ್, ಭಾರತ ಮತ್ತು ನಿಕರಾಗುವಾ ದೇಶದಿಂದ ತಲಾ ಮೂವರು ಬೆಳೆಗಾರರು ಭಾಗವಹಿಸಿದ್ದರು. ಭಾರತದಿಂದ  ಚಿಕ್ಕಮಗಳೂರು ಜಿಲ್ಲೆಯ  ಬಸ್ಕಲ್‌ ಎಸ್ಟೇಟ್‌ ನ ಬಾಲರಾಜು ಮತ್ತು ಹಳ್ಳಿ ಹಿತ್ಲು ಎಸ್ಟೇಟ್‌ ನ ಮಹೇಶ್‌ ಗೌಡ ಅವರು   ಭಾಗವಹಿಸಿದ್ದರು. ಜಂಬೂರು ಎಸ್ಟೇಟ್‌  ಸಮೃದ್ಧ ಸಾವಯವ ಮಣ್ಣಿನ ಪ್ರದೇಶ ಹೊಂದಿದ್ದು ಸಮುದ್ರ ಮಟ್ಟದಿಂದ 950-1000 ಮೀಟರ್ ಎತ್ತರದಲ್ಲಿದೆ. 1870 ರಲ್ಲಿ ಸ್ಥಾಪಿತವಾದ ಈ ಎಸ್ಟೇಟ್ 390 ಹೆಕ್ಟೇರ್‌ ತೋಟದಲ್ಲಿ ಅರೇಬಿಕಾ ಕಾಫಿಯನ್ನು ಮಾತ್ರ ಬೆಳೆಸುತ್ತದೆ.   ಈ ಎಸ್ಟೇಟ್‌ ನಲ್ಲಿ “ಜಂಬೂರ್ ಗೋಲ್ಡ್”  ಎಂಬ ಉತ್ತಮ ಗುಣಮಟ್ಟದ ಅರೇಬಿಕಾ ಕಾಫಿಯನ್ನು ಉತ್ಪಾದಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಮಾತನಾಡಿದ ಇಲಿಕಾಫೆ ಅಧ್ಯಕ್ಷ ಆಂಡ್ರಿಯಾ ಇಲಿ ಅವರು ಭಾರತವು ಅರ್ನೆಸ್ಟೊ ಇಲ್ಲಿ ಇಂಟರ್‌ನ್ಯಾಶನಲ್ ಕಾಫಿ ಪ್ರಶಸ್ತಿಯನ್ನು ಗೆದ್ದಿರುವುದು ಇದೇ ಮೊದಲ ಬಾರಿ ಆಗಿದೆ. ಭಾರತದಲ್ಲಿ ಎತ್ತರದ ಮರಗಳ ನೆರಳಿನಡಿಯಲ್ಲಿ   ಕಾಳುಮೆಣಸು, ಕಿತ್ತಳೆ , ವೆನಿಲ್ಲಾ, ಏಲಕ್ಕಿ ಮತ್ತು ದಾಲ್ಚಿನ್ನಿಯಂತಹ ಇತರ ಬೆಳೆಗಳೊಂದಿಗೆ ಕಾಫಿ ಬೆಳೆಯುವ ದೇಶವಾಗಿದೆ ಎಂದರಲ್ಲದೆ ಮಿಶ್ರಬೆಳೆಯ ನಡುವೆಯೂ ಅತ್ಯುತ್ತಮ ಗುಣಮಟ್ಟದ ಕಾಫಿಯನ್ನು ಉತ್ಪಾದಿಸಿರುವುದು   ಕಾಫಿಗೆ ಉತ್ತಮ ಭವಿಷ್ಯ ಇರುವುದನ್ನು ತೋರಿಸುತ್ತಿದೆ ಎಂದರು.
ಇಲ್ಲಿಕಾಫೆ ಎಂಬುದು ಇಟಾಲಿಯನ್  ಕೌಟುಂಬಿಕ ಸಂಸ್ಥೆ ಆಗಿದ್ದು  ಇದನ್ನು 1933 ರಲ್ಲಿ ಇಟಲಿಯ ಟ್ರಿಯೆಸ್ಟ್‌ನಲ್ಲಿ ಸ್ಥಾಪಿಸಲಾಯಿತು.  ಇಲ್ಲಿ ವಿಶ್ವದ  ಪ್ರಮುಖ ಜಾಗತಿಕ ಕಾಫಿ ಬ್ರಾಂಡ್ ಆಗಿದ್ದು,  ಉತ್ಖೃಷ್ಟ ದರ್ಜೆಯ ಅರೇಬಿಕಾ ಕಾಫಿಯನ್ನು 140 ದೇಶಗಳಲ್ಲಿ ಕೆಫೆಗಳು, ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು ಮತ್ತು ಕಚೇರಿಗಳು ಮತ್ತು ಮನೆಗಳಲ್ಲಿ ಮಾರಾಟ ಮಾಡುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1620
Coovercolly Indresh

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು