ಬೆಂಗಳೂರು: ಕೂರ್ಗ್ ನಲ್ಲಿ ಅಪರೂಪದ ನೀಲ ಕುರಂಜಿ ಹೂಗಳು ಅರಳುವ ಮೂಲಕ ಪರಿಸರ ಪ್ರೇಮಿಗಳು, ಸಸ್ಯ ಪ್ರಿಯರು, ಫೋಟೋಗ್ರಾಫರ್ ಗಳು ಮತ್ತು ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಈ ಹೂಗಳಿಂದಾಗಿ ಕೊಡಗಿನ ಮಾಂದಲಪಟ್ಟಿ ಮತ್ತು ಕೋಟೆ ಬೆಟ್ಟ ಸಂಪೂರ್ಣ ನೀಲಿಮಯವಾಗಿದ್ದು, ಪ್ರವಾಸೋದ್ಯಮ ಕ್ಷೇತ್ರ ಚೇತರಿಸಿಕೊಳ್ಳುತ್ತಿದೆ. 12 ವರ್ಷಕ್ಕೊಮ್ಮೆ ನಂತರ ಅರಳುವ ಈ ಹೂಗಳ ಸೌಂದರ್ಯ ಸವಿಯಲು ಪ್ರವಾಸಿಗರು ಭಾರತದ ಸ್ಕಾಟ್ ಲ್ಯಾಂಡ್ ನತ್ತ ಆಗಮಿಸುತ್ತಿದ್ದಾರೆ.
ರಾಜ್ಯ ಸರ್ಕಾರ ಮತ್ತು ಪ್ರವಾಸೋದ್ಯಮ ಇಲಾಖೆ ಧೀರ್ಘಕಾಲದಿಂದ ನೆನೆ ಗುದಿಗೆ ಬಿದ್ದಿರುವ ಹೆಲಿ ಟೂರಿಸಂನ್ನು ಪರಿಶೀಲಿಸಬೇಕಾಗಿದೆ. ಬೆಟ್ಟದಲ್ಲಿ ಅಪರೂಪಕ್ಕೆ ಅರಳುವ ನೀಲ ಕುರಂಜಿ ಹೂಗಳ ಸೌಂದರ್ಯ ಸವಿಯುವ ನಿಟ್ಟಿನಲ್ಲಿ
ಬೆಂಗಳೂರಿನ ಸಂಸ್ಥೆಯೊಂದು ಕೊಡಗು ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಹೆಲಿ ರೈಡ್ ವ್ಯವಸ್ಥೆ ಮಾಡಿದೆ.