ಮೈಸೂರು : ಹುಣಸೂರು ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಲ್ಲಿ ಮಾಜಿ ಸಂಸದ ಪ್ರತಾಪ ಸಿಂಹ ಹೇಳಿಕೆ ನೀಡಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಹಗಲುದರೋಡೆ ಎಂದರೆ ಇದೇ ಇರಬೇಕು. ಹಾಡಹಗಲೇ ಬಂದು ಈ ರೀತಿ ದರೋಡೆ ಕೃತ್ಯ ಎಸಗಿದ್ದಾರೆ. ಪೊಲೀಸರಿಗೆ ಯಾವುದೇ ಫ್ರೀ ಹ್ಯಾಂಡ್ ಕೊಟ್ಟಿಲ್ಲ.

ಕರ್ತವ್ಯ ಮಾಡಲು ಬಿಟ್ಟರೆ ಪೊಲೀಸರು ಇಂತಹ ಪ್ರಕರಣ ಮಟ್ಟ ಹಾಕ್ತಾರೆ. ಮೈಸೂರಿನ ರೇಪ್ ಕೇಸನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಒಂದೇ ಒಂದು ಕ್ಲ್ಯೂ ಮೂಲಕ ಅವರನ್ನ ಪತ್ತೆ ಹಚ್ಚಿದ್ರು, ಪೊಲೀಸರಿಗೆ ಫ್ರೀ ಹ್ಯಾಂಡ್ ಕೊಡದೆ ಇರುವುದೇ ಇಂತಹ ಘಟನೆಗಳಿಗೆ ಕಾರಣ. ಸಿಎಂ ತವರು ಜಿಲ್ಲೆ ಮೊದಲ ಅವಧಿಯಲ್ಲಿ‌ ಬಿಗಿ ಇತ್ತು ಆದರೆ ಎರಡನೆ ಅವಧಿಯಲ್ಲಿ ಈ ರೀತಿ ಘಟನೆ ಪದೇ ಪದೇ ಮರುಕಳಿಸುತ್ತಿವೆ.

ಮೈಸೂರು, ಬೆಂಗಳೂರಿನಲ್ಲಿ ಡ್ರಗ್ಸ್ ಫ್ಯಾಕ್ಟರಿ ವಿಚಾರವಾಗಿ ಮಹಾರಾಷ್ಟ್ರ ಪೊಲೀಸರು ಮೈಸೂರಿಗೆ ಬಂದು ದಾಳಿ ಮಾಡ್ತಾರೆ, ಇಲ್ಲಿಯ ಡ್ರಗ್ಸ್ ಜಾಲ ಬೇಧಿಸ್ತಾರೆ, ಇದೊಂದು ಯುವ ಸಮುದಾಯವನ್ನ ದಾರಿತಪ್ಪಿಸುವ ಪರೋಕ್ಷವಾದ ಸಹಕಾರ ಸರ್ಕಾರ ನೀಡುತ್ತಿದೆಯಾ?. ಡ್ರಗ್ಸ್ ಜಾಲ ಮಟ್ಟ ಹಾಕಲು ಸರ್ಕಾರ ಮುಂದಾಗಬೇಕು. ಸರ್ಕಾರದ ನಡೆಯಿಂದಲೇ ಡ್ರಗ್ಸ್ ಜಾಲ ಹೆಚ್ಚಾಗುತ್ತಿದೆ.

ಸಿದ್ದರಾಮಯ್ಯ ಒಬ್ಬ ಪುಕ್ಕಲ ಸಿಎಂ, ಒಂದು‌ ಆನೆಗೋಸ್ಕರ ಕೇರಳ ಸರ್ಕಾರಕ್ಕೆ ಕರ್ನಾಟಕ ಪರಿಹಾರ ಕೊಡುತ್ತೆ, ಇನ್ನೂ ಕೇರಳಿಗರು ಇರುವ ಕೋಗಿಲುವಾಲು ಬಡಾವಣೆಗೆ ಕೇರಳ ಸಿಎಂ ಪರಿಹಾರ ನೀಡಲಿ, ಪಿಣರಾಯಿ ವಿಜಯನ್ ಹಾಗು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು. ಪಿಣರಾಯಿ ವಿಜಯನ್ ಎಂಟ್ರಿ ಆದರೆ ಕಾಂಗ್ರೆಸ್ ಸರ್ಕಾರ ಬೆಂಬಲ ನೀಡುತ್ತೆ, ಆ ಕಾರಣಕ್ಕಾಗಿಯೇ‌ ಕೇರಳ ಸರ್ಕಾರ ಎಂಟ್ರಿ ಕೊಟ್ಟಿದೆ ಎಂದರು.