ಮೈಸೂರು : ಹುಣಸೂರಿನಲ್ಲಿ ವಜ್ರಾಭರಣ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಎಸ್ಪಿ ಡಾ. ವಿಷ್ಣುವರ್ಧನ್ ಪ್ರತಿಕ್ರಿಯೆ ನೀಡಿದ್ದಾರೆ.

ಸಿಸಿಟಿವಿ ದೃಶ್ಯಾವಳಿ ಆಧಾರದ ಮೇಲೆ ದರೋಡೆಕೋರ ಚಹರೆ ಗಮಿಸಿದ್ದೇವೆ. ಅಂದಾಜು 7 ಕೆ.ಜಿ. ಚಿನ್ನಾಭರಣ ದರೋಡೆಯಾಗಿದೆ. ಅಂಗಡಿ ಮಾಲೀಕರು ಸೇರಿದಂತೆ ಎಲ್ಲಾ ಆಯಾಮಗಳಲ್ಲಿ ತನಿಖೆ ಮಾಡಲಾಗುತ್ತಿದೆ. ಆರೋಪಿಗಳ ಸೆರೆಗೆ 5 ತಂಡ ರಚನೆ ಮಾಡಲಾಗಿದೆ. ಐದು ಇನ್ಸ್ಪೆಕ್ಟರ್ ಇರುವ ಐದು ತಂಡಗಳು ತನಿಖೆ ಮಾಡುತ್ತೇವೆ.

ಸ್ಕೈ ಗೋಲ್ಡ್ ಅಂಡ್ ಡೈಮಂಡ್‌ ಜ್ಯುವೆಲ್ಲರಿ ಅಂಗಡಿಯಲ್ಲಿ ಬೆಳಗಿನ ಸಂದರ್ಭದಲ್ಲಿ ಸೆಕ್ಯೂರಿಟಿ ಇಡಬೇಕಿತ್ತು. ಆದರೆ ಇರಲಿಲ್ಲ. ಇವರು ರಾತ್ರಿಯ ವೇಳೆಯಲ್ಲಷ್ಟೇ ಸೆಕ್ಯೂರಿಟಿ ಇಟ್ಟಿದ್ದಾರೆ. ಘಟನೆ ನಡೆದು 24 ಗಂಟೆಯಾಗಿದೆ. ಕೆಲವು ತನಿಖೆ ಆಯಾಮಗಳನ್ನ ಮಾಧ್ಯಮಗಳ ಮುಂದೆ ಹೇಳಲು ಸಾಧ್ಯವಿಲ್ಲ. ತನಿಖೆ ಪ್ರಗತಿಯಲ್ಲಿದ್ದು 5 ಮಂದಿ ಇನ್ಸ್‌ಪೆಕ್ಟರ್ ಗಳ ನೇತೃತ್ವದಲ್ಲಿ ತಂಡ ಮಾಡಿದ್ದೇವೆ. ಆದಷ್ಟು ಬೇಗ ಆರೋಪಗಳನ್ನು ಸೆರೆ ಹಿಡಿಯುತ್ತೇವೆ.

ಕಳೆದ 6 ತಿಂಗಳ ಹಿಂದೆ ಹುಣಸೂರಿನ ಎಲ್ಲಾ ಚಿನ್ನಾಭರಣ ಮಾಲೀಕರ ಸಭೆ ಮಾಡಿದ್ದೇವೆ. ಎಲ್ಲರೂ ನಿಯಮ ಪಾಲನೆ ಸೂಚನೆ ನೀಡಿದ್ದೆವು. ಸಾರ್ವಜನಿಕರು, ಗ್ರಾಹಕರ ಸುರಕ್ಷತೆಗೂ ವ್ಯವಸ್ಥೆ ಮಾಡಿಕೊಳ್ಳಲು ಸೂಚನೆ ನೀಡಲಾಗಿತ್ತು. ಈಗ ಅದನ್ನು ಪರಿಶೀಲನೆ ಮಾಡುತ್ತಿದ್ದೇವೆ. ರಾಬರಿ ಪ್ರಕರಣದ ಬಗ್ಗೆ ಈ ರೀತಿ ಎಸ್ಪಿ ಡಾ. ವಿಷ್ಣುವರ್ಧನ್ ಪ್ರತಿಕ್ರಿಯೆ ನೀಡಿದ್ದಾರೆ.