ಮೈಸೂರು: ಅರಮನೆ ಬಳಿ ಹೀಲಿಯಂ ಸಿಲಿಂಡರ್ ಸ್ಪೋಟ ಪ್ರಕರಣ ಕುರಿತಂತೆ ಎನ್ ಐ ಎ ತನಿಖೆ ನಡೆಸುವಂತೆ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ.
ಸಿಲಿಂಡರ್ ಬ್ಲಾಸ್ಟ್ ನಲ್ಲಿ ಮೂರು ಅಮಾಯಕ ಜೀವಗಳು ಬಲಿಯಾಗಿರುವುದು ನೋವಿನ ಸಂಗತಿ. ಘಟನೆ ಬಗ್ಗೆ ಸಂಶಯವಿದೆ. ಹೀಲಿಯಂ ಗ್ಯಾಸ್ ಬಲೂನ್ ಮಾರಾಟಗಾರರೆಂದು ಹೇಳಿಕೊಂಡಿರುವ ಉತ್ತರ ಪ್ರದೇಶದ ಸಲೀಮ್ ಸೇರಿದಂತೆ ನಾಲ್ವರು ಲಾಡ್ಜ್ ನ ಒಂದೇ ಕೊಠಡಿಯಲ್ಲಿ ತಂಗಿದ್ದರೆಂದು ಪೊಲೀಸರು ಹೇಳಿತ್ತಿದ್ದಾರೆ.
ಅವರು ಉತ್ತರ ಪ್ರದೇಶದವರೆನಾ ? ಅಥವಾ ಬೇರೆ ಕಡೆಯವರಾ ? ಎಂಬುದನ್ನು ಧೃಡಪಡಿಸಬೇಕಿದೆ. ಕರ್ನಾಟಕ ಪೊಲೀಸರು ಯೋಗ್ಯವಾದ ರಿಸಲ್ಟ್ ನೀಡಲ್ಲ.ಹೀಗಾಗಿ ತನಿಖೆಯನ್ನು ಎನ್.ಐ.ಎ.ಗೆ ವಹಿಸುವುದು ಸೂಕ್ತ ಎಂದು ಆಗ್ರಹಿಸಿದರು.

