ಮೈಸೂರು : 48 ಗಂಟೆಯಲ್ಲಿ ಎರಡು ಹುಲಿ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಮೇಟಿಕುಪ್ಪೆ ವಲಯದಲ್ಲಿ ಸೆರೆಯಾಗಿರುವ ಘಟನೆ ನಡೆದಿದೆ.
ಹೆಚ್.ಡಿ ಕೋಟೆ ತಾಲ್ಲೂಕಿನ ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆಯ ಭರ್ಜರಿ ಕಾರ್ಯಾಚರಣೆ ನಡೆಸಿದೆ. 48 ಗಂಟೆಯಲ್ಲಿ ಒಂದು ಗಂಡುಹುಲಿ, ಒಂದು ಹೆಣ್ಣು ಹುಲಿ ಸೆರೆಯಾಗಿದೆ.
ಮೇಟಿಕುಪ್ಪೆ ವಲಯದ ಕಾಡಂಚಿನ ಗ್ರಾಮಗಳಲ್ಲಿ ಜೋಡಿ ಹುಲಿ ಆತಂಕ ಸೃಷ್ಟಿಸಿದೆ. ಅಗಸನಪುರ, ಕಲ್ಲಟ್ಟಿ ಮೇಟಿಕುಪ್ಪೆ ಕೆ.ಎಂ ಹಳ್ಳಿ ಸೊಳ್ಳೆಪುರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಹುಲಿ ಉಪಟಳ ಕಂಡುಬಂದಿದೆ.
ಕಾಡಂಚಿನ ಗ್ರಾಮಗಳಲ್ಲಿ ಜಾನುವಾರುಗಳ ಮೇಲೆ ಜೋಡಿ ಹುಲಿ ದಾಳಿ ಮಾಡುತ್ತಿತ್ತು. ಹುಲಿ ಸೆರೆಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಕ್ಯಾಮರಾ ಟ್ರ್ಯಾಪ್, ಥರ್ಮಲ್ ಡ್ರೋಣ್‌ನಲ್ಲಿ ಹುಲಿಗಳ ಚಲನವಲನದ ಮೇಲೆ ನಿಗಾ ಇರಿಸಲಾಗಿದೆ.
ಬೇಟೆಯಾಡಿದ ಹಸು ಭಕ್ಷಿಸಲು ಬಂದಾಗ ಅರಣ್ಯ ಸಿಬ್ಬಂದಿಯಿಂದ ಹುಲಿ ತಪ್ಪಿಸಿಕೊಂಡಿತ್ತು. ಸಾಕಾನೆಗಳ ಮೂಲಕ ಕಾರ್ಯಾಚರಣೆ ನಡೆಸಿ ಕೊನೆಗೂ ಜೋಡಿ ಹುಲಿ ಸೆರೆಯಾಗಿದೆ. ಮೊನ್ನೆ ಮೇಟಿಕುಪ್ಪೆಯಲ್ಲಿ ಆರು ವರ್ಷದ ಗಂಡು ಸೆರೆಯಾಗಿದೆ.
ನಿನ್ನೆ ಮೇಟಿಕುಪ್ಪೆ ಸಮೀಪದ ಅಗಸನಪುರದ ಬಳೊ ಹನ್ನೊಂದು ವರ್ಷದ ಹೆಣ್ಣುಹುಲಿ ಸೆರೆಯಾಗಿದೆ. ಬೇಟೆಯಾಡುವ ಶಕ್ತಿ ಹೆಣ್ಣುಹುಲಿ ಕಳೆದುಕೊಂಡಿತ್ತು. ಹೀಗಾಗಿ ಸಾಕು ಪ್ರಾಣಿಗಳ ಮೇಲೆ ಹುಲಿ ದಾಳಿ ಮಾಡುತ್ತಿತ್ತು. ಹುಲಿ ಸೆರೆಯಿಂದ ಕಾಡಂಚಿನ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

