News Karnataka Kannada
Tuesday, April 30 2024
ಹಾಸನ

ಮೀಸಲು ಕ್ಷೇತ್ರದ ಮುಂದಿನ ಅಧಿಪತಿ ಯಾರು: ಮತದಾರರಲ್ಲಿ ಕುತೂಹಲ

Who will be the next ruler of the reserved constituency: Voters are curious
Photo Credit : News Kannada

ಸಕಲೇಶಪುರ: ಸಕಲೇಶಪುರ – ಆಲೂರು ಕಟ್ಟಾಯ ಹೋಬಳಿಯ ಮೀಸಲು ವಿಧಾನಸಭಾ ಕ್ಷೇತ್ರದ ಮುಂದಿನ ಶಾಸಕರು ಯಾರು ಎಂಬ ಪ್ರಶ್ನೆ ಮತದಾರರಲ್ಲಿ ಕುತೂಹಲ ಮೂಡಿಸಿದೆ.

ಹಾಲಿ ಶಾಸಕರು ಆದ ಎಚ್ ಕೆ ಕುಮಾರಸ್ವಾಮಿ ಮೂರು ಬಾರಿ ಶಾಸಕರಾಗಿ ಅಧಿಕಾರ ಅನುಭವಿಸಿ ನಾಲ್ಕನೇ ಬಾರಿಗೆ ಚುನಾವಣೆ ಎದುರಿಸಲು ಸಜ್ಜಾಗಿದ್ದಾರೆ. ಶಾಸಕರು ತಮ್ಮದೇ ಪಕ್ಷದ ಕೆಲವು ಮುಖಂಡರು ಹಾಗೂ ಕಾರ್ಯಕರ್ತರ ವಿರೋಧದ ನಡುವೆಯೂ, ಪಕ್ಷ ತೊರೆಯುವವರು ಒಂದು ಕಡೆಯಾದರೆ ಹಲವು ವರ್ಷಗಳಿಂದ ತಾಲೂಕ್ ಕಮಿಟಿ ಬದಲಾವಣೆ ಆಗಿಲ್ಲ ಎಂದು ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಅಸಮಾಧಾನ ಮನೆ ಮಾಡಿದೆ. ಶಾಸಕರು ಮಾತ್ರ ಚುನಾವಣೆ ಸಂದರ್ಭದಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡುವ ಮೂಲಕ ಕ್ಷೇತ್ರದಾದ್ಯಂತ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ.

ಬಿಜೆಪಿ ಇನ್ನು ಅಭ್ಯರ್ಥಿ ಘೋಷಣೆ ಆಗದೇ ಇದ್ದರೂ, ಮಾಜಿ ಶಾಸಕರಿಬ್ಬರು ಹಾಗೂ ಕೆಲವು ಹಳೆಯ ನಾಯಕರು ನಾರ್ವೆ ಸೋಮಶೇಖರ್ ಮತ್ತು ಜಿ ಟಿ ವೆಂಕಟೇಶ್ ಅವರನ್ನು ಸೂಚಿಸಿದ್ದು ಕಳೆದ ಬಾರಿ ನಾರ್ವೆ ಸೋಮಶೇಖರ್ ಕಡಿಮೆ ಅಂತರದಲ್ಲಿ ಎಚ್ ಕೆ ಕುಮಾರಸ್ವಾಮಿ ವಿರುದ್ಧ ಪರಭವಗೊಂಡಿದ್ದರು. ನಂತರದ ದಿನಗಳಲ್ಲಿ ಕ್ಷೇತ್ರದಲ್ಲಿ ಕಣ್ಮರೆಯಾಗಿ ಚುನಾವಣೆ ಸಮೀಪದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮತ್ತು ವೆಂಕಟೇಶ್ ಅವರು ಸ್ಥಳೀಯ ಅವರೇ ಆಗಿದ್ದು ಕ್ಷೇತ್ರದ ಸಮಸ್ಯೆಗಳ ಬಗ್ಗೆ ಅರಿವಿದೆ ಆದ್ದರಿಂದ ಈ ಬಾರಿ ಟಿಕೆಟ್ ನೀಡಿದರೆ ಶಾಸಕ ಕುಮಾರಸ್ವಾಮಿ ಅವರಿಗೆ ನೀಡಲು ಪೈಪೋಟಿ ನೀಡಲು ಸಮರ್ಥ ಅಭ್ಯರ್ಥಿಯಾಗಿದ್ದು, ಸ್ಥಳೀಯರ ಬೆಂಬಲವಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತದೆ.

ಈ ಇಬ್ಬರಲ್ಲಿ ಒಬ್ಬರು ಅಭ್ಯರ್ಥಿ ಆಗಬಹುದೇನೋ ಲೆಕ್ಕಾಚಾರದ ನಡುವೆ ಹಾಸನ ಕ್ಷೇತ್ರದ ಹಾಲಿ ಶಾಸಕ ವಿಜಯೇಂದ್ರ ಆಪ್ತ ಹಾಗೂ ಹಾಸನ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಕಮಲ ಅರಳಿಸಿದ ಪ್ರೀತಂ ಎ ಗೌಡ ಅವರ ಪ್ರಭಾವ ಮೀಸಲು ಕ್ಷೇತ್ರದ ವರೆಗೂ ವಿಸ್ತರಿಸಿ ಬಿಜೆಪಿ ಹಾಗೂ ಆಕಾಂಕ್ಷಿ ಸಿಮೆಂಟ್ ಮಂಜುಗೆ ಬೆಂಬಲವಾಗಿ ನಿಂತಿದ್ದು ಟಿಕೆಟ್ ಸಿಗುವ ಭರವಸೆಯಲ್ಲೇ ಸಿಮೆಂಟ್ ಮಂಜು. ಕಾಂಗ್ರೆಸ್ ಅಭ್ಯರ್ಥಿ ಎಂದು ಮೊದಲ ಪಟ್ಟಿಯಲ್ಲಿ ಮುರಳಿ ಮೋಹನ್ ಹೆಸರು ಘೋಷಣೆ ಆಗಿದ್ದರು ಕೂಡ ಮುರುಳಿ ಮೋಹನ್ ತಮಿಳುನಾಡು ಮೂಲದ ವ್ಯಕ್ತಿಗೆ ಇಲ್ಲಿ ಮತ ನೀಡುವವರು ಯಾರು ? ಮತ್ತು ಪರಿಶಿಷ್ಟ ಜಾತಿಯಲ್ಲಿ ಎಡ ಬಲ ಎಂಬ ಪಂಕ್ತಿ ಲೆಕ್ಕಚಾರದಲ್ಲಿ ಮುರಳಿ ಮೋಹನ್ ಎಡ ಪಂಕ್ತಿ ಗೆ ಸೇರಿದವರು ಈ ಕ್ಷೇತ್ರದಲ್ಲಿ ಎಡ ಪಂಕ್ತಿ ಸಮುದಾಯ ಬಹಳ ವಿರಳವಿದೆ ಒಟ್ಟಿನಲ್ಲಿ ಮುರಳಿ ಮೋಹನ್ ಕಾಂಗ್ರೆಸ್ ಅಭ್ಯರ್ಥಿಯಾದರು ಕಾಂಗ್ರೆಸ್ ಗುಂಪುಗಾರಿಕೆ ಬಣಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಕ್ಷೇತ್ರದಲ್ಲಿ ಸ್ಥಳೀಯ ಕಾಂಗ್ರೆಸ್ ವಲಯದಲ್ಲಿ ಬಾರಿ ವಿರೋಧ ವ್ಯಕ್ತವಾಗಿದೆ. ಸ್ಥಳೀಯರಾಗಿ ಮೂವರು ಟಿಕೆಟ್ ಆಕಾಂಕ್ಷಿಗಳು ಇದ್ದರೂ ಹೈಕಮಾಂಡ್ ಲೆಕ್ಕಿಸದೆ ಮುರುಳಿ ಮೋಹನ್ ಅಭ್ಯರ್ಥಿ ಎಂದು ಘೋಷಿಸಿರುವುದು ತೀವ್ರ ವಿರೋಧಕ್ಕೆ ಕಾರಣವಾಗಿದೆ.

ಮುರುಳಿ ಮೋಹನ್ ಸಿದ್ದರಾಮಯ್ಯ ಬಣವೋ ಅಥವಾ ಡಿ ಕೆ ಶಿವಕುಮಾರ್ ಬಣವೋ ಎನ್ನುತ್ತಾ ಇನ್ನು ಕಾಂಗ್ರೆಸ್ ಮುಖಂಡರು ಮೀನಮೇಶ ಎಣಿಸುತ್ತಿರುವುದು ಕ್ಷೇತ್ರದಲ್ಲಿ ಕೇಳಿಬರುತ್ತಿದೆ. ಈ ನಡುವೆ ಬೇಲೂರು ಕ್ಷೇತ್ರದ ಮಾಜಿ ಶಾಸಕ ಡಿ. ಮಲ್ಲೇಶ್ ಒಂದು ಬಾರಿ ಈ ಕ್ಷೇತ್ರದಲ್ಲಿ ಕುಮಾರಸ್ವಾಮಿ ವಿರುದ್ಧ ಸೋಲನ್ನು ಅನುಭವಿಸಿ ಮತ್ತು ಟಿಕೆಟ್ ಗೆ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದು , ಅವರ ಬೆಂಬಲಿಗರಿಂದ ಮುರುಳಿ ಮೋಹನ್ ಗೆ ಬಾರಿ ವಿರೋಧ ವ್ಯಕ್ತವಾಗುತ್ತಿದೆ.. ಈ ನಿಟ್ಟಿನಲ್ಲಿ ಯಾವ ಪಕ್ಷದ ಅಭ್ಯರ್ಥಿ ವಿಜಯಮಾಲೆಯನ್ನು ತಮ್ಮದಾಗಿಸಿಕೊಳ್ಳುತ್ತಾರೆ ಎಂಬುದು ಎಂಬುದನ್ನು ಚುನಾವಣೆ ಫಲಿತಾಂಶದ ವರೆಗೆ ಕಾದು ನೋಡಬೇಕಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು