News Karnataka Kannada
Saturday, April 27 2024
ಹಾಸನ

ತಿ.ನರಸೀಪುರ: ಸೋಮನಾಥಪುರಕ್ಕೆ ಯುನೆಸ್ಕೋ ತಜ್ಞರ ತಂಡ

Unesco
Photo Credit : By Author

ತಿ.ನರಸೀಪುರ: ಸೋಮನಾಥಪುರದಲ್ಲಿರುವ ಪ್ರಸನ್ನ ಕೇಶವ ದೇವಾಲಯವನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸುವ ಉದ್ದೇಶದಿಂದ ಟಿಯಾಂಗ್ ಕಿಯಾನ್ ಬೂನ್ ನೇತೃತ್ವದ ಯುನೆಸ್ಕೋ ತಜ್ಞರ ತಂಡ ಭೇಟಿ ನೀಡಿ ಪರಿಶೀಲಿಸಿತು.

ಹೊಯ್ಸಳರ ಶೈಲಿಯಲ್ಲಿರುವ ದೇವಾಲಯವು ಹೊಯ್ಸಳ ಕಾಲದಲ್ಲಿ ನಿರ್ಮಾಣವಾಗಿದ್ದು,ಶಿಲ್ಪಕಲೆಯಲ್ಲಿ ಅದ್ಭುತ ರಚನೆ ಆಗಿದೆ. ಶಿಲ್ಪಕಲೆಯಲ್ಲಿ ನೈಪುಣ್ಯ ಮೆರೆಯಲಾಗಿದೆ. ಗರ್ಭಗುಡಿಪ್ರಾಂಗಣ, ಕೆತ್ತನೆ ಕುಸುರಿ ಮತ್ತು ಅದ್ಭುತ ಕದಳಿ ಹಣ್ಣಿನ ಚಿತ್ರಗಳನ್ನು ತಜ್ಞರ ತಂಡ ವೀಕ್ಷಿಸಿದರು.

ಟಿಯಾಂಗ್ ಕಿಯಾನ್ ಬೂನ್ ಅವರಿಗೆ ಇನ್ಫೋಸಿಸ್ ಫೌಂಡೇಶನ್‌ನ ಸುಧಾಮೂರ್ತಿ ಹಾಗೂ ಭಾರತೀಯ ಪ್ರಾಚ್ಯವಸ್ತು ಸಂಗ್ರಹಾಲಯ ಮತ್ತು ರಾಜ್ಯ ಪ್ರಾಚ್ಯ ವಸ್ತು ಅಧಿಕಾರಿಗಳು ದೇವಾಲಯದ ಶಿಲ್ಪಕಲೆ, ಐತಿಹ್ಯಗಳು ಹಾಗೂ ಹೊಯ್ಸಳರ ಕಾಲದ ಶಿಲ್ಪಕಲೆ, ಕುಸುರಿ ಕೆತ್ತನೆ ಗಳ ಬಗ್ಗೆ ವಿವರಣೆ ನೀಡಿದರು.

ದೇವಾಲದಲ್ಲಿರುವ ಬಳಪದ ಕಲ್ಲಿನಲ್ಲಿ ಅತ್ಯಂತ ಸೂಕ್ಷ್ಮ ಕೆತ್ತನೆಯ ಕಲಾ ನೈಪುಣ್ಯತೆ, ಮದನಿಕೆಯರ ಶಿಲ್ಪಗಳು, ನಾಟ್ಯ ಭಂಗಿಗಳು, ಮದನಿಕಾ ವಿಗ್ರಹಗಳು (ಆಕರ್ಷಕವಾದ ಸೊಗಸಾದ ನಾಟ್ಯ ಭಂಗಿಗಳು) ಶಿಲ್ಪ ಕಲೆ, ನಾಜೂಕಿನ, ಕುಸುರಿ ಕೆಲಸಗಳನ್ನು ಅತ್ಯಂತ ಆಸಕ್ತಿಯಿಂದ ಗಮನಿಸಿದ ಟಿಯಾಂಗ್ ಕಿಯಾನ್ ಬೂನ್ ಮೆಚ್ಚುಗೆ ವ್ಯಕ್ತಪಡಿಸಿದರು. ಈ ದೇವಾಲಯವನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಲು ಶಿಫಾರಸ್ಸು ಮಾಡಲಾಗುವುದು. ಉನ್ನತಮಟ್ಟದ ಸಮಿತಿಯು ನಿರ್ಧಾರ ಕೈಗೊಳ್ಳಲಿದೆ. ನಂತರ ಸ್ಥಳೀಯರೊಂದಿಗೆ ಸಭೆ ನಡೆಸಿ ಸಾರ್ವಜನಿಕ ಅಭಿಪ್ರಾಯವನ್ನು ತಿಳಿದುಕೊಳ್ಳಲಾಯಿತು. ಟಿಯಾಂಗ್ ಕಿಯಾನ್ ಬೂನ್ ರವರು, ದೇವಾಲಯವು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರುವುದರಿಂದ ಆಗುವ ಸಾಧಕ-ಬಾಧಕಗಳ ಬಗ್ಗೆ ಜನರೊಂದಿಗೆ ಸಂವಾದ ನಡೆಸಿದರು.

ಸಭೆಯಲ್ಲಿ ಮಾತನಾಡಿದ ಇನ್ಫೋಸಿಸ್ ಫೌಂಡೇಶನ್‌ನ ಸುಧಾ ಮೂರ್ತಿ ಮಾತನಾಡಿ, ಈ ದೇವಾಲಯ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆಯಾದಲ್ಲಿ ವಿಶ್ವಮಟ್ಟದಲ್ಲಿ ಹೆಸರುವಾಸಿಯಾಗುತ್ತದೆ. ನಾನಾ ದೇಶಗಳಿಂದ ಹಲವು ಪ್ರವಾಸಿಗರು ಇಲ್ಲಿಗೆ ಆಗಮಿಸುವರು. ಹಾಗಾಗಿ ಇಲ್ಲಿನ ಜನರ ವ್ಯಾಪಾರ ವಹಿವಾಟು ಹೆಚ್ಚಾಗಿ ಸ್ಥಳೀಯರು ಆರ್ಥಿಕ ಸಬಲತೆ ಹೊಂದಬಹುದು ಎಂದು ತಿಳಿಸಿದರು

ರಾಜ್ಯ ಪುರಾತತ್ವ ಇಲಾಖೆ ಆಯುಕ್ತರಾದ ದೇವರಾಜ್ ಮಾತನಾಡಿ ಯುನೆಸ್ಕೋ ತಜ್ಞರ ತಂಡ ಸೋಮನಾಥಪುರ ದೇವಾಲಯದ ಶಿಲ್ಪಕಲೆಗಳನ್ನು ವೀಕ್ಷಣೆ ಮಾಡಿ, ವರದಿಯನ್ನು ಯುನೆಸ್ಕೋ ಸಂಸ್ಥೆಗೆ ಸಲ್ಲಿಸುವರು. ಮುಂದಿನ ದಿನಗಳಲ್ಲಿ ಈ ದೇವಾಲಯ ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರ್ಪಡೆಯಾಗುವ ನಿರೀಕ್ಷೆಯಿದೆ. ರಾಜ್ಯದ ಹಂಪಿ ಮತ್ತು ಪಟ್ಟದಕಲ್ಲು ಐತಿಹಾಸಿಕ ಸ್ಥಳಗಳು ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರ್ಪಡೆಯಾಗಿದ್ದು, ಈಗ ಅದ್ಭುತ ಕೆತ್ತನೆ ಶಿಲ್ಪಕಲೆ ಹೊಂದಿರುವ ಬೇಲೂರು, ಹಳೇಬೀಡು ಮತ್ತು ಸೋಮನಾಥಪುರ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರುವ ಅವಕಾಶ ಬಂದಿದೆ. ಈ ಪಟ್ಟಿಗೆ ಸೇರಿದ ನಂತರ ಮೂಲಭೂತ ಸೌಕರ್ಯಗಳು ಹೆಚ್ಚಾ ಗಲಿದ್ದು, ಪ್ರವಾಸೋದ್ಯಮ ವೃದ್ಧಿಸಲಿದೆ ಎಂದು ತಿಳಿಸಿದರು.

ಸೋಮನಾಥಪುರ ಗ್ರಾ. ಪಂ.ಉಪಾಧ್ಯಕ್ಷ ಸಿದ್ದಪ್ಪ ಮಾತನಾಡಿ,ಈ ದೇವಾಲಯ ವಿಶ್ವ ಪಾರಂಪರಿಕ ತಾಣವಾಗಿ ಆಯ್ಕೆಯಾದಲ್ಲಿ ನಮ್ಮ ದೇಶದ ಶಿಲ್ಪಕಲೆಯ ಹೆಗ್ಗಳಿಕೆಯ ವಿಶ್ವದಾದ್ಯಂತ ಪಸರಿಸಲಿದೆ ಎಂದರು.

ಭಾರತೀಯ ಪ್ರಾಚ್ಯ ವಸ್ತು ಸಂಗ್ರಹಾಲಯ ಇಲಾಖೆ ಅಪರ ಮಹಾ ನಿರ್ದೇಶಕರಾದ ಜಾಹನ್ವಿಜ್ ಶರ್ಮಾ, ಎ.ಎಸ್.ಐ ನಿರ್ದೇಶಕರಾದ ಮದನ್ ಸಿಂಗ್ ಚೌಹಾಣ್, ಪ್ರಾದೇಶಿಕ ನಿರ್ದೇಶಕರಾದ ಡಾ. ಜಿ ಮಹೇಶ್ವರಿ, ಎ.ಎಸ್ ಐ ಅಧಿಕಾರಿಗಳಾದ ಬಿಪಿನ್ ಚಂದ್ರ, ಜಿಲ್ಲಾಧಿಕಾರಿ ಬಗಾದಿ ಗೌತಮ್, ಪುರಾತತ್ವ ಇಲಾಖೆ ಜಂಟಿ ನಿರ್ದೇಶಕಿ ಮಂಜುಳಾ, ತಹಶೀಲ್ದಾರ್ ಸಿ.ಜಿ.ಗೀತಾ, ಉಪತಹಶೀಲ್ದಾರ್ ಸುಬ್ರಮಣ್ಯ,ತಾ.ಪಂ. ಇಓ ಸಿ.ಕೃಷ್ಣ, ಮಾಜಿ.ಜಿ. ಪಂ. ಸದಸ್ಯ ಜಯಪಾಲ್ ಭರಣಿ, ಗ್ರಾ.ಪಂ.ಅಧ್ಯಕ್ಷೆ ಅರ್ಚನಾ, ಮಾಜಿ ತಾ.ಪಂ. ಸದಸ್ಯ ರಾಮಲಿಂಗಯ್ಯ, ಮಾಜಿ ಅಧ್ಯಕ್ಷ ಕಾಂತರಾಜು, ಅಶೋಕ, ಪಿಡಿಓ ಸಂತೋಷ್ ಕುಮಾರ್, ಕಾರ್ಯದರ್ಶಿ ಸುಧೀರ್, ಕಂದಾಯ ನಿರೀಕ್ಷಕ ಶ್ಯಾಮ, ಗ್ರಾಮಲೆಕ್ಕಿಗ ಆನಂದ, ಗಣೇಶ್, ಪ್ರದೀಪ, ಮಹದೇವಸ್ವಾಮಿ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು