News Karnataka Kannada
Monday, May 13 2024
ಹಾಸನ

ಸಕಲೇಶಪುರ: ಸೊಸೆಗೆ ವರದಕ್ಷಿಣ ಕಿರುಕುಳ, ಮೂವರ ಮೇಲೆ ಎಫ್‌ಐಆರ್

Sakleshpur: FIR lodged against three for dowry harassment of daughter-in-law
Photo Credit : News Kannada

ಸಕಲೇಶಪುರ: ಸೊಸೆಗೆ ವರದಕ್ಷಿಣ ಕಿರುಕುಳ ಸೇರಿ ಹಲವು ರೀತಿಯ ತೊಂದರೆ ನೀಡಿದ ನೀಡಿದ ಹಾಗೂ ಗರ್ಭಪಾತ ಮಾಡಿಸಿದ ಆರೋಪದಡಿ ಕೆಜಿಎಫ್ ಅಧ್ಯಕ್ಷ ಹೆಚ್.ಟಿ. ಮೋಹನ್ ಕುಮಾರ್, ಅವರ ಪತ್ನಿ ಜ್ಯೋತಿ ಮೋಹನ್, ಪುತ್ರ ಯಶಾಂಕ್ ಹಾಗೂ ಹಾಸನದ ಜೈಕಿರಣ್ ಗ್ರಾಮಾಂತರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಮೈಸೂರು ಮೂಲದ ವಿನುತಾ( ಹೆಸರು ಬದಲಿಸಲಾಗಿದೆ) ಎಂಬು ವರನ್ನು ೨೦೨೧ ಮಾರ್ಚ್ ೩ ರಂದು ತಾಲೂಕಿನ ಹುರುಡಿ ಗ್ರಾಮದ ಹೆಚ್.ಎಂ.ಯಶಾಂಕ್ ಅವರೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಆ ಸಂದರ್ಭದಲ್ಲಿ ೪೦-೪೫ ಗ್ರಾಂ ಚಿನ್ನಾಭರಣ ನೀಡಲಾಗಿತ್ತು. ಅಲ್ಲದೆ ಒತ್ತಾಯ ಪೂರ್ವಕವಾಗಿ ೨ ಲಕ್ಷ ರೂ. ವರದಕ್ಷಿಣೆಯಾಗಿ ವೀಣಾ ಅತ್ತೆ-ಮಾವ ಪಡೆದುಕೊಂಡಿದ್ದರು.
ಮದುವೆಯಾದ ಒಂದು ತಿಂಗಳ ನಂತರ ಗಂಡ ಯಶಾಂಕ್, ವಿಕೃತ ಮನಸ್ಥಿತಿಯಿಂದ ತೊಂದರೆ ತೊಂದರೆ ಕೊಡಲು ಆರಂಭಿಸಿದರು ಎಂದು ದೂರಲಾಗಿದೆ.

ಪ್ರತಿ ದಿನ ರಾತ್ರಿ ಗಂಟೆವರೆಗೂ ಕ್ರೈಂ ಸ್ಟೋರಿ ನೋಡುತ್ತಾ ಮಾರನೇ ದಿನ ಅದನ್ನು ನನ್ನ ಮೇಳೆ ಪ್ರಯೋಗ ಮಾಡುವ ರೀತಿಯಲ್ಲಿದ್ದರು ಎಂದು ನೊಂದ ವೀಣಾ ಅಳಲು ತೋಡಿಕೊಂಡಿದ್ದಾರೆ.ಗಂಡ ಹಾಗೂ ಅತ್ತೆ-ಮಾವ ಧನದಾಯಿಗಳಾಗಿದ್ದು, ತವರು ಮನೆಯಿಂದ ಪದೇ ಪದೇ ಹಣ ತರಬೇಕೆಂದು ಒತ್ತಾಯಿಸಿ, ಕಿರುಕುಳ ನೀಡಿ ೮-೯ ಲಕ್ಷ ರೂ.ಗಳನ್ನು ಒತ್ತಾಯಪೂರ್ವಕವಾಗಿ ಪಡೆದುಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಅತ್ತೆ-ಮಾನ ನನಗೆ ಊಟ ಕೊಡುತ್ತಿರಲಿಲ್ಲ. ಪ್ರತಿನಿತ್ಯ ಕಿರುಕುಳದ ಮಾತುಗಳನ್ನಾಡಿ ಮೂರ್‍ನಾಲ್ಕು ದೈಹಿಕ ಹಲ್ಲೆ ಮಾಡಿದ್ದಾರೆ.
ಮದುವೆಯಾಗಿ ವರ್ಷದ ನಂತರ ನಮ್ಮ ಮನೆಯವರಿಗೆ ಕಿರುಕುಳದ ವಿಷಯ ತಿಳಿಸಿದ ನಂತರ ಹಿರಿಯರ ಸಮಕ್ಷಮದಲ್ಲಿ ರಾಜಿ ಪಂಚಾಯ್ತಿ ಮಾಡಿ ಬುದ್ಧಿವಾದ ಹೇಳಿದಾಗ, ಇನ್ನು ಮುಂದೆ ಸರಿಯಾಗಿ ಜೀವನ ಮಾಡುತ್ತೇನೆ ಎಂದು ಹೇಳಿದ್ದರು. ಅದಾದ ಬಳಿಕ ಮತ್ತೆ ಕಿರುಕಳ ನೀಡಲು ಆರಂಭಿಸಿದರು. ನಮ್ಮ ತಂದೆಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ತಂದೆಯ ಆಸ್ತಿ ಹೆಣ್ಣು ಮಕ್ಕಳಿಗೆ ಸೇರಬೇಕು. ಆ ಆಸ್ತಿಯನ್ನು ಈಗಲೇ ತರಬೇಕು ಎಂದು ಒತ್ತಡ ಹಾಕಿದ್ದಲ್ಲದೆ ತಂದೆಯ ನಿವೃತ್ತಿ ಹಣವನ್ನೂ ತೆಗೆದುಕೊಂಡು ಬಾರ ಎಂದು ಕಿರುಕುಳ ನೀಡಿದ್ದಾರೆ.

ಎಲ್ಲಕ್ಕಿಂತ ಮುಖ್ಯವಾಗಿ ತಾನು ಎರಡು ತಿಂಗಳ ಗರ್ಭಿಣಿಯಾಗಿದ್ದಾಗ ಅತ್ತೆ ಜ್ಯೋತಿ ಮೋಹನ್ ಅವರು ದೈಹಿಕ ಹಲ್ಲೆ ಮಾಡಿ ಹೊಟ್ಟೆಗೆ ಒದ್ದಿದ್ದರಿಂದ ಗರ್ಭಪಾತವಾಗಿದೆ ಎಂದು ವೀಣಾ ಅಳಲು ತೋಡಿ ಕೊಂಡಿದ್ದಾರೆ. ಈ ಎಲ್ಲದಕ್ಕೂ ಪ್ರಚೋದನೆ ನೀಡುತ್ತಿದ್ದ ಹಾಸನದ ಜೈಕಿರಣ್ ಅವರೇ ನೇರ ಹೊಣೆಗಾರರಾಗಿದ್ದಾರೆ.

೨೦೨೨ ಏ.೩ ರಿಂದ ೭ ರ ವರೆಗೆ ಊಟ ತಿಂಡಿ ನೀಡದೆ, ವಿವಸ್ತ್ರ ಗೊಳಿಸಿ ಕೊಡಬಾರದ ಹಿಂಸೆ ಕೊಟ್ಟು ಮನೆಯಿಂದ ಹೊರ ಹಾಕಿದ್ದರು. ಈ ವಿಚಾರವನ್ನು ತವರು ಮನೆಗೆ ಹೇಳಿದಾಗ ಅವರೊಂದಿಗೆ ಜಗಳ ಆಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದರು.
ನನಗೆ ಮಾನಸಿಕ, ದೈಹಿಕ ಹಿಂಸೆ, ಹಲ್ಲೆ, ಗರ್ಭಪಾತ ಮಾಡಿಸಿರುವ, ವರದಕ್ಷಿಣೆ ಕಿರುಕುಳ ನೀಡಿ, ಕೌಟುಂಬಿಕ ದೌರ್ಜನ್ಯ ಮಾಡಿರುವ ಪತಿ ಯಶಾಂತ್, ಮಾವ ಮೋಹನ್ ಕುಮಾರ್, ಅತ್ತೆ ಜ್ಯೋತಿ ಹಾಗೂ ಜೈಕಿರಣ್ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ಕಳೆದ ಜ.೨೯ ರಂದು ನೀಡಿರುವ ದೂರಿನಲ್ಲಿ ಮನವಿ ಮಾಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು