News Karnataka Kannada
Tuesday, April 30 2024
ಹಾಸನ

ಮಲೆನಾಡು ರಸ್ತೆಗಳಿಗೆ ಕಳಪೆ ಕಾಮಗಾರಿ- ಜನತೆ ಆಕ್ರೋಶ

Poor work on Malnad roads: People protest
Photo Credit : News Kannada

ಬೇಲೂರು: ಬೇಲೂರು-ಬಿಕ್ಕೋಡು-ಸಕಲೇಶಪುರ ರಸ್ತೆ ತೀವ್ರವಾಗಿ ಹಾಳಾಗಿದ್ದು, ತಾತ್ಕಾಲಿಕವಾಗಿ ನಡೆಯುತ್ತಿರುವ ಗುಂಡಿ ಮುಚ್ಚುವ ತೇಪೆ ಕಾಮಗಾರಿ ಅತ್ಯಂತ ಕಳಪೆ ಮತ್ತು ವಿಳಂಭವಾಗಿ ಕೂಡಿದೆ. ಗುತ್ತಿಗೆದಾರರು ಬೇಕಾಬಿಟ್ಟಿ ಕೆಲಸ ಮಾಡುತ್ತಿದ್ದಾರೆ.

ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಜಾಣ ಮೌನಕ್ಕೆ ಜಾರಿದ್ದಾರೆ. ರಸ್ತೆಯ ಸಂಪೂರ್ಣ ದೂಳಿನಿಂದ ಜನತೆ ಅನಾರೋಗ್ಯದಿಂದ ನರಳುವ ಹೀನ ಸ್ಥಿತಿ ನಿರ್ಮಾಣವಾಗಿದೆ. ಶೀಘ್ರವೇ ರಸ್ತೆ ಕಾಮಗಾರಿಯನ್ನು ತ್ವರೀತ ಮತ್ತು ಗುಣಮಟ್ಟದಿಂದ ನಡೆಸಬೇಕು ಬಿಕ್ಕೋಡು ಗ್ರಾಮಸ್ಥರು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಗ್ರಾಮ ಪಂಚಾ ಯಿತಿ ಸದಸ್ಯರಾದ ಮೋಹನ್ ಮತ್ತು ಶ್ರೀನಿವಾಸ್ ಅವರು ಬೇಲೂರು-ಬಿಕ್ಕೋಡು-ಸಕಲೇಶಪುರ ರಸ್ತೆ ಕಳೆದ ನಾಲ್ಕು ವರ್ಷದಿಂದ ತೀವ್ರವಾಗಿ ಹದಗೆಟ್ಟಿದೆ. ಕಾರಣ ಇಲ್ಲಿ ಅತಿ ಭಾರವನ್ನು ಹೊತ್ತು ಬೃಹತ್ ಲಾರಿಗಳ ಸಂಚಾರದಿಂದ ರಸ್ತೆ ಗುಂಡಿ ಬಿದ್ದು ಮಳೆಗಾಲದಲ್ಲಿ ಸಂಚಾರ ಅಸಾದ್ಯವಾಗಿದೆ.

ಈ ಬಗ್ಗೆ ಎಲ್ಲರೂ ನಡೆಸಿದ ಹೋರಾಟ ಫಲದಿಂದ ಗುಂಡಿ ಮುಚ್ಚಲು ರೂ ೨.೫ ಕೋಟಿ ಹಣ ಬಿಡುಗಡೆಯಾಗಿದೆ. ಆದರೆ ಟೆಂಡರ್ ಪಡೆದ ಗುತ್ತಿಗೆದಾರನ ಅಸಡ್ಡೆಯಿಂದ ಗುಂಡಿ ಮುಚ್ಚುವ ಕೆಲಸ ತೀರ ಕಳೆಪೆಯಿಂದ ಕೂಡಿದೆ. ಇದಕ್ಕೆ ಉದಾಹರಣೆ ಎಂಬಂತೆ ಬಿಕ್ಕೋಡು ಟೌನ್ ನಡುವೆ ಹಾದು ಹೋಗುವ ಮಾರ್ಗಕ್ಕೆ ಕಳೆದ ೧೫ ದಿನದ ಹಿಂದೆ ರಸ್ತೆಯನ್ನು ಬಗೆದು ದೊಡ್ಡ-ದೊಡ್ಡ ಜಲ್ಲಿ ಹಾಕಿದವರು ನಾಪತ್ತೆಯಾಗಿದ್ದಾರೆ. ಬರುವ ವಾಹನಗಳ ಟೈರಿಗೆ ಸಿಕ್ಕ ಜಲ್ಲಿಕಲ್ಲು ಮನೆಗಳ ಗಾಜಿಗೆ ಮತ್ತು ಪಾದಚಾರಿಗಳಿಗೆ ಗಾಯ ಉಂಟು ಮಾಡುತ್ತಿದೆ. ಅಲ್ಲದೆ ಸುಡು ಬಿಸಿಲಿನಲ್ಲಿ ದೂಳಿನಿಂದ ಜನರು ನಿತ್ಯ ಆಸ್ಪತ್ರೆಗೆ ಅಲೆಯುವ ಹೀನ ಸ್ಥಿತಿ ನಿರ್ಮಾಣವಾಗಿದೆ. ನೆಪ ಮಾತ್ರಕ್ಕೆ ರಸ್ತೆಗೆ ನೀರು ಹಾಕುತ್ತಾರೆ. ಕೇಳಿದರೆ ಗುತ್ತಿಗೆದಾರ ಉಡಾಪೆಯಿಂದ ಮಾತನಾಡುತ್ತಾರೆ. ಇನ್ನು ಕಾಮಗಾರಿ ಇಂಜಿನಿಯರ್ ಗುಂಡಿ ಮುಚ್ಚುವ ಕೆಲಸ ಕಳಪೆಯಿಂದ ಕೂಡಿದೆ ನಾನು ಅನುಮತಿ ನೀಡಲ್ಲ ಎನ್ನುತ್ತಾರೆ. ನಾವುಗಳು ಯಾರಿಗೆ ದೂರು ಹೇಳಬೇಕು, ಜನಪ್ರತಿನಿಧಿಗಳು ಓಟು ಕೇಳಲು ಮನೆ-ಮನೆಗೆ ತಿರುಗುತ್ತಿದ್ದಾರೆ. ಇಲ್ಲಿ ಯಾರು ಸಾಯಬೇಕು ಎಂದು ತಿಳಿದಿಲ್ಲ ಎಂದು ಪತ್ರಿಕೆಯೊಂದಿಗೆ ತಮ್ಮ ಆಳಲು ಹೇಳಿಕೊಂಡರು.

ಕಳೆದ ೨ ತಿಂಗಳಿಂದ ಆರಂಭವಾಗಿರುವ ಗುಂಡಿ ಮುಚ್ಚುವ ಕೆಲಸಕ್ಕೆ ಕೀಮೀ ಒಂದಕ್ಕೆ ರೂ ೯೬ ಲಕ್ಷ ಹಣವನ್ನು ಸರ್ಕಾರ ಬಿಡುಗಡೆ ಮಾಡಿದೆ. ಆದರೆ ಗುತ್ತಿಗೆದಾರ ತನಗೆ ಇಷ್ಟಬಂದ ರೀತಿಯಲ್ಲಿ ಗುಂಡಿ ಮುಚ್ಚುವ ಕೆಲಸಕ್ಕೆ ಮುಂದಾಗಿದ್ದಾರೆ. ಬೇಲೂರು-ಬಿಕ್ಕೋಡು-ಸಕಲೇಶಪುರ ರಸ್ತೆ ರಾಜ್ಯ ಹೆದ್ದಾರಿಗೆ ಸಂಬಂಧ ಪಟ್ಟ ಕಾರಣ ಅಧಿಕಾರಿಗಳು ಮೌನ ಮುರಿದು ತ್ವರಿತ ಕಾಮಗಾರಿಗೆ ನಡೆಸಬೇಕು ಇಲ್ಲವಾದರೆ ರಸ್ತೆ ತಡೆದು ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಅಬ್ದುಲ್ ರಜಾಕ್,ಪಿಂಟೋ, ರಂಗಸ್ವಾಮಿ, ಧರ್ಮ, ಗಣೇಶ್, ಅರೀಶ್, ದೇವರಾಜ್, ಕಾಂತರಾಜ್, ವಸಂತ, ಪಾಲಾಕ್ಷ ಸೇರಿದಂತೆ ಇನ್ನು ಮುಂತಾದವರು ಘಟನೆಯನ್ನು ತೀವ್ರವಾಗಿ ಖಂಡಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು