News Karnataka Kannada
Friday, May 17 2024
ಹಾಸನ

ಹಾಸನ: ಮದ್ಯ ಮಾರಾಟ ನಿಲ್ಲಿಸಲು ಗ್ರಾಮಸ್ಥರ ಆಗ್ರಹ

Hassan: Villagers demand to stop sale of liquor
Photo Credit : News Kannada

ಹಾಸನ : ಬೆಟ್ಟಹಳ್ಳಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟವನ್ನು ನಿಯಂತ್ರಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಆಲೂರು ತಾಲೂಕಿನ ಸಿಂಗೋಡನಹಳ್ಳಿ, ಮಗ್ಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಬೆಟ್ಟಹಳ್ಳಿ ಗ್ರಾಮದಲ್ಲಿ ಹವ್ಯಾತವಾಗಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದೆ. ಗ್ರಾಮದಲ್ಲಿನ ಅಂಗಡಿಗಳಲ್ಲಿ ಮತ್ತು ಕೆಲ ಮನೆಗಳಲ್ಲಿ ನಿಯಮ ಬಾಹಿರವಾಗಿ ಮದ್ಯ ದಾಸ್ತಾನಿಟ್ಟು ಮಾರಾಟ ಮಾಡಲಾಗುತ್ತಿದೆ.

ಇದರಿಂದ ಮಧ್ಯಮ ಹಾಗೂ ಬಡ ವರ್ಗದ ಸಂಸಾರಗಳು ಹಾಳಾಗುತ್ತಿದ್ದು ಕೂಲಿ ಕೆಲಸ ಮಾಡಿ ಬಂದಂತಹ ಹಣವನ್ನು ಮದ್ಯಪಾನ ಕ್ಕೆ ವಿನಿಯೋಗಿಸುತ್ತಿರು ವುದರಿಂದ ಮನೆಯಲ್ಲಿ ಗಲಾಟೆ ಸಾಮಾನ್ಯವಾಗಿದೆ.

ಸಂಸಾರದಲ್ಲಿ ಸಾಮರಸ್ಯ ಇಲ್ಲದಂತಾಗಿದ್ದು ಬೆಟ್ಟಹಳ್ಳಿ ಗ್ರಾಮದಲ್ಲಿ ದಿನ ನಿತ್ಯ ಅಶಾಂತಿ ವಾತಾವರಣ ನಿರ್ಮಾಣವಾಗು ತ್ತಿದೆ. ಪುರುಷರು ಯುವಕರು ಮಧ್ಯಪಾನಕ್ಕೆ ದಾಸರಾಗುತ್ತಿದ್ದು ಸಂಸಾರಗಳ ನೆಮ್ಮದಿ ಹಾಳಾ ಗುತ್ತಿದೆ. ಆದ್ದರಿಂದ ಮದ್ಯಮಾ ರಾಟ ನಿಲ್ಲಿಸುವ ಸಂಬಂಧ ಕಟ್ಟು ನಿಟ್ಟಿನ ಸೂಚನೆಗಳನ್ನು ನೀಡಬೇಕು ಎಂದು ಮನವಿ ಸಲ್ಲಿಸಿದರು.

ಗ್ರಾಮಸ್ಥರಾದ ಆಶಾ, ಕುಸು ಮಾ, ಸುಜಾತಾ, ಸುನಿಲ್ ಕುಮಾರ್, ಸದಾಶಿವ, ರಂಗ ನಾಥ್, ತ್ಯಾಗರಾಜ್, ದಿವಾಕರ್, ಸತೀಶ್ ಇತರರು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು