News Karnataka Kannada
Monday, April 29 2024
ಹಾಸನ

ಹಾಸನ: ಕೆಲವೇ ದಿನದಲ್ಲಿ ಜೆಡಿಎಸ್ ಮುಖಂಡರ ರಾಜಕೀಯ ಭವಿಷ್ಯ ತೀರ್ಮಾನ

The political fate of JD(S) leaders will be decided in a few days.
Photo Credit : News Kannada

ಹಾಸನ: ಚುನಾವಣೆ ನಾಮಪತ್ರ ಸಲ್ಲಿಕೆ ಲೋಪ ಸೇರಿದಂತೆ ವಿವಿಧ ಕಾರಣಗಳಿಗೆ ಇನ್ನು ಕೆಲವೇ ದಿನಗಳಲ್ಲಿ ಜೆಡಿಎಸ್ ಪಕ್ಷದ ನಾಯಕರು ಮತ್ತು ಮುಖಂಡರ ರಾಜಕೀಯ ಭವಿಷ್ಯ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ತೀರ್ಮಾನ ವಾಗಲಿದ್ದು ಮುಂದಿನ ಆರು ವರ್ಷಗಳ ಕಾಲ ಯಾವುದೇ ಚುನಾವಣೆ ಯಲ್ಲಿ ಸ್ಪರ್ಧಿಸಲು ಅನರ್ಹರಾಗಲಿ ದ್ದಾರೆ ಎಂದು ವಕೀಲರಾದ ಜಿ ದೇವರಾಜೇಗೌಡ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಪ್ರಜ್ವಲ್ ರೇವ ಣ್ಣನವರನ್ನು ಅನರ್ಹಗೊಳಿಸಲು ಎಲೆಕ್ಷನ್ ಫಿಟೇಷನ್ ಸಲ್ಲಿಸಲಾ ಗಿದೆ ಪ್ರಕರಣ ವಿಚಾರಣೆಯು ಅಂತಿಮ ಘಟ್ಟದಲ್ಲಿ ಇದ್ದು ಪ್ರಜ್ವಲ್ ಅವರು ಸಲ್ಲಿಸಿರುವ ನಾಮಪತ್ರದಲ್ಲಿ ಲೋಪ ಕಂಡು ಬಂದಿದ್ದು ಅದನ್ನು ಪರಿಶೀಲಿಸುವ ಸಂದರ್ಭದಲ್ಲಿ ಎ ಮಂಜುರವರ ನಾಮಪತ್ರದಲ್ಲಿಯೂ ಕೂಡ ಲೋಪ ಕಂಡುಬಂದ ಹಿನ್ನೆಲೆಯಲ್ಲಿ ಈ ಪಿಟಿಷನ್ ವಾಪಸ್ ತೆಗಿಯಲು ಮಂಜು ಮುಂದಾ ಗಿರುವುದು ಕಂಡುಬಂದಿದೆ.

ಹಾಗೂ ವಿಧಾನ ಪರಿಷತ್ ಸದಸ್ಯರಾದ ಸೂರಜ್ ರೇವಣ್ಣ ಕೂಡ ಚುನಾವಣೆಗೆ ನಿಲ್ಲಲು ಸಾಧ್ಯವಿಲ್ಲ ಕಾರಣ ಆತನ ವಿರುದ್ಧ ಕರ್ನಾಟಕ ಉಚ್ಚ ನ್ಯಾಯಾಲ ಯದಲ್ಲಿ ಅನರ್ಹಗೊಳಿಸಲು ಎಲೆಕ್ಷನ್ ಫಿಟೇಷನ್ ನಾನೇ ಸಲ್ಲಿಸಿದ್ದು ಪ್ರಕರಣ ವಿತರಣೆ ಹಂತದಲ್ಲಿದೆ.

ಈ ಎಲ್ಲಾ ಕಾರಣಗಳಿಂದ ಎಚ್ ಡಿ ರೇವಣ್ಣ ಮತ್ತು ಕುಟುಂಬ ಹಾಗೂ ಎ.ಮಂಜು ರವರು ಆರು ವರ್ಷಗಳ ಕಾಲ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಇದನ್ನು ಅರಿತ ಇಬ್ಬರು ರಾಜೀ ಮಾಡಿಕೊಂಡು ಜಿಲ್ಲೆಯ ಜನರಿಗೆ ಮೂರು ಪಕ್ಷಗಳ ಪ್ರಾಮಾಣಿಕ ಕಾರ್ಯಕರ್ತರಿಗೆ ಮೋಸ ಮಾಡುತ್ತಿದ್ದು ತಮ್ಮ ರಾಜಕೀಯ ಲಾಭಕ್ಕಾಗಿ ಒಂದಾಗುತ್ತಿದ್ದಾರೆ ಎಂದು ಆರೋಪಿಸಿದರು.

ಜೆಡಿಎಸ್ ನ ಮುಖಂಡರು ಹಾಗೂ ನಾಯಕರು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ದೊಂಬರಾಟ ಆಡುತ್ತಿರು ವಾಗಲೇ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು ಆದಷ್ಟು ಶೀಘ್ರವಾಗಿ ತೀರ್ಪು ಹೊರ ಬಿಳಲಿದೆ ಎಂದರು. ಈ ಸಂಬಂಧ ಕಾನೂನು ಹೋರಾಟ ನಡೆಸಲಾಗುವುದು ಎಂದು ದೇವರಾಜೇಗೌಡ ತಿಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು