News Karnataka Kannada
Wednesday, May 01 2024
ಹಾಸನ

ಹಾಸನ: ರೇವಣ್ಣ ಮತ್ತವರ ಕುಟುಂಬದ ಅಬ್ಬರದ ನಡುವೆಯೂ ಅಭ್ಯರ್ಥಿಯಾಗಿಯೇ ಉಳಿದ ಸ್ವರೂಪ್

Swaroop, who remained the candidate despite the hustle and bustle of Revanna and his family
Photo Credit : News Kannada

ಹಾಸನ: ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ವಿಚಾರವನ್ನು ಪ್ರತಿಷ್ಠೆಯಾಗಿ ಪರಿಗಣಿಸಿರುವ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಕುಟುಂಬ ಕಳೆದ ಕೆಲ ದಿನಗಳಿಂದ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸುತ್ತಾ ರಾಜಕೀಯ ನಡೆ ಪ್ರದರ್ಶಿಸು ತ್ತಿದ್ದಾರೆ. ಸ್ವತಃ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರು ಪತ್ನಿ ಭವಾನಿ ರೇವಣ್ಣ ಹಾಗೂ ಪುತ್ರ ರಾದ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ವಿಧಾನ ಪರಿಷತ್ ಸದಸ್ಯ ರಾದ ಡಾ. ಸೂರಜ್ ರೇವಣ್ಣ ಅವರುಗಳೊಂದಿಗೆ ಕಳೆದೆರಡು ಮೂರು ದಿನಗಳಿಂದ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ.

ಇತ್ತೀಚೆಗೆ ಹಾಸನದ ಸಂಸದರ ನಿವಾಸದಲ್ಲಿ ಕರೆದಿದ್ದ ಜೆಡಿಎಸ್ ಕಾರ್ಯಕರ್ತರುಗಳಿಗೆ ತಾವು ಅಥವಾ ಭವಾನಿ ರೇವಣ್ಣ ಅವರೇ ಅಭ್ಯರ್ಥಿ ಎಂದು ರೇವಣ್ಣ ಘೋಷಿ ಸಿದ್ದಾರೆ. ಅದರಂತೆ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಹಲವು ಮುಖಂಡರ ಮನೆಗಳಿಗೆ ಮತ್ತು ತಮ್ಮ ಆಪ್ತವಾಗಿ ಬರೆಯುವ ಕೆಲ ಜಿಲ್ಲಾ ಮಟ್ಟದ ಪತ್ರಿಕೆಗಳ ಪ್ರಕಾಶಕರ ಮನೆಗಳಿಗೆ ರೇವಣ್ಣ ಭೇಟಿ ನೀಡಿ ಕುಶಲೋಪಹಾರಿ ನಡೆಸುತ್ತಾ, ಸಲಹೆ, ಸೂಚನೆ ಪಡೆಯುತ್ತಿದ್ದಾರೆ.

ಇನ್ನು ಸ್ವತಃ ಹೆಚ್.ಡಿ.ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ, ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಹಾಗೂ ಜಿ.ಪಂ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ರೇವಣ್ಣ ಅವರುಗಳು ಕುಟುಂಬ ಸಮೇತ ಹಾಸನ ವಿಧಾನಸಭಾ ಕ್ಷೇತ್ರದ ಹಳ್ಳಿ ಹಳ್ಳಿಗೆ ಭೇಟಿ ನೀಡುತ್ತಾ ಬಿರುಸಿನ ಪ್ರಚಾರ ಆರಂಭಿಸಿದ್ದಾರೆ.

ಮತ್ತೊಂದೆಡೆ ಹಾಸನ ವಿಧಾನಸಭಾ ಕ್ಷೇತ್ರದ ಪ್ರಭಲ ಸ್ಪರ್ಧಿ ಎಂದೇ ಬಿಂಬಿತವಾಗಿರುವ ಸ್ವರೂಪ್ ಪ್ರಕಾಶ್ ಕೂಡ ತಮ್ಮ ಬೆಂಬಲಿಗರೊಂದಿಗೆ ಕ್ಷೇತ್ರದಲ್ಲಿ ಪ್ರಚಾರ ಮುನ್ನಡೆಸುತ್ತಿದ್ದಾರೆ. ಈ ನಡೆ ಜೆಡಿಎಸ್‌ನೊಳಗೆ ಬಿರುಸಿನ ಬಿಸಿ ವಾತಾವರಣ ನಿರ್ಮಾಣ ಮಾಡಿದೆ. ಹಾಸನ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಸಾಂಭವ್ಯ ಅಭ್ಯರ್ಥಿ ಎಂದೇ ಪ್ರಚಾರಕ್ಕಿಳಿದಿರುವ ಮಾಜಿ ಶಾಸಕ ಹೆಚ್.ಎಸ್. ಪ್ರಕಾಶ್ ಪುತ್ರ ಹಾಗೂ ಜಿ.ಪಂ ಮಾಜಿ ಉಪಾಧ್ಯಕ್ಷ ಸ್ವರೂಪ್ ಅವರನ್ನು ರೇವಣ್ಣ ಮತ್ತವರ ಬೆಂಬಲಿಗರು ಈಗಾಗಲೇ ಮೂಲೆ ಗುಂಪು ಮಾಡಿದ್ದಾರೆ.

ಸ್ವರೂಪ್ ಪ್ರಕಾಶ್ ಹಾಸನ ವಿಧಾನ ಸಭಾ ಕ್ಷೇತ್ರದ ಜೆಡಿಎಸ್‌ನ ಪ್ರಭಲ ಆಕಾಂಕ್ಷಿ ಎಂದು ಹೇಳಿಕೊಂಡ ಬಳಿಕ ಸ್ವರೂಪ್ ಜೊತೆಗಿದ್ದ ಹಲವಾರು ಬೆಂಬಲಿಗರನ್ನು ಸೈಲೆಂಟಾಗಿ ರೇವಣ್ಣ ಅಂಡ ಫ್ಯಾಮಿಲಿ ತಮ್ಮತ್ತ ಸೆಳೆದುಕೊಂಡಿದೆ. ಸ್ವತಃ ಸ್ವರೂಪ್ ಅವರನ್ನು ದೂರವಿರಿಸಿರುವ ರೇವಣ್ಣ ಅಂಡ್ ಫ್ಯಾಮಿಲಿ . ಹಾಸನ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷಕ್ಕೆ ತಾವೇ ನಿರ್ಣಾಯಕ ಎಂಬುದನ್ನು ಸಾಬೀತು ಪಡಿಸಿದೆ.

ಆದರೂ ಪಟ್ಟು ಬಿಡದ ಸ್ವರೂಪ್ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮೇಲಿನ ಭರವಸೆ ಮತ್ತು ಕೃಪೆ ಪಡೆದು ಕೊಂಡಂತೆ ಕಂಡು ಬರುತ್ತಿದ್ದು ರೇವಣ್ಣ ಅವರ ಫ್ಯಾಮಿಲಿಗೆ ಸೆಡ್ಡು ಹೊಡೆದು ಹಾಸನ ವಿಧಾನ ಸಭಾ ಕ್ಷೇತ್ರದ ಟಿಕೆಟ್ ತರಲು ಮುಂ ದಾಗಿರು ವುದು ಮಾತ್ರ ಜೆಡಿಎಸ್ ಪಾಳಯದಲ್ಲಿ ಮಾತ್ರವಲ್ಲದೆ ಸಾರ್ವಜನಿಕ ವಲಯದಲ್ಲಿಯೂ ಅಚ್ಚರಿಗೆ ಕಾರಣವಾಗಿದೆ.

ಅಂತಹ ಸ್ವೌಮ್ಯ ಸ್ವರೂಪ ಹೀಗೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಕುಟುಂಬಕ್ಕೆ ಸೆಡ್ಡು ಹೊಡೆದು ಟಿಕೆಟ್ ತರಲು ಮುಂದಾಗಿರುವುದು, ಅದಕ್ಕೆ ಪೂರಕವಾಗಿ ಮಾಜಿ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿಕೆ ನೀಡುತ್ತಿರುವುದು, ಹೆಚ್.ಡಿ. ರೇವಣ್ಣ ಕುಟುಂಬಕ್ಕೆ ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆಯ್ಕೆ ವಿಚಾರ ಸವಾಲಾಗಿ ಪರಿಣ ಮಿಸಿದೆ.

ಸ್ವರೂಪ್ ಪ್ರಕಾಶ್ ನಡೆ ಕೆಲವರಿಗೆ ಅಚ್ಚರಿ ಮೂಡಿಸಿದ್ದರೆ ರೇವಣ್ಣ ಕುಟುಂಬಕ್ಕೆ ನುಂಗಲಾ ರದ ತುತ್ತಾಗಿದೆ. ರೇವಣ್ಣ ಅವರ ಕುಟುಂಬದ ಆಪ್ತರಿಗೆ ಮಾತ್ರ ಅಸಹನೀಯವೆನಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು