News Karnataka Kannada
Tuesday, May 07 2024
ಹಾಸನ

ಹಾಸನ: ಪ್ರಜಾಧ್ವನಿ ಬಸ್ ಯಾತ್ರೆ, ಪ್ರಚಾರ ವಾಹನಕ್ಕೆ ಚಾಲನೆ

Hassan: Prajadhvani bus yatra, campaign vehicle launched
Photo Credit : News Kannada

ಹಾಸನ: ಕಾಂಗ್ರೆಸ್ ಪ್ರಜಾಧ್ವನಿ ಬಸ್ ಯಾತ್ರೆ ಹಾಸನ ಜಿಲ್ಲೆಗೆ ಆಗಮಿಸುತ್ತಿದ್ದು, ನಗರದಲ್ಲಿ ಒಂದು ಐತಿಹಾಸಿಕವಾದ ಸಮಾರಂಭವನ್ನು ಜನವರಿ ೨೧ರ ಶನಿವಾರದಂದು ನಗರದ ದೊಡ್ಡ ಮಂಡಿಗನಹಳ್ಳಿ ಬಳಿ ಹಮ್ಮಿಕೊಳ್ಳಾಗಿದ್ದು, ಇದರ ಪ್ರಚಾರದ ವಾಹನಕ್ಕೆ ಜಿಲ್ಲಾ ಕಾಂಗ್ರೆಸ್ ಭವನದ ಆವರಣದಲ್ಲಿ ಚಾಲನೆ ಕೊಡಲಾಗಿದೆ ಎಂದು ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಲಕ್ಷ್ಮಣ್ ತಿಳಿಸಿದರು.

ಇದೆ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ರಾಜ್ಯ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಶ್ರಮವಹಿಸಿ ಇಡೀ ರಾಜ್ಯಾಧ್ಯಂತ ತಿರುಗಾಟ ನಡೆಸಿ ಪಕ್ಷ ಸಂಘಟನೆ ಮಾಡಿದ್ದಾರೆ. ಅಂತಹ ಒಬ್ಬ ಧೀಮಂತ ನಾಯಕ ಕೂಡ ಹಾಸನಕ್ಕೆ ಆಗಮಿಸುತ್ತಿದ್ದಾರೆ. ೫ ವರ್ಷಗಳ ಕಾಲ ಯಾವ ಕಳಂಕ ಬಾರದ ರೀತಿ ದೀನ ದಲಿತರು, ಅಲ್ಪಸಂಖ್ಯಾರು, ರೈತರು ಹಾಗೂ ಎಲ್ಲಾ ಸಮುದಾಯದವರ ಪರವಾಗಿ ಕೆಲಸ ಮಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇನ್ನು ಅನೇಕ ಗಣ್ಯವ್ಯಕ್ತಿಗಳು ಹಾಸನ ಜಿಲ್ಲೆಗೆ ಆಗಮಿಸಲಿದ್ದಾರೆ. ಈ ನಿಟ್ಟಿನಲ್ಲಿ ಕೆಪಿಸಿಸಿಯಿಂದ ಮುಖಂಡರಾದ ಗುರುಪಾದ ಸ್ವಾಮಿ ಮತ್ತು ಶಿವನಾಗಪ್ಪ ಅವರು ವೀಕ್ಷಕರಾಗಿ ಇಲ್ಲಿನ ಕಾರ್ಯಕ್ರಮದ ಸಿದ್ಧತೆ ವೀಕ್ಷಣೆ ಮಾಡಿ ವರದಿ ಕಳುಹಿಸಲು ಆಗಮಿಸಿದ್ದಾರೆ ಎಂದರು.

ಜನವರಿ ೨೧ ರಂದು ಹಬ್ಬದ ರೀತಿಯಲ್ಲಿ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿದ್ದು, ಸುಮಾರು ೧ ಲಕ್ಷ ಜನರನ್ನು ಈ ಕಾರ್ಯಕ್ರಮದಲ್ಲಿ ಸೇರಿಸುವ ಯೋಜನೆ ಮಾಡಿಕೊಂಡಿದ್ದೇವೆ. ಪ್ರತಿ ಬೂತ್ ನಲ್ಲೂ ಜನರನ್ನು ಕರೆಯಿಸಿ ಉತ್ತಮವಾದ ಸಂದೇಶ ಕೊಡಲು ಮುಂದಾಗಿದ್ದೇವೆ ಎಂದು ಹೇಳಿದರು. ಪಕ್ಷದ ಪ್ರಣಾಳಿಕೆಯಂತೆ ಐದು ಭರವಸೆ ನೀಡಲು ಮುಂದಾಗಿದ್ದೇವೆ. ಈಗಾಗಲೇ ಎರಡು ಭರವಸೆಯನ್ನ ಘೋಷಣೆ ಮಾಡಿದ್ದೇವೆ.

ಪ್ರತಿ ಮನೆಗೆ ೨೦೦ ಯುನಿಟ್ ಉಚಿತ ವಿದ್ಯುತ್, ೨೦೦೦ ಪ್ರತಿ ತಿಂಗಳಂತೆ ೨೪,೦೦೦ ವಾರ್ಷಿಕ ಸಹಾಯ ಧನದ ಗೃಹಲಕ್ಷ್ಮಿ ಯೋಜನೆಯನ್ನು ನಾಯಕಿ ಕಾರ್ಯಕ್ರಮದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ ಘೋಷಣೆ ಮಾಡಿದ್ದಾರೆ. ಹೆಣ್ಣು ಮಕ್ಕಳಿಗೆ ತೊಂದರೆ ಆಗಬಾರದು ಎಂದು ಈ ಯೋಜನೆ ರೂಪಿಸಿದ್ದೇವೆ. ೫೦೦ ಪ್ರತಿ ಸಿಲಿಂಡರ್‌ಗೆ ಸಹಾಯಧನವನ್ನು ಘೋಷಣೆ ಮಾಡಿದ್ದು, ಜಿಎಸ್ಟಿ ಹೇರಿಕೆಯಿಂದ ಜನರನ್ನು ಪಾರು ಮಾಡುವ ನಿಟ್ಟಿನಲ್ಲಿ ಪ್ರತಿದಿನ ಬಳಕೆಯ ವಸ್ತುಗಳಿಗೆ ಜಿಎಸ್‌ಟಿ ಸಹಾಯಧನ ಸೇರಿದಂತೆ ಹಲವು ಉತ್ತಮ ಯೋಜನೆಗಳನ್ನು ಕಾಂಗ್ರೆಸ್ ಜಾರಿಗೆ ತರಲಿದೆ. ಜೊತೆಗೆ ಬಿಜೆಪಿ ದುರಾಡಳಿತವನ್ನು ಜನರಿಗೆ ಮುಟ್ಟಿಸುವ ಕೆಲಸ ನಮ್ಮ ನಾಯಕರು ಮಾಡಲಿದ್ದಾರೆ ಎಂದರು.

ಇದೆ ವೇಳೆ ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ದೇವರಾಜೇಗೌಡ, ಬಿ.ಪಿ. ಮಂಜೇಗೌಡ, ಬನವಾಸೆ ರಂಗಸ್ವಾಮಿ, ದಿನೇಶ್, ಬಿ.ಕೆ. ರಂಗಸ್ವಾಮಿ, ಗೊರೂರು ರಂಜಿತ್, ರಾಮಚಂದ್ರ, ವಿನೋದ್ ಇತರರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು