Categories: ಹಾಸನ

ಹಾಸನ: 14 ಸಾವಿರಕ್ಕೂ ಹೆಚ್ಚು ಮತ ನೀಡಿ ಜನ ಆಶೀರ್ವದಿಸಿದ್ದಾರೆ – ಪ್ರೀತಂ ಗೌಡ

ಹಾಸನ: ಕಳೆದ ಚುನಾವಣೆಯಲ್ಲಿ ೬೩ ಸಾವಿರ ಮತ ಕೊಟ್ಟು ಆಶೀರ್ವಾದ ಮಾಡಿದ್ದು, ಈ ಭಾರಿ ಕಳೆದ ಬಾರಿಗಿಂತ ಹದಿನಾಲ್ಕು ಸಾವಿರ ಹೆಚ್ಚು ಮತಕೊಟ್ಟು ಮಾಡಿರುವ ಕೆಲಸಕ್ಕೆ ಆಶೀರ್ವಾದ ಮಾಡಿದ್ದಾರೆ ಎಂದು ಮಾಜಿ ಶಾಸಕ ಪ್ರೀತಂ ಗೌಡ ಹೇಳಿದ್ದಾರೆ.

ನಗರದ ತಮ್ಮ ನಿವಾಸದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತಾಡಿದ ಅವರು, ನನ್ನ ಅಭಿ ವೃದ್ಧಿ ಕೆಲಸ, ಮಾಡ್ತಿರುವ ಸೇವೆ ಗುರುತಿಸಿ ಜನ ಬಹಳ ಹುಮ್ಮ ಸ್ಸಿನಿಂದ ಆಶೀರ್ವಾದ ಮಾಡಿ ದ್ದಾರೆ, ಚುನಾವಣೆ ಫಲಿತಾಂಶ ವಿರುದ್ಧವಾಗಿ ಬಂದಿರಬಹುದು ಆದರೆ ಜನರ ಆಶೀರ್ವಾದ ಪ್ರೀತಂಗೌಡ ಪರ ಇದೆ ಎನ್ನುವುದಕ್ಕೆ ಶೇ.೨೫ ಹೆಚ್ಚು ಮತ ನೀಡಿದ್ದಾರೆ.

ಈ ಬಾರಿಯ ಚುನಾವಣೆ ಯಲ್ಲಿ ನನಗೆ ೭೭,೩೦೦ ಕ್ಕೂ ಹೆಚ್ಚು ಮತ ನೀಡಿದ ಮತದಾರರಿಗೆ ಧನ್ಯವಾದ ತಿಳಿಸುತ್ತೇನೆ, ಬಿಜೆಪಿ ಕಾರ್ಯಕರ್ತರು ದೇವರುಗಳಿಗೆ ಅಭಾರಿಯಾಗಿದ್ದೇನೆ, ನನ್ನ ರಾಜಕೀಯ ಜೀವನದ ಕಷ್ಟಕರ ಸಮಯದಲ್ಲಿ ನನಗೆ ಬೆಂಬಲ ಕೊಟ್ಟಿದ್ದಾರೆ ಎಂದರು.

ಸಂಘ ಪರಿವಾರದ ಎಲ್ಲಾ ಕಾರ್ಯಕರ್ತರು ಮನೆ ಮನೆಗೆ ತೆರಳಿ ಜನರ ಭಾವನೆಗೆ ಪೂರ ಕವಾಗುವ ರೀತಿಯಲ್ಲಿ ಸಹಕಾರ ಕೊಟ್ಟಿದ್ದಾರೆ, ಕಳೆದ ಬಾರಿ ೧೩ ಸಾವಿರ ಮತಗಳ ಅಂತರದಲ್ಲಿ ಗೆದ್ದಿದ್ದೆ, ಈ ಭಾರಿ ಅದರ ಅರ್ಧದಷ್ಟು ಮತಗಳಿಂದ ವಂಚಿತನಾಗಿದ್ದೇನೆ. ಯಾವುದೇ ಕಾರಣದಿಂ ದಲೂ ನನಗೆ ಸೋಲಾಗಿದೆ ಎಂದು ಭಾವಿಸುವುದಿಲ್ಲ, ಸ್ವಾತಂತ್ರ್ಯ ಬಂದಾಗಿನಿಂದಲೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶೇ.೧೫ ರಷ್ಟು ಮತ ಪಡೆದಿದ್ದಾರೆ, ೨೨೪ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅತಿ ಕಡಿಮೆ ಶೇಕಡಾವಾರು ಮತ ಪಡೆದಿ ರುವುದು ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಕೇವಲ ೪ ಸಾವಿರ ಮತ ಪಡೆದ ಪರಿಣಾಮ ಈ ಬಾರಿ ತನಗೆ ಸೋಲಾಗಿದೆ ಎಂದರು.

ಮುಸ್ಲಿಂ ಸಮುದಾಯದ ವಿರುದ್ಧ ಆಕ್ರೋಶ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಒಂದು ವರ್ಗ, ಆ ಪಕ್ಷದ ಅಭ್ಯರ್ಥಿ ೩೫ ರಿಂದ ೪೦ ಸಾವಿರ ಓಟು ತೆಗೆದುಕೊಳ್ಳುತ್ತಿದ್ದರು, ಆದರೆ ಈ ಭಾರಿ ಚುನಾವಣೆ ಯಲ್ಲಿ ಕೇವಲ ನಾಲ್ಕು ಸಾವಿರ ಮತ ಪಡೆದಿದ್ದಾರೆ. ಪ್ರೀತಂಗೌಡ ಯಾರನ್ನು ಭಯಪಡಿಸುವ ಕೆಲಸಕ್ಕೆ ಕೈ ಹಾಕಿಲ್ಲ, ಮುಸ್ಲಿಂ ಭಾಂದವರನ್ನು ಅತಿ ಹೆಚ್ಚು ಪ್ರೀತಿಸುವ, ಗೌರವ ಕೊಡುವ ವ್ಯಕ್ತಿ ಸಾರ್ವಜನಿಕ ಜೀವನದಲ್ಲಿ ಇದ್ದರೆ ಅದು ಪ್ರೀತಂಗೌಡ, ಅವರ ಮೇಲೆ ಆಕ್ರೋಶ ಹೊರ ಹಾಕುವ ಅವಶ್ಯಕತೆ ನನಗಿಲ್ಲ ಎಂದರು.

ರಾಜ್ಯದಲ್ಲಿ ೧೩೫ ಸ್ಥಾನ ಪಡೆದ ಕಾಂಗ್ರೆಸ್ ಪಕ್ಷಕ್ಕೆ ಹಾಸನದಲ್ಲಿ ಅತೀ ಕಡಿಮೆ ಮತಗಳನ್ನು ಪಡೆದಿರುವ ಕ್ಷೇತ್ರ ಹಾಸನದಲ್ಲೀ, ಕಳೆದ ಭಾರಿ ಕಾಂಗ್ರೆಸ್‌ಗೆ ಓಟು ಹಾಕಿದಂತಹ ಒಂದು ವರ್ಗ ಜನತಾದಳಕ್ಕೆ ಮತ ಹಾಕಿದ್ದಾರೆ ಅದರಲ್ಲಿ ವ್ಯತ್ಯಾಸ ಇದ್ದರೆ ಹೇಳಿ ತಿದ್ದಿಕೊಳ್ಳುವ ಕೆಲಸ ಮಾಡ್ತಿನಿ ಎಂದರು.

ನಾನು ಒಂದು ವರ್ಗ ಅಂತ ಹೇಳಿದ್ದೇನೆ, ಒಂದು ಸಮುದಾ ಯ ಅಂತ ಹೇಳಿಲ್ಲ, ಒಂದು ವರ್ಗದ ಜನ ಕಳೆದ ಭಾರಿ ಕಾಂಗ್ರೆ ಸ್ ಮತ ಹಾಕ್ತಿದ್ದರು, ಈಗ ಜೆಡಿ ಎಸ್ ಹಾಕಿದ್ದಾರೆ,ಆ ವರ್ಗದ ಮತಗಳು ನನಗೆ ಬೇಕಿಲ್ಲ, ಅದರಲ್ಲೇನು ಮಡಿವಂತಿಕೆ ಇಲ್ಲ ಎಂದು ಸ್ಪಷ್ಟ ಪಡಿಸಿದರು
ನೂತನ ಶಾಸಕರು ಇನ್ನಷ್ಟು ಕೆಲಸ ಮಾಡಲಿ. ಪ್ರೀತಂಗೌಡ ಯಾವ ರೀತಿ ಕೆಲಸ ಮಾಡಿದ್ದಾನೆ ಅದನ್ನು ನೂತನ ಶಾಸಕರು ಮುಂದುವರಿಸಿಕೊಂಡು ಹೋಗಲಿ ಎಂದ ಅವರು, ಯುವಕರು, ವಿದ್ಯಾವಂತರಿದ್ದಾರೆ ಇನ್ನೂ ಹೆಚ್ಚು ಕೆಲಸ ಮಾಡುವ ನಿರೀಕ್ಷೆ ಇದೆ, ನಾವು ಮಾಡಿರುವ ಕೆಲಸಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ಇನ್ನಷ್ಟು ಕೆಲಸ ಮಾಡಲಿ, ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಕೆಲಸವನ್ನು ನೂತನ ಶಾಸಕರು ಮಾಡಲಿ ಎಂದರು.

Ashika S

Recent Posts

ಭಾರತದಲ್ಲಿ ಹಿಂದುಗಳ ಸಂಖ್ಯೆ ಇಳಿಕೆ, ಮುಸ್ಲಿಮರ ಸಂಖ್ಯೆ ಏರಿಕೆ: ಆರ್ಥಿಕ ಸಲಹಾ ಮಂಡಳಿ

ಭಾರತದಲ್ಲಿ ಬಹುಸಂಖ್ಯಾತ ಹಿಂದೂಗಳ ಜನಸಂಖ್ಯೆ ಕುಸಿತವಾಗುತ್ತಿದ್ದು ಇದೇ ವೇಳೆ ಮುಸ್ಲಿಮರ ಸಂಖ್ಯೆ ಹೆಚ್ಚುತ್ತಿದೆ ಎಂದು ಪ್ರಧಾನ ಮಂತ್ರಿ ಆರ್ಥಿಕ ಸಲಹಾ…

6 mins ago

ಪಟಾಕಿ ತಯಾರಿಕಾ ಕಾರ್ಖಾನೆ ಸ್ಫೋಟ: 8 ಮಂದಿ ಮೃತ್ಯು

ಕಾರ್ಖಾನೆಯೊಂದರಲ್ಲಿ ಪಟಾಕಿ ಸಿಡಿದು 8 ಜನರು ಸಾವನ್ನಪ್ಪಿದ ಘಟನೆ ತಮಿಳುನಾಡಿನ ಶಿವಕಾಶಿಯಲ್ಲಿ ನಡೆದಿದೆ.

23 mins ago

ಹಾಸನ ವಿಡಿಯೋ ಪ್ರಕರಣ: ಸುಳ್ಳು ದೂರಿನ ಒತ್ತಡ

ಅಶ್ಲೀಲ ವಿಡಿಯೋ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಸಂಸದ ಪ್ರಜ್ವಲ್ ರೇವಣ್ಣ ನಾಪತ್ತೆಯಾಗಿದ್ದಾರೆ. ಶಾಸಕ ರೇವಣ್ಣ ಜೈಲು ಶಿಕ್ಷೆಗೆ ಗುರಿಗಾಗಿದ್ದಾರೆ. ಈ…

38 mins ago

ಮದುವೆ ರದ್ದು, ಕೋಪದಿಂದ ಅಪ್ರಾಪ್ತ ಬಾಲಕಿಯ ರುಂಡ ಕತ್ತರಿಸಿ ಕೊಲೆ ಮಾಡಿದ ಪ್ರೇಮಿ

ಮದುವೆ ಕ್ಯಾನ್ಸಲ್ ಆದ ಕೋಪಕ್ಕೆ ಬಾಲಕಿಯನ್ನು ಎಳೆದೊಯ್ದು ರುಂಡ ಕತ್ತರಿಸಿ ಕೊಲೆ ಮಾಡಿದ ಘಟನೆ ಕೊಡಗಿನ ಸೋಮವಾರಪೇಟೆಯ ಸುರ್ಲಬ್ಬಿಯಲ್ಲಿ ನಡೆದಿದೆ.

54 mins ago

ಅಕ್ಷಯ ತೃತೀಯದಂದು ಲಕ್ಷ್ಮಿ ಮತ್ತು ಕುಬೇರನಿಗೆ ವಿಶೇಷ ಪೂಜೆ

ಅಕ್ಷಯ ತೃತೀಯವನ್ನು ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ದಿನದಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಅಂದಿನ ದಿನ ಭರವಸೆ, ಸಂತೋಷ,…

1 hour ago

ಅಕ್ಷಯ ತೃತೀಯ ದಿನದಂದು ಚಿನ್ನ, ಬೆಳ್ಳಿ ದರ ಪಟ್ಟಿ ಹೀಗಿದೆ!

ಇಂದು ಅಕ್ಷಯ ತೃತೀಯ ದಿನವಾಗಿದ್ದು, ಚಿನ್ನದ ಬೆಲೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಸತತ ಏರಿಕೆಯ ಬಳಿಕ ಎರಡು ದಿನ ಸತತ ಬೆಲೆ…

2 hours ago