News Karnataka Kannada
Saturday, April 27 2024
ಹಾಸನ

ಹಾಸನ: ಜಿಲ್ಲೆಯಲ್ಲಿ ಪಕ್ಷ ಬಲವರ್ಧನೆ, ಪ್ರಧಾನಿ ಆಗಮನಕ್ಕೆ ಮನವಿ – ಪ್ರೀತಂ ಗೌಡ

Appeal to PM's visit to strengthen party in Hassan district: Preetham Gowda
Photo Credit : News Kannada

ಹಾಸನ:  ಜಿಲ್ಲೆಯಲ್ಲಿ ಪಕ್ಷ ಬಲವರ್ಧನೆಗೊಳಿಸುವ ನಿಟ್ಟಿನಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಹಾಸನಕ್ಕೆ ಆಗಮಿಸುವಂತೆ ಈಗಾಗಲೇ ಮನವಿ ಮಾಡಲಾಗಿದ್ದು, ಬರುವ ನಿರೀಕ್ಷೆ ಇದೆ. ಇನ್ನು ಜಿಲ್ಲೆಯ ಆರು ಕ್ಷೇತ್ರದ ಶಾಸಕರು ಅನುದಾನ ತರದೆ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ ಎಂದು ಶಾಸಕ ಪ್ರೀತಂ ಜೆ. ಗೌಡ ಗಂಭೀರವಾಗಿ ಆರೋಪಿಸಿ ಬೇಸರ ವ್ಯಕ್ತಪಡಿಸಿದರು.

ನಗರದ ಬಿ.ಎಂ. ರಸ್ತೆ ಬಳಿ ಇರುವ ಕೃಷ್ಣ ಹೋಟೆಲ್ ಹಿಂಬಾಗ ನಡೆಯಲಿರುವ ಬಿಜೆಪಿ ಮುಖಂಡರ ಸಭೆಯ ಕಾಮಗಾರಿ ವೀಕ್ಷಣೆಯನ್ನು ಮಾಡುವ ನಿಟ್ಟಿನಲ್ಲಿ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವರ ಜೊತೆಯಲ್ಲಿ ಚರ್ಚೆ ಮಾಡಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಚುನಾವಣೆ ಪ್ರಚಾರಕ್ಕಾಗಿ ಭಾರತ ದೇಶದ ಪ್ರಧಾನಿ ನರೇಂದ್ರಮೋದಿಯವರು ಬರಲಿದ್ದಾರೆ. ಜಿಲ್ಲೆಯಲ್ಲಿ ಬಿಜೆಪಿ ಪಕ್ಷವನ್ನು ಬಲಪಡಿಸುವ ದೃಷ್ಠಿಯಿಂದ ಮೋದಿಯವರನ್ನು ಚುನಾವಣೆ ಪ್ರಚಾರಕ್ಕಾಗಿ ಹಾಸನಕ್ಕೆ ಆಗಮಿಸಲು ಕೋರಿಕೆ ಸಲ್ಲಿಸಿದ್ದೇವೆ. ಅವರ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇವೆ. ಅತೀ ಶೀಘ್ರದಲ್ಲಿ ಹಾನಸಕ್ಕೆ ಬಂದು ಪಕ್ಷವನ್ನು ಇನ್ನಷ್ಟು ಬಲಗೊಳಿಸಲಿದ್ದಾರೆ ಎಂದರು.

ಈಗಾಗಲೇ ಬಜೆಟ್ ಘೋಷಣೆಯಾಗಿದ್ದು, ರಾಜ್ಯದ ಜಿಲ್ಲೆವಾರು ಅಲ್ಲ. ಕ್ಷೇತ್ರ ಅಭಿವೃದ್ಧಿಯಾಗಬೇಕು ಎಂದರೆ ಬಜೆಟ್ ಮಾತ್ರ ಸಾಲಲ್ಲ. ಮಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿ ಆಗುವ ಕೆಲಸಗಳ ಬಗ್ಗೆ ಮನವರಿಕೆ ಮಾಡಿ ಅನುದಾನ ತರಬೇಕು. ಆ ಕೆಲಸವನ್ನು ನಾನು ನನ್ನ ಕ್ಷೇತ್ರದಲ್ಲಿ ಮಾಡಿದ್ದೇನೆ. ರಸ್ತೆ, ಒಳ ಚರಂಡಿ, ಪಾರ್ಕ್ ಅಭಿವೃದ್ಧಿ ಸೇರಿದಂತೆ ಸಾಕಷ್ಟು ಅನುದಾನಗಳನ್ನು ತಂದು, ಜಲಜೀವನ್ ಮಿಷನ್ ಯೋಜನೆಗೆ ಸಾವಿರಾರು ಕೋಟಿ ಹಣವನ್ನು ಹಾಸನಕ್ಕೆ ತರಲಾಗಿದೆ. ನನ್ನ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ ಎಂದರು.

ಒಂದು ಯೋಜನೆ ತರಬೇಕು ಎಂದರೆ ಕ್ಯಾಬಿನೆಟ್‌ನಲ್ಲಿ ಚರ್ಚಿಸಬೇಕು. ಹಾಸನ ಜಿಲ್ಲೆಯ ಆರು ಕ್ಷೇತ್ರದ ಶಾಸಕರು ಅನುದಾನ ತರುವ ಕೆಲಸ ಮಾಡಬೇಕಿತ್ತು ಆದ್ರೆ ಅವರು ಮಾಡಿರುವುದಿಲ್ಲ. ಜನಪ್ರತಿನಿಥಿಗಳು ಮುಖ್ಯಮಂತ್ರಿಯವರ ಗಮನ ಸೆಳೆದು ಬೇಕಾದ ಯೋಜನೆಯನ್ನು ತರಲು ಮನವಿ ಮಾಡಬೇಕಿತ್ತು. ಶಾಸಕರು ಎಷ್ಟು ಪರಿಣಾಮಕಾರಿಯಿಂದ ಕೆಲಸ ಮಾಡುತ್ತಾರೆ ಎಂದು ನೋಡಿ ಮುಖ್ಯ ಮಂತ್ರಿಯವರು ಯೋಜನೆಗೆ ಅನುಮೊದನೆ ನೀಡುತ್ತಿದ್ದರು. ಅನುದಾನವನ್ನು ತರುವ ಕೆಲಸವನ್ನು ಕ್ಷೇತ್ರಕ್ಕೆ ಆರು ಕ್ಷೇತ್ರದ ಶಾಸಕರು ಮಾಡಿರುವುದಿಲ್ಲ ಎಂದು ಬೇಸರವ್ಯಕ್ತಪಡಿಸಿದರು.

ಬಿಜೆಪಿ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ರಾಷ್ಟ್ರೀಯ ನಾಯಕರು ಚುನಾವಣೆ ನಿರ್ವಹಣ ಸಮಿತಿ ಅಂತಿಮ ಮಾಡುತ್ತದೆ. ಮಾರ್ಚ್ ಅಂತ್ಯದಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತಾರೆ ಎಂದು ತಿಳಿದು ಬಂದಿದೆ. ನಾನು ಸಹ ಒಬ್ಬ ಆಕಾಂಕ್ಷಿಯಾಗಿ ಮನವಿ ಮಾಡಿದ್ದೇನೆ. ಯಾವ ಕ್ಷೇತ್ರದಲ್ಲಿ ಟಿಕೆಟ್ ನೀಡುತ್ತಾರೋ ಎಂದು ಗೊತ್ತಿಲ್ಲ. ನಮ್ಮ ಪಕ್ಷದಲ್ಲಿ ಅದರದ್ದೆ ಆದ ನಿಯಮಗಳಿಗೆ, ಯಾವ ಕ್ಷೇತ್ರದಲ್ಲಿ ಯಾರು ಸ್ಪರ್ಧೆ ಮಾಡಬೇಕು ಎಂದು ರಾಷ್ಟ್ರೀಯ ಅಧ್ಯಕ್ಷರೇ ನೇತೃತ್ವದಲ್ಲಿ ತಿರ್ಮಾನಿಸಲಾಗುತ್ತದೆ. ನಮ್ಮದು ಪ್ರಜಾ ಪ್ರಭುತ್ವ ಪಕ್ಷವಾಗಿದ್ದು, ನಾನೆ ಅಭ್ಯರ್ಥಿ ಎಂದು ಹೇಳಿಕೊಳ್ಳುವಂತಿಲ್ಲ. ಜನಾಭಿಪ್ರಾಯದಲ್ಲಿ ಸಮೀಕ್ಷೆ  ಮಾಡಿ ಟಿಕೆಟ್ ಕೊಡುತ್ತಾರೆ ಎಂದು ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು