ಹಾಸನ: ರಾಜ್ಯದ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಹಾಸನದ ಹಾಸನಾಂಬ ದೇವಳ ಬಾಗಿಲು ತೆರೆದು ಇಂದಿಗೆ ಮೂರು ದಿನಗಳಾಗಿದ್ದು, ನಿನ್ನೆಯಿಂದ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಗಿದೆ. ದೇವಿಯ ದರ್ಶನಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿರುವ ಕಾರಣ ಜಿಲ್ಲಾಡಳಿತ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಇಂದಿನಿಂದ ದಿನದ 24 ಗಂಟೆಯು ಹಾಸನಾಂಬೆ ದರ್ಶನಕ್ಕೆ ಅವಕಾಶ ನೀಡಿದೆ.
ಇಂದಿನಿಂದಲೇ 24 ಗಂಟೆಯು ದರ್ಶನಕ್ಕೆ ಅವಕಾಶ ನೀಡಲಾಗಿದೆ. ನೈವೇದ್ಯ ಅವಧಿ ಹೊರತು ಪಡಿಸಿ ಉಳಿದ ಸಮಯದಲ್ಲಿ ಹಾಸನಾಂಬೆ ದರ್ಶನಕ್ಕೆ ಅವಕಾಶವಿದ್ದು, ಭಕ್ತರು ಮುಖ್ಯವಾಗಿ ಈ ವಿಚಾರ ಗಮನಿಸಬೇಕಾಗಿದೆ. ಮಧ್ಯಾಹ್ನ 1:30 ರಿಂದ 3ವರೆಗೆ ಮುಂಜಾನೆ 2 ಗಂಟೆಯಿಂದ 4 ಗಂಟೆವರೆಗೆ ನೈವೇದ್ಯ ಪೂಜೆ ನಡೆಯಲಿದ್ದು, ಈ ಸಮಯದಲ್ಲಿ ದೇವಿಯ ದರ್ಶನ ಇರುವುದಿಲ್ಲ.