ಹಾಸನ: ರಾಜ್ಯದ ಮೊದಲ ಹಂತದ ಚುನಾವಣೆಯಲ್ಲಿಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಕೂಡ ತಮ್ಮ ಪತ್ನಿಯ ಜೊತೆ ಆಗಮಿಸಿ ಹಕ್ಕು ಚಲಾಯಿಸಿದ್ದಾರೆ.
ಇದಕ್ಕೂ ಮುನ್ನ ಹೊಳೆನರಸೀಪುರ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯ, ಹರದನಹಳ್ಳಿಯ ದೇವೇಶ್ವರ ದೇವಾಲಯ ಹಾಗೂ ಮಾವಿನಕೆರೆಯ ಶ್ರೀ ರಂಗನಾಥಸ್ವಾಮಿ ದೇವಾಲಯದಲ್ಲಿ ದೇವೇಗೌಡರು ಪೂಜೆ ಸಲ್ಲಿಸಿದರು.
ಹೊಳೆನರಸೀಪುರ ತಾಲೂಕಿನ ಪಡುವಲಹಿಪ್ಪೆ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತಗಟ್ಟೆ ಸಂಖ್ಯೆ 251 ರಲ್ಲಿ ದಂಪತಿ ಮತದಾನ ಮಾಡಿದ್ದಾರೆ.
ಮತದಾನಕ್ಕೆ ಆಗಮಿಸಿದ ವೇಳೆ ಕೂಡ ಪಡುವಲಹಿಪ್ಪೆ ಗ್ರಾಮದ ಕೋದಂಡರಾಮ ದೇವಾಲಯದಲ್ಲೂ ಪೂಜೆ ಸಲ್ಲಿಸಿದ್ದಾರೆ.