News Karnataka Kannada
Wednesday, May 01 2024
ಹಾಸನ

ಹಾಸನಕ್ಕೆ ಐಐಟಿ ತರುವುದು ದೇವೇಗೌಡ್ರ ಕನಸು: ಹೆಚ್.ಡಿ. ರೇವಣ್ಣ

Deve Gowda's dream is to bring IIT to Hassan: HD Deve Gowda Revanna
Photo Credit : News Kannada

ಹಾಸನ: ಹಾಸನಕ್ಕೆ ಐಐಟಿ ತರುವುದು ದೇವೇಗೌಡರ ಹಲವಾರು ವರ್ಷದ ಕನಸು ಆಗಿದ್ದು, ನಂಗೆ ಧೈವ ಶಕ್ತಿಯಿದ್ದು, ಕನಸ್ಸು ಏನಿದೆ ಅದನ್ನ ಮಾಡಿಸೆ ಮಾಡಿಸುತ್ತೇನೆ. ಎಲ್ಲಾರೂ ಪಕ್ಷತೀತವಾಗಿ ಬೆಂಬಲಿಸುವಂತೆ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರು ಮನವಿ ಮಾಡಿದ್ರು. ಏನಾದ್ರೂ ಈ ಜಾಗವನ್ನು ಏನಾದರೂ ಬೇರೆ ಉದ್ದೇಶಕ್ಕೆ ಜಾಗವನ್ನು ಕೊಟ್ಟರೇ ಹೆಚ್.ಡಿ. ದೇವೇಗೌಡರ ನೇತೃತ್ವದಲ್ಲಿ ವಿಧಾನಸೌಧದ ಬಳಿ ಗಾಂಧಿ ಪ್ರತಿಮೆ ಮುಂದೆ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

ನಗರದ ಸಂಸದರ ನಿವಾಸದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕೇಂದ್ರ ಮಾನವ ಸಂಪನ್ಮೂಲ ಸಚಿವರನ್ನೂ ಹೆಚ್.ಡಿ. ದೇವೇಗೌಡರು ಈ ಹಿಂದೆಯೇ ಭೇಟಿ ಮಾಡಿದ್ರು. ಅಂದು ಜವರೇಗೌಡರು ಐಐಟಿ ಮಾಡು ಎಂದು ನನಗೆ ಹೇಳಿದ್ರು. ಇದರಿಂದ ದೇವೇಗೌಡರನ್ನ ನಾನೇ ಕರೆದುಕೊಂಡು ಅರ್ಜುನ್ ಸಿಂಗ್ ರ ಬಳಿ ಹೋಗಿದ್ವಿ. ಅವತ್ತು ಹೆಚ್.ಡಿ. ಕುಮಾರಸ್ವಾಮಿ ಬಿಜೆಪಿ ಜೊತೆ ಹೋದ್ರು ಎನ್ನುವ ಒಂದೆ ಕಾರಣಕ್ಕೆ ಐಐಟಿಯನ್ನು ರಾಜಸ್ಥಾನಕ್ಕೆ ನೀಡಲಾಯಿತು.

ಈ ರಾಜ್ಯದಲ್ಲಿ ಯಾರೂ ಕೂಡ ಐಐಟಿ ಕೇಳಿರಲಿಲ್ಲ. ಈಗಾಗಲೇ ಐಐಟಿಗಾಗಿ ಹಾಸನದಲ್ಲಿ ಒಂದು ಸಾವಿರ ಎಕರ ಜಾಗ ಮೀಸಲಿಡಲಾಗಿದೆ ಎಂದರು. ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಬಂದಾಗ ಮನಮೋಹನ್ ಸಿಂಗ್ ರ ಬಳಿ ಪ್ರಯತ್ನ ಪಟ್ಟಿದ್ದೆವು. ಸ್ಮೃತಿ ಇರಾನಿ ಕರ್ನಾಟಕಕ್ಕೆ ಐಐಟಿ ಕೊಡಲು ಒಪ್ಪಿಗೆ ನೀಡಿದ್ದರು. ಅಂದಿನ ರಾಜ್ಯ ಕಾಂಗ್ರೆಸ್ ಪಕ್ಷದವರು ಹಾಸನ ಬಿಟ್ಟು ಬೇರೆ ಹೆಸರು ಸೂಚಿಸಿದರು. ಕೆಲ ದಿನಗಳ ಹಿಂದೆ ದೇವೇಗೌಡರು ರಾಜ್ಯಸಭೆ ಭಾಷಣದಲ್ಲಿ ಐಐಟಿ ಬಗ್ಗೆ ಚರ್ಚೆ ಮಾಡಿದ್ದು, ಈ ಬಗ್ಗೆ ಮೋದಿಯವರು ಪರಿಶೀಲನೆ ನಡೆಸಿದ್ದಾರೆ.

ದೇವೇಗೌಡರ ಬಳಿ ಐಐಟಿ ವಿಚಾರವಾಗಿ ಪ್ರಸ್ಥಾಪ ಮಾಡಿದ್ದಾರೆ. ಐಐಟಿಗಾಗಿ ಮೀಸಲಿರುವ ಜಾಗವನ್ನ ಕೆಲ ಪಟ್ಟಭದ್ರ ಹಿತಾಸಕ್ತಿಗಳಯ ಬೇರೆ ಉದ್ದೇಶಕ್ಕೆ ಬಳಸಲು ಪ್ಲಾನ್ ಮಾಡಿದ್ದಾರೆ. ಈ ವಿಚಾರವಾಗಿ ದೇವೇಗೌಡರು ಈ ಬಗ್ಗೆ ಮುಖ್ಯಮಂತ್ರಿ, ಸಚಿವರಿಗೆ ಪತ್ರ ಬರೆದಿದ್ದಾರೆ. ಐಐಟಿ ಜಾಗವನ್ನ ಬೇರೆ ಉದ್ದೇಶಕ್ಕೆ ಬಳಸುವುದಿಲ್ಲ ಎಂದು ಸಚಿವರು ಭರವಸೆ ನೀಡಿದ್ದಾರೆ.

ಇದರಲ್ಲಿ ನನ್ನ ವೈಯಕ್ತಿಕ ಉದ್ದೇಶ ಏನಿಲ್ಲ. ಜಿಲ್ಲೆಯ, ರಾಜ್ಯದ ಯುವಕರಿಗೆ ಅನುಕೂಲ ಆಗುತ್ತದೆ ಎಂಬ ಉದ್ದೇಶ ನನ್ನದು. ಇದನ್ನು ಮೀರಿ ಬೇರೆ ಉದ್ದೇಶಕ್ಕೆ ಜಾಗ ಏನಾದ್ರೂ ಬಳಸಿದರೆ ನಾವು ಹೆಚ್.ಡಿ. ದೇವೇಗೌಡರ ನೇತೃತ್ವದಲ್ಲಿ ವಿಧಾನಸೌಧದ ಬಳಿ ಗಾಂಧಿ ಪ್ರತಿಮೆ ಮುಂದೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. ಐಐಟಿ ವಿಚಾರವಾಗಿ ಸಿಎಂ ಬಸವರಾಜು ಬೊಮ್ಮಾಯಿ ಜೊತೆ ಮಾತನಾಡುತ್ತೇನೆ. ಯಾರೂ ಕೂಡ ಬೇರೆ ಉದ್ದೇಶಕ್ಕೆ ಬಳಸಬಾರದು. ಪಕ್ಷಾತೀತವಾಗಿ ಈ ಬಗ್ಗೆ ಹೋರಾಟ ಮಾಡಬೇಕು ಎಂದು ಮನವಿ ಮಾಡಿದರು.

ಹಾಸನ-ಬೇಲೂರು-ಚಿಕ್ಕಮಗಳೂರು ರೈಲ್ವೇ ಮಾರ್ಗ ಸಂಬಂದ ಮಿನ್ ಬುಕ್ ನಲ್ಲಿ ಸೇರಿಸಲಾಗಿದೆ. ಹೆಚ್.ಡಿ. ಕುಮಾರಸ್ವಾಮಿ ಆಡಾಳಿತದಲ್ಲಿ ೮ ಕೋಟಿ ಹಣ ನೀಡಿದ್ದೇವೆ. ಕೇಂದ್ರ ಸಚಿವರು ನೀವು ಜಾಗ ಕೊಡಿ ಎಂದು ಕೇಳಿದ್ದಾರೆ. ಈ ಬಗ್ಗೆ ಕೂಡಲೇ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.

ಹಾಸನ ಜಿಲ್ಲೆಯಲ್ಲಿ ದೇವೇಗೌಡರಿಗೆ ೬೦ ವರ್ಷ ರಾಜಕೀಯ ಶಕ್ತಿಯನ್ನು ಇಲ್ಲಿನ ಜನತೆ ಕೊಟ್ಟಿದ್ದಾರೆ. ಈ ಜಿಲ್ಲೆಯನ್ನ ನಮ್ಮ ಕುಟುಂಬ ಯಾವತ್ತು ಮರೆಯೋದಿಲ್ಲ. ಹಾಸನಕ್ಕೆ ತಾಂತ್ರಿಕ ವಿಶ್ವವಿದ್ಯಾಲಯ ಬಜೆಟ್‌ನಲ್ಲೇ ಮಂಜೂರಾಗಿತ್ತು. ಯಡಿಯೂರಪ್ಪ ನವರು ಅದನ್ನ ತಡೆ ಹಿಡಿದಿದ್ದರು. ಮುಂದೆ ಐಐಟಿ ಮಾಡುವ ಉದ್ದೇಶವಿದ್ದು ಜಾಗ ಮೀಸಲಿರಲಿ ಎಂದು ಇದೆ ವೇಳೆ ಒತ್ತಾಯಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು