News Karnataka Kannada
Thursday, May 09 2024
ಹಾಸನ

ಬೇಲೂರು: ಚುನಾವಣಾ ಬೂತ್ ಕಲ್ಪಿಸುವಂತೆ ಗ್ರಾಮಸ್ಥರ ಒತ್ತಾಯ

Villagers demand polling booths
Photo Credit : News Kannada

ಬೇಲೂರು: ನರಸೀಪುರ ಗ್ರಾಮದಲ್ಲಿ ನಮಗೆ ಚುನಾವಣೆಗೆ ಅನುಕೂಲಕ್ಕಾಗಿ ಬೂತ್ ಕಲ್ಪಿಸಿಕೊಡಬೇಕು ಇಲ್ಲದಿದ್ದರೆ ನಾವು ಚುನಾವಣೆ ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದರು.

ಪ್ರತೀ ೫ ವರ್ಷಕ್ಕೊಮ್ಮೆ ಬರುವ ಚುನಾವಣೆ ಸಂದರ್ಭ ದಲ್ಲಿ ಓಟಿಗಾಗಿ ನಮ್ಮ ಬಳಿ ಬರುವ ಜನಪ್ರತಿನಿಧಿಗಳು ನಮ್ಮ ಕಷ್ಟ ಸುಖಗಳಿಗೆ ಸ್ಪಂದಿಸುತ್ತಿಲ್ಲ. ಇನ್ನು ನರಸೀಪುರ ಭೋವಿ ಕಾಲೋನಿಯಲ್ಲಿ ಸುಮಾರು ೩೦೦ ಕುಟುಂಬಗಳು ವಾಸವಾಗಿದ್ದು ವೃದ್ದರು ,ಅಂಗವಿಕಲರು ಸೇರಿ ದಂತೆ ಇಲ್ಲಿ ಸುಮಾರು ೫೦೦ ಮತದಾರರು ಇದ್ದು,ನಮಗೆ ಪ್ರತ್ಯೇಕವಾದ ಬೂತ್ ಅವಶ್ಯಕತೆ ಇದೆ. ಪ್ರತೀ ಬಾರಿಯೂ ನಮಗೆ ಬೂತ್ ಮಾಡಿಕೊಡುತ್ತೇವೆ ಎಂದು ಹೇಳುತ್ತಾರೆ ಆದರೆ ಈ ಬಾರಿ ನಮಗೆ ಬೂತ್ ಅನ್ನು ನರಸೀಪುರದಲ್ಲಿ ಚುನಾವಣೆಗೆ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.

ಆದರೆ ಅಲ್ಲಿಗೆ ಹೋಗಲು ೨ ಕಿಮೀ ಆಗುವುದರಿಂದ ನಮ್ಮ ಮತವನ್ನು ಚಲಾಯಿಸಲು ಆಗುತ್ತಿಲ್ಲ.ಆದ್ದರಿಂದ ದಯಮಾಡಿ ನಮ್ಮ ಗ್ರಾಮಕ್ಕೆ ಪ್ರತ್ಯೇಕ ಬೂತ್ ಮಾಡಿಕೊಡಲು ತಾಲೂಕು ಕಚೇರಿಗೆ ದೂರು ಸಲ್ಲಿಸಲು ಬಂದಿದ್ದೇವೆ. ನಮಗೆ ಅವಕಾಶ ಮಾಡಿಕೊಡದಿದ್ದರೆ ನಾವು ಮತದಾನ ಬಹಿಷ್ಕರಿಸುವುದಾಗಿ ಗ್ರಾಮಸ್ಥರ ಜೊತೆಗೆ ಗ್ರಾಪಂ ಸದಸ್ಯರಾದ ವೆಂಕಟೇಶ್, ಪೆದ್ದ ಬೋವಿ,ನಾಗರಾಜ್ ಸೇರಿದಂತೆ ಇತರರು ತಿಳಿಸಿದರು.

ಇದೇ ವೇಳೆ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಮಮತ ಎಂ. ಮತದಾನ ಎಂಬುವುದು ಪವಿತ್ರವಾದ ಹಕ್ಕು ಅದನ್ನು ಯಾರೂ ಸಹ ಕಳೆದುಕೊಳ್ಳಬಾರದು. ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಅಲ್ಲದೆ ಪ್ರತ್ಯೇಕವಾಗಿ ಮತಗಟ್ಟೆ ಅವಶ್ಯಕತೆ ಇದೆ ಎಂದು ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ. ಅಂತಹವರ ಮೇಲೆ ಕ್ರಮ ಕೈಗೊಳ್ಳುತ್ತೇನೆ.

ಚುನಾವಣೆ ಹಿಂದಿನ ದಿನ ಬಂದು ನಮಗೆ ಮತಗಟ್ಟೆ ಬದಲಾಯಿಸಿ ಎನ್ನುವುದು ತಪ್ಪು. ಚುನಾವಣೆ ಆಯೋಗ ಏನು ನಿರ್ದೇಶನ ನೀಡಿದ್ದಾರೆ ಅಲ್ಲಿ ಮತಗಟ್ಟೆ ಸ್ಥಾಪಿಸಲಾಗಿದ್ದು ತಮ್ಮ ಮತವನ್ನು ಯಾವುದೇ ಕಾರಣ ಕ್ಕೂ ಮಿಸ್ ಮಾಡಿಕೊಳ್ಳದೆ ಯಾವ ಆಮಿಷಗಳಿಗೂ ಒಳಗಾಗಾದೆ ಮತದಾನ ಮಾಡಿ ನಿಮಗೆ ಸಂಪೂರ್ಣ ಸಹ ಕಾರವನ್ನು ನಾವು ನೀಡುತ್ತೇವೆ. ಅಲ್ಲದೇ ಮುಂದಿನ ಚುನಾವಣೆ ಸಂದರ್ಭದಲ್ಲಿ ನಿಮ್ಮ ಮನವಿ ಪುರಸ್ಕರಿಸಿ ಸ್ಥಳ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಬೋವಿ ಕಾಲೋನಿಯ ಗ್ರಾಮಸ್ಥರು ಹಾಗೂ ಪಿಎಸ್ ಐ ಎಸ್ ಜಿ ಪಾಟೀಲ್, ಪಕ್ಷೇತರ ಅಭ್ಯರ್ಥಿ ಪರಮೇಶ್,ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು