News Karnataka Kannada
Monday, April 29 2024
ತುಮಕೂರು

ತುಮಕೂರು: ಮತದಾನ ಮಾಡಲು ವಿಕಲಚೇತನ ಮತದಾರರಿಗೆ ಅನುಕೂಲಕರ ಸೌಲಭ್ಯಗಳು

Facilities for differently-abled voters to cast their votes
Photo Credit : News Kannada

ತುಮಕೂರು: ಮೇ10, ರಂದು ನಡೆಯುವ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಮತದಾನದಲ್ಲಿ ವಿಕಲಚೇತನರು ಹಾಗೂ ಅಶಕ್ತ ನಾಗರಿಕರು ಸರಾಗವಾಗಿ ಭಾಗವಹಿಸಲು ಅನುವಾಗುವಂತೆ ನಗರ ವ್ಯಾಪ್ತಿಯಲ್ಲಿ ವಾರ್ಡ್ ಗೆ ಒಂದು ಆಟೋ ಮತ್ತು ಗ್ರಾಮಪಂಚಾಯತಿ ವ್ಯಾಪ್ತಿಗೆ ಒಂದು ಆಟೋ ವಾಹನದ ವ್ಯವಸ್ಥೆಯನ್ನು ಉಚಿತವಾಗಿ ಕಲ್ಪಿಸಲಾಗಿರುತ್ತದೆ.

ಈ ರೀತಿ ಜಿಲ್ಲೆಯಾದ್ಯಂತ 330 ಗ್ರಾಮಪಂಚಾಯತಿಗಳಲ್ಲಿ ಮತ್ತು 216 ವಾರ್ಡ್ ಗಳಲ್ಲಿ ಒಟ್ಟು 546 ಆಟೋ ವಾಹನಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿರುತ್ತದೆ.

ಪ್ರತಿ ಮತಗಟ್ಟೆಯಲ್ಲಿ ಒಂದರಂತೆ ಒಟ್ಟು 2683 ಬೂತಗನ್ನಡಿ, ಪ್ರತಿ ಮತಗಟ್ಟೆ ಸ್ಥಳಗಳಿಗೆ ಒಂದರಂತೆ ಒಟ್ಟು 2115 ವೀಲ್ ಚೇರ್ಗಳು ಮತ್ತು ಅಂಧ ಮತದಾರರಿಗೆ ಬ್ರೈಲ್ ಲಿಪಿಯಲ್ಲಿ ಓದಿಕೊಂಡು ಮತದಾನ ಮಾಡಲು ಎಲ್ಲಾ 2683 ಮತಗಟ್ಟೆಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿರುತ್ತದೆ.
ಉಚಿತ ವಾಹನ ವ್ಯವಸ್ಥೆ ಪಡೆದು ಮತ ಚಲಾಯಿಸಿ ಮರಳಿ ಮನೆಗೆ ತಲುಪಬಹುದಾಗಿದೆ. ಈ ಸೌಲಭ್ಯ ಪಡೆಯಲು ತಮ್ಮ ವ್ಯಾಪ್ತಿಯ ನಗರ ಅಥವಾ ಗ್ರಾಮೀಣ ವಿಕಲಚೇತನ ಪುನರ್ವಸತಿ ಕಾರ್ಯಕರ್ತರನ್ನು ಅಥವಾ ಚುನಾವಣಾ ಸಹಾಯವಾಣಿ 1950 ಯನ್ನು ಸಂಪರ್ಕಿಸಬಹುದಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು