Categories: ಹಾಸನ

ಬೇಲೂರು: ಮೊಲದ ಮೂಗಿಗೆ ಚಿನ್ನದ ಮೂಗುತಿ

ಬೇಲೂರು: ಚನ್ನಕೇಶವ ದೇಗುಲದಲ್ಲಿ ಸಂಕ್ರಾಂತಿಯಂದು ನಡೆಯುವ ಕುದುರೆ ಉತ್ಸವ ಅಥವಾ ದೇವರ ಕಾಡು ಬೇಟೆ ಉತ್ಸವ ಭಾನುವಾರ ಸಂಜೆ ವಿಜೃಂಭಣೆಯಿಂದ ಜರುಗಿತು.

ಶ್ರೀ ಚನ್ನಕೇಶವ ದೇವರ( ಕುದುರೆ) ಅಶ್ವಾರೋಹಣೋತ್ಸವ ಮತ್ತು ಸಾಂಪ್ರದಾಯಿಕ ಮೊಲ ಬಿಡುವ ಪದ್ಧತಿ ಆಚರಣೆ ಮೂಲಕ ಸಂಕ್ರಾಂತಿ ಸಂಭ್ರಮ ವನ್ನು ಹಿಂದಿನಿಂದಲೂ ಈ ವಿಶ್ವ ಪ್ರಸಿದ್ಧ ಕೇಂದ್ರದಲ್ಲಿ ಆಚರಿಸಲಾಗುತ್ತಿದೆ

ಚನ್ನಕೇಶವ ದೇವಾಲಯ ದಿಂದ ಉತ್ಸವವು ೨ ಕಿ.ಮೀ. ದೂರದ ನೆಹರೂ ನಗರಕ್ಕೆ ಮಂ ಗಳವಾದ್ಯದೊಂದಿಗೆ ಮೆರವಣಿ ಗೆಯಲ್ಲಿ ತೆರಳಿ ಹಳೇಬೀಡು ರಸ್ತೆಯಲ್ಲಿ ಹಾಕಲಾಗಿದ್ದ ವಿಶೇಷ ಪೂಜಾ ಚಪ್ಪರದಡಿ ಕುಳ್ಳಿರಿಸಿ ವಿಶೇಷ ಪೂಜೆ ನಡೆಸಲಾಯಿತು.

ಈ ವೇಳೆ ದೇಗುಲದಲ್ಲಿ ನಡೆದುಕೊಂಡು ಬಂದಿರುವ ಇತಿಹಾಸದ ವಿಶೇಷ ಆಚರಣೆ ಹಾಗೂ ಸಂಪ್ರದಾಯದಂತೆ, ಕಾಡುಮೊಲ ತಂದು ಅದನ್ನು ದೇವರ ಮೊಲವೆಂದು ಪರಿಗಣಿಸಿ ಪೂಜೆ ನೆರವೇರಿಸಿ ಅದರ ಮೂಗಿಗೆ ಚಿನ್ನದ ಮುರ (ಮೂಗುತಿ) ಚುಚ್ಚಿ ದೇವರಿಗೆ ಸ್ಪರ್ಶಿಸಿ ಪೂಜೆ ಸಲ್ಲಿಸಲಾಯಿತು.

ಹಿನ್ನೆಲೆ: ವಿಜಯನಗರ ಅರಸರ ಕಾಲದಲ್ಲಿ ಉತ್ತರಾಯಣ ಆರಂಭದಲ್ಲಿ ಈ ಉತ್ಸವ ಆರಂಭಗೊಂಡಿದ್ದು , ಇಂದಿಗೂ ಆಚರಣೆಯಲ್ಲಿದೆ. ಇದಕ್ಕೆ ಅದರದೆ ಆದ ವೈಶಿಷ್ಟ್ಯವಿದೆ.

ವೈಶಿಷ್ಟ್ಯ: ಚನ್ನಕೇಶವ ದೇವರು ಅಶ್ವಾರೋಹಿಯಾಗಿ ಬೇಟೆಗಾಗಿ ಕಾಡಿಗೆ ತೆರಳುತ್ತಾರೆ. ಈ ಸಂದರ್ಭ ಚನ್ನಕೇಶವ ದೇ ವರ ಪತ್ನಿ ಲಕ್ಷ್ಮೀ ತವರು ಮನೆಗೆ ಹೊರಡುತ್ತಾಳೆ. ತವರಿಗೆ ಹೋ ಗುವುದು ಬೇಡವೆಂದ ಚನ್ನಕೇ ಶವನ ಮಾತಿಗೆ ಗೌರವ ಸಿಗು ವುದಿಲ್ಲ. ಇದರಿಂದ ಕೋಪಗೊಂ ಡ ಚನ್ನಕೇಶವನು ಕುದುರೆ ಏರಿ ಬೇಟೆಗೆ ಹೊರಡುತ್ತಾನೆ. ಕೋಪಗೊಂಡ ವಿಷಯ ಪತ್ನಿ ಲಕ್ಷ್ಮಿಗೆ ತಿಳಿದು ಪತಿಯನ್ನು ವಾಪಸ್ ಕರೆಸಿಕೊಳ್ಳಲು ಬೇಟೆಗೆ ಹೋಗುತ್ತಿದ್ದ ಮಾರ್ಗಕ್ಕೆ ಅಡ್ಡ ಲಾಗಿ ಮೊಲವನ್ನು ಬಿಡಿಸುತ್ತಾಳೆ. ಮೊಲ ಅಡ್ಡಲಾಗಿ ಬಂದಿದ್ದನ್ನು ಕಂಡು, ಇದು ಬೇಟೆಗೆ ಅಪಶಕುನ ಎಂದು ಭಾವಿಸಿದ ಚನ್ನಕೇಶವ ದೇವರು ವಾಪಸ್ ಬರುತ್ತಾನೆ ಎಂಬ ಕಥೆಯಿದ್ದು ,ಇದು ದೇಗು ಲದಲ್ಲಿರುವ ದಾಖಲೆಯೂ ಪುಷ್ಠಿ ಕರಿಸುತ್ತದೆ. ಇದಕ್ಕೆ ಪೂರಕವಾಗಿ ಉತ್ಸವವನ್ನು ಮಾರ್ಗ ಮಧ್ಯೆಯೆ ಮೊಟಕುಗೊಳಿಸಿ ವಾಪಸ್ ತರಲಾಗುತ್ತದೆ.

ಪಟೇಲರ ಸಂಪ್ರದಾಯ: ಮೊಲ ಬಿಡುವ ಪದ್ಧತಿ ಆಚರಣೆಯಂತೆ ಸಮೀಪದ ದೊಡ್ಡಬ್ಯಾಡಿಗೆರೆ ಪಟೇಲರು ಮೊಲವನ್ನು ಹಿಡಿದು ತರುವ ಸಂಪ್ರದಾಯವಿದೆ. ಪೂಜಾ ಕಾರ್ಯವನ್ನು ಮುಖ್ಯಅರ್ಚಕ ನರಸಿಂಹ ಪ್ರೀಯ ಭಟ್ಟರು ಹಾಗೂ ಶ್ರೀನಿವಾಸ್‌ಭಟ್ ಇತರರು ನಡೆಸಿದರು.

ದೇಗುಲದ ಕಾರ್ಯನಿರ್ವಹ ಣಾಧಿಕಾರಿ ಆರ್. ವಿದ್ಯುಲತಾ, ಆರ್.ಐ. ಪ್ರಕಾಶ್, ವಿ.ಎ. ಹನು ಮಂತು, ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಡಾ.ನಾರಾಯಣ ಸ್ವಾಮಿ, ಸದಸ್ಯ ಪ್ರಮೋದ್, ರವಿಶಂಕರ್, ಅಡ್ಡೆಗಾರರಾದ ಶೈಲೇಶ್, ತಾರೇ ಶ್, ಗೋಪಿ, ವಿಜಯಲಕ್ಷ್ಮಿ, ತಾ.ಪಂ.ಮಾಜಿ ಅದ್ಯಕ್ಷ ಪರ್ವತಯ್ಯ ಇನ್ನಿತರ ಸದಸ್ಯರು, ವಿವಿಧ ಸಂಘಗಳ ಪ್ರಮುಖರು ಹಾಜರಿದ್ದರು.

Sneha Gowda

Recent Posts

ಭಾರತೀಯರಿಗೆ ಗುಡ್‌ ನ್ಯೂಸ್‌ : ವೀಸಾ ಇಲ್ಲದೆ ರಷ್ಯಾಕ್ಕೆ ಹೋಗುವ ಅವಕಾಶ

ವಿದೇಶಕ್ಕೆ ಸುತ್ತಬೇಕು ಎನ್ನುವ ಪ್ರವಾಸಿಗರಿಗೆ ಒಂದು ಶುಭ ಸುದ್ದಿ. ಭಾರತೀಯರು ಇನ್ನು ಶೀಘ್ರದಲ್ಲೇ ವೀಸಾ ಇಲ್ಲದೆ ರಷ್ಯಾ ಪ್ರವಾಸ ಮಾಡಬಹುದು.…

12 mins ago

ವಕೀಲ ದೇವರಾಜೆಗೌಡ ಮತ್ತೆ 2 ದಿನ ಎಸ್‌ಐಟಿ ಕಸ್ಟಡಿಗೆ

ಜಿಲ್ಲೆಯ 5ನೇ ಸಿವಿಲ್ ಕೋರ್ಟ್‌ನಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ನ್ಯಾಯಾಧೀಶರು,…

36 mins ago

ಕೇರಳದಲ್ಲಿ ಭಾರೀ ಮಳೆ : ರೆಡ್ ಅಲರ್ಟ್ ಘೋಷಣೆ

ಮುಂಗಾರು ಪ್ರವೇಶಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ದೇವರನಾಡು ಕೇರಳದಲ್ಲಿ ಭಾರಿ ಮಳೆಯಾಗುತ್ತಿದ್ದು, ಶನಿವಾರ ಭಾರತೀಯ ಹವಾಮಾನ ಇಲಾಖೆ (IMD) ರೆಡ್ ಅಲರ್ಟ್…

52 mins ago

ವಿಧಾನಪರಿಷತ್ ಚುನಾವಣೆ : ನಾಮಪತ್ರ ಅಂಗೀಕಾರ,ತಿರಸ್ಕೃತ ಅಭ್ಯರ್ಥಿಗಳ ಪಟ್ಟಿ ರಿಲೀಸ್

ರಾಜ್ಯ ವಿಧಾನ ಪರಿಷತ್​ಗೆ ನೈಋತ್ಯ, ಈಶಾನ್ಯ, ಬೆಂಗಳೂರು ಪದವೀಧರ ಕ್ಷೇತ್ರಗಳು ಹಾಗೂ ಆಗ್ನೇಯ, ನೈಋತ್ಯ ಶಿಕ್ಷಕರ ಕ್ಷೇತ್ರ, ದಕ್ಷಿಣ ಶಿಕ್ಷಕರ…

1 hour ago

ಟಾಸ್​ ಗೆದ್ದ ಚೆನ್ನೈ ಸೂಪರ್​ ಕಿಂಗ್ಸ್​ : ಫೀಲ್ಡಿಂಗ್​ ಆಯ್ಕೆ

ಪ್ಲೇ ಆಫ್​ ಪ್ರವೇಶಕ್ಕೆ ಮಹತ್ವವಾದ ಶನಿವಾರದ ಐಪಿಎಲ್(IPL 2024)​ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ಹಾಲಿ ಚಾಂಪಿಯನ್ ಚೆನ್ನೈ ಸೂಪರ್​ ಕಿಂಗ್ಸ್​​…

2 hours ago

ಶಿಕ್ಷಕ-ಪದವೀಧರ ಕ್ಷೇತ್ರದ ಅಭ್ಯರ್ಥಿಗಳ ಗೆಲುವು ನಿಶ್ಚಿತ : ಜಾರ್ಜ್

ಕಳೆದ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆ ಮಾದರಿಯಂ ತೆ, ವಿಧಾನ ಪರಿಷತ್ ಚುನಾವಣೆಯಲ್ಲೂ ಕಾರ್ಯಕರ್ತರುಗಳು ಅಭ್ಯರ್ಥಿಗಳ ಪರವಾಗಿ ಬೂತ್‌ಮಟ್ಟ ದಿಂದ…

3 hours ago