ಹಾಸನ

ಬೇಲೂರು: ಹಲ್ಮಿಡಿ ಶಿಲಾ ಪ್ರತಿಕೃತಿ ಮಂಟಪಕ್ಕೆ ಶಿಲಾನ್ಯಾಸ

ಬೇಲೂರು: ಕನ್ನಡ ಸಾಹಿತ್ಯ ಲೋಕಕ್ಕೆ ಪ್ರಥಮ ಶಿಲಾ ಶಾಸನ ನೀಡಿದ ಬೇಲೂರು ತಾಲ್ಲೂಕಿನ ಹಲ್ಮಿಡಿ ಗ್ರಾಮ ಸದ್ಯ ಇರುವ ಪ್ರತಿಕೃತಿ ಮಂಟಪ ಶಿಥಿಲವಾದ ಹಿನ್ನೆಲೆಯಲ್ಲಿ ದಾನಿಗಳಾದ ಗ್ರಾನೈಟ್ ರಾಜಶೇಖರ ನೆರವಿ ನಿಂದ ನಡೆಯುವ ಸಂಪೂರ್ಣ ಶಿಲಾ ಪ್ರತಿಕೃತಿ ಮಂಟಪಕ್ಕೆ ಇಂದು ಶಿಲಾನ್ಯಾಸ ನಡೆಸುವ ಮೂಲಕ ಕಾಮಗಾರಿಗೆ ಚಾಲನೆ ನೀಡಲಾಯಿತು.

ಕನ್ನಡ ಸಾಹಿತ್ಯಕ್ಕೆ ಅಕ್ಷರ ರೂಪದಲ್ಲಿ ಲಭ್ಯದ ಕನ್ನಡದ ಪ್ರಥಮ ಶಿಲಾ ಶಾಸನ ನೀಡಿದ ತಾಲ್ಲೂಕಿನ ಹಲ್ಮಿಡಿ ಗ್ರಾಮದಲ್ಲಿ ಅಂದಿನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಹೆಚ್.ಬಿ. ಮದನಗೌಡರ ಸಾರಥ್ಯದಲ್ಲಿ ಪ್ರತಿಕೃತಿ ಮಂಟಪವನ್ನು ನಿರ್ಮಿಸಲಾಗಿತ್ತು. ಕಾಲ ಕಳೆದಂತೆ ಪ್ರತಿಕೃತಿ ಮಂಟಪ ಶಿಥಿಲವಾದ ಕಾರಣದಿಂದ ಇಲ್ಲಿನ ಹಲ್ಮಿಡಿ ಶಿಲಾ ಶಾಸನ ಅಭಿವೃದ್ಧಿ ಟ್ರಸ್ಟ್ ಪದಾಧಿಕಾರಿಗಳು ನವೀಕರ ಣಕ್ಕಾಗಿ ಗ್ರಾನೈಟ್ ರಾಜಶೇಖರ ಅವರಲ್ಲಿ ಮನವಿ ಮಾಡಿದ ಕಾರಣದಿಂದ ಗ್ರಾನೈಟ್ ರಾಜಶೇಖರ ಒಪ್ಪಿ ಸಂಪೂರ್ಣ ಶಿಲೆಯಿಂದಲೇ ಸ್ವತಃ ವೆಚ್ಚದಲ್ಲಿ ಶಿಲಾ ಮಂಟಪವನ್ನು ನಿರ್ಮಿಸುವ ಬಗ್ಗೆ ಭರವಸೆ ನೀಡಿದಂತೆ ಇಂದು ಶಿಲಾ ಮಂಟಪದ ಕಾಮಗಾರಿಗೆ ಶಂಕುಸ್ಥಾಪನೆ ನಡೆಸಿ ಅಡಿಗಲ್ಲು ಹಾಕಲಾಯಿತು.

ಪತ್ರಿಕೆಯೊಂದಿಗೆ ಮಾತನಾಡಿ ಗ್ರಾನೈಟ್ ರಾಜಶೇಖರ, ನಾನು ಐದಾರು ವರ್ಷದಿಂದ ಹಲ್ಮಿಡಿ ಗ್ರಾಮದ ಸ್ಥಿತಿ ಗತಿ ಬಗ್ಗೆ ಪತ್ರಿಕೆಯಲ್ಲಿ ಓದಿದ್ದು, ಬಳಿಕ ಸ್ಥಳಕ್ಕೆ ಧಾವಿಸಿದ ಸಂದರ್ಭದಲ್ಲಿ ಇಲ್ಲಿನ ವ್ಯವಸ್ಥೆ ಕಂಡು ಇಂದಿನ ಅಧುನಿಕ ಯುಗಕ್ಕೆ ತಕ್ಕಂತೆ ಹಾಗೂ ಇರುವ ಪ್ರತಿಕೃತಿ ಮಂಟಪಕ್ಕೆ ಯಾವುದೇ ಚ್ಯುತಿ ಉಂಟಾಗಂತೆ ಸಂಪೂರ್ಣ ಶಿಲಾ ಮಂಟಪ ನಿರ್ಮಿಸಬೇಕೆಂದು ಎಂದು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಹೆಚ್.ಬಿ.ಮದನಗೌಡರು ಮತ್ತು ಹಾಲಿ ಅಧ್ಯಕ್ಷ ಡಾ.ಹೆಚ್. ಎಲ್.ಮಲ್ಲೇಶಗೌಡ ಸಹಕಾರ ಮತ್ತು ಸ್ಥಳೀಯ ಕಸಾಪ ಪದಾಧಿಕಾರಿಗಳು ಹಾಗೂ ವಿನ್ಯಾಸಗಾರರ ಸಲಹೆಯಂತೆ ಈಗಾಗಲೇ ಶಿಲಾ ಮಂಟಪಕ್ಕೆ ಕಂಬಗಳನ್ನು ಸಿದ್ದತೆ ಮಾಡಲಾಗಿದೆ. ಸುಮಾರು ರೂ ೩೦ ಲಕ್ಷ ವೆಚ್ಚ ಭರಿಸಲಾಗುತ್ತದೆ. ಛತ್ರಿಯನ್ನು ಕೂಡ ಕಲ್ಲಿನಿಂದ ನಿರ್ಮಿಸಲಾಗಿದೆ. ಆವರ ಣದಲ್ಲಿ ಸಂಪೂರ್ಣ ಗ್ರಾನೈಟ್ ನೆಲಹಾಸಿಗೆ ಹಾಕಲಾಗುತ್ತದೆ. ಈ ಕಾಮಗಾರಿ ಮುಂದಿನ ತಿಂಗಳಲ್ಲಿ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಿಂದ ಉದ್ಘಾಟನೆ ನಡೆಸಿ ಗ್ರಾಮದ ಅಭಿವೃದ್ಧಿಗೆ ರೂ ೨೫ ಕೋಟಿ ನೀಡುವಂತೆ ಮನವಿ ಸಲ್ಲಿಸಲಾಗುತ್ತದೆ. ಕಾರಣ ಹಲ್ಮಿಡಿಗೆ ದಿನನಿತ್ಯ ನೂರಾರು ಪ್ರವಾಸಿಗರು ಬರುತ್ತಾರೆ. ಅದರೆ ಸರಿಯಾದ ರಸ್ತೆ ಇಲ್ಲದಿರುವುದು ನಿಜಕ್ಕೂ ಶೋಚನೀಯ, ಸರ್ವರು ಮತ್ತು ವಿಶೇಷವಾಗಿ ಗ್ರಾಮಸ್ಥರ ಸಹಕಾರ ಮುಖ್ಯವಾಗಿದೆ ಎಂದರು.

ಹಲ್ಮಿಡಿ ಶಿಲಾ ಶಾಸನ ಗ್ರಾಮ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಚನ್ನೇಗೌಡ ಮಾತನಾಡಿ, ನುಡಿದಂತೆ ನಡೆದ ವ್ಯಕ್ತಿಗಳಲ್ಲಿ ಗ್ರಾನೈಟ್ ರಾಜಶೇಖರ ಅವರು ಎಂದ ಅವರು ಈಗಾಗಲೇ ತಾಲ್ಲೂಕು ಮತ್ತು ಜಿಲ್ಲೆಯಲ್ಲಿ ೪೦೦ ಕ್ಕೂ ಅಧಿಕ ದೇಗುಲಕ್ಕೆ ಕೋಟ್ಯಂತರ ರೂಪಾಯಿಗಳ ಗ್ರಾನೈಟ್ ನೀಡಿದ್ದಾರೆ. ಸಾಮಾಜಿಕ ಮತ್ತು ಜನಪರ ಕೆಲಸ ಮಾಡು ತ್ತಿರುವ ಗ್ರಾನೈಟ್ ರಾಜಶೇಖರ ಮಾಡುತ್ತಿರುವ ಕೆಲಸಕ್ಕೆ ನಮ್ಮ ಗ್ರಾಮಸ್ಥರ ಸಂಪೂರ್ಣ ಸಹಕಾರವಿದೆ ಎಂದು ತಿಳಿಸಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ.ಎಲ್. ರಾಜೇಗೌಡ ಮಾತನಾಡಿ, ಕನ್ನಡಕ್ಕೆ ಪ್ರಥಮ ಶಿಲಾ ಶಾಸನ ನೀಡಿದ ಹಲ್ಮಿಡಿ ಗ್ರಾಮಕ್ಕೆ ಸಂಪೂರ್ಣ ಶಿಲೆಯಿಂದಲೇ ಮಂಟಪ ನಿರ್ಮಿಸಲು ಮುಂದಾಗಿರುವ. ಗ್ರಾನೈಟ್ ರಾಜಶೇಖರ ಅವರ ಕೆಲಸ ನಿಜಕ್ಕೂ ಅಗಮ್ಯವಾಗಿದೆ. ಮುಂದಿನ ದಿನದಂದು ನಡೆಯುವ ಉದ್ಘಾಟನೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ನಡೆಸ ಲಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಹಲ್ಮಿಡಿ ಶಿಲಾ ಶಾಸನ ಗ್ರಾಮ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಗೋವಿಂದೇಗೌಡ, ಕಸಾಪ ಮಾಜಿ ಅಧ್ಯಕ್ಷರಾದ ಮ.ಶಿವಮೂರ್ತಿ, ಅನಂತರಾಜೇ ಅರಸು, ಸಾಹಿತಿ ಡಾ. ಶ್ರೀ ವತ್ಸ ಎಸ್ ವಟಿ,ಗೌರವ ಕಾರ್ಯದರ್ಶಿ ಆರ್.ಎಸ್.ಮಹೇಶ, ಕೋಶಾಧ್ಯಕ್ಷ ಮಾ.ನ.ಮಂಜೇಗೌಡ, ಪತ್ರಕರ್ತರಾದ ಹೆಬ್ಬಾಳು ಹಾಲಪ್ಪ, ಮಹೇಶಗೌಡ, ದೇವರಾಜ್ ಹಾಗೂ ಗ್ರಾಮಸ್ಥರು ಹಾಜರಿದ್ದರು.

Sneha Gowda

Recent Posts

ಎಚ್.ಡಿ.ಕೋಟೆ: ಕಬಿನಿ ಜಲಾಶಯಕ್ಕೆ ಹಾರಿ ನೌಕರ ಆತ್ಮಹತ್ಯೆ

ಕಬಿನಿ ಜಲಾಶಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನೌಕರ ಜಲಾಶಯಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

6 mins ago

ಕ್ಯಾಂಟರ್ ಅಡ್ಡಗಟ್ಟಿ ಹತ್ತಿ ವ್ಯಾಪಾರಿಗಳಿಂದ ₹32 ಲಕ್ಷ ದರೋಡೆ

ಕ್ಯಾಂಟರ್ ಅಡ್ಡಗಟ್ಟಿ ಹತ್ತಿ ವ್ಯಾಪಾರಿಗಳಿಂದ ಕಣ್ಣಿಗೆ ಖಾರದ ಪುಡಿ ಎರಚಿ, ಹಲ್ಲೆ ನಡೆಸಿ, ಅವರ ಬಳಿ ಇದ್ದ ₹32 ಲಕ್ಷವನ್ನು ದೋಚಿಕೊಂಡು…

8 mins ago

ಕಾಶಿಯಲ್ಲಿ ಕನ್ನಡದ ಶಿಲಾ ಶಾಸನ ಬಟ್ಟೆ ತೊಳೆಯಲು ಬಳಕೆ!

ಇತಿಹಾಸ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕಾಶಿಯಲ್ಲಿ ಕನ್ನಡದ ಶಿಲಾ ಶಾಸನ ಪತ್ತೆಯಾಗಿದೆ. ಇದು ಶಿವಮೊಗ್ಗ ಜಿಲ್ಲೆಯ ಕೆಳದಿ ಅರಸರ ಕಾಲದ…

12 mins ago

ಬಸ್ ಹತ್ತುವಾಗ ಆಯಾತಪ್ಪಿ ಬಿದ್ದ ಮಹಿಳೆ : ಚಕ್ರಕ್ಕೆ ಸಿಲುಕಿ ಸಾವು

ಬಸ್ ಹತ್ತುವಾಗ ಚಕ್ರಕ್ಕೆ ಸಿಲುಕಿ ದಾರುಣವಾಗಿ ಸಾವನಪ್ಪಿರುವ ಘಟನೆ . ಶಿವಮೊಗ್ಗದ ಸಾಗರ ತಾಲೂಕಿನ ಅಂಬಾರಗೋಡ್ಲು-ಹೊಳೆಬಾಗಿಲು ಬಳಿ ನಡೆದಿದೆ. ಧಾರವಾಡ…

34 mins ago

ಡಿವೈಡರ್‌ಗೆ ಡಿಕ್ಕಿ ಹೊಡೆದು ಪಕ್ಕದ ರಸ್ತೆಗೆ ಹಾರಿದ ಕೆಎಸ್‌ಆರ್‌ಟಿಸಿ ಬಸ್‌

ಚಾಲಕನ ನಿಯಂತ್ರಣ ತಪ್ಪಿ ಕೆಎಸ್‌ಆರ್‌ಟಿಸಿ ಬಸ್‌ ಡಿವೈಡರ್‌ಗೆ ಡಿಕ್ಕಿ ಹೊಡೆದು ಹೆದ್ದಾರಿಯ ಪಕ್ಕದ ರಸ್ತೆಗೆ ಹಾರಿದ ಘಟನೆ ಬೆಂಗಳೂರು ಗ್ರಾಮಾಂತರ…

55 mins ago

ಪಾಪನಕೆರೆ ಒತ್ತುವರಿ ಆರೋಪ : ತಾಲೂಕು ಕಚೇರಿ ಮುಂದೆ ಪ್ರತಿಭಟನೆ

ಭೀಮನಗರದ ರೈತರು ಯುವ ಮುಖಂಡ ಕೃಷ್ಣಕುಮಾರ್ ನೇತೃತ್ವದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

1 hour ago