ಮೈಸೂರು: ರೈಲು ಕಂಬಿ ಬ್ಯಾರಿಕೇಡ್ ಇದ್ರೂ ಗಜರಾಜ ಅರಣ್ಯ ಇಲಾಖೆ ವಾಹನ ಅಟ್ಟಾಡಿಸುವ ಯತ್ನ ನಡೆಸಿದ ವಿಡಿಯೋ ವೈರಲ್ ಆಗಿದೆ. ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕು ದಡದಳ್ಳಿ ಕಾಲೋನಿಯ ಅರಣ್ಯ ಅಂಚಿನಲ್ಲಿ ಘಟನೆ ನಡೆದಿದೆ.
ಬ್ಯಾರಿಕೇಡ್ ಬಳಿ ಸಾಗುತ್ತಿದ್ದ ಒಂಟಿ ಸಲಗ ಅರಣ್ಯ ಇಲಾಖೆ ಸಿಬ್ಬಂದಿಗಳು ಇರುವ ವಾಹನ ನೋಡುತ್ತಲೇ ಘರ್ಜಿಸುತ್ತಾ ಧಾವಿಸಿದೆ. ಬ್ಯಾರಿಕೇಡ್ ಇದ್ದರೂ ರೋಷದಿಂದ ವಾಹನದತ್ತ ನುಗ್ಗುವ ಯತ್ನ ನಡೆಸಿದೆ.
ಬ್ಯಾರಿಕೇಡ್ ಇದ್ದ ಕಾರಣ ದಾಳಿ ನಡೆಸಲು ಸಾಧ್ಯವಾಗಿಲ್ಲ. ಗಜರಾಜನ ಆಕ್ರೋಶವನ್ನ ಸಿಬ್ಬಂದಿಯೊಬ್ಬರು ಮೊಬೈಲ್ ನಲ್ಲಿ ಸೆರೆಹಿಡಿದಿದ್ದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

