ಮೈಸೂರು: ಮುಸ್ಲಿಂ ಹೆಣ್ಣು ಮಕ್ಕಳಿಗೆ ಸರ್ಕಾರಿ ಶಾಲೆಗಳಲ್ಲಿ ಹಿಜಾಬ್ ಗೆ ಅವಕಾಶ ವಿಚಾರವಾಗಿ ಮೈಸೂರಿನಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದಾರೆ.
ಮಾನ್ಯ ಶಿಕ್ಷಣ ಸಚಿವ ಸಿಎಂ ಸಿದ್ದರಾಮಯ್ಯ ತೆಗೆದುಕೊಂಡಿರುವ ನಿರ್ಧಾರ ಇದೆಲ್ಲ ನೋಡಿದಾಗ ಒಂದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಇದು ಹಿಂದುಗಳನ್ನು ಉರಿಸಲಿಕ್ಕೆ ಮುಸ್ಲಿಮರ ಹೋಲೈಸಲಿಕ್ಕೆ ಎನ್ನುವುದು ಗೊತ್ತಾಗುತ್ತದೆ. ಮುಸ್ಲಿಂ ಹೆಣ್ಣು ಮಕ್ಕಳಿಗೆ ಹಿಜಾಬ್ ಅವಶ್ಯಕತೆ ಇದೆಯೋ ಇಲ್ಲವೋ ಗೊತ್ತಿಲ್ಲ. ಕಾಂಗ್ರೆಸ್ ನಾಯಕರಿಗೆ ಖಂಡಿತ ಬುರ್ಕಾದ ಅವಶ್ಯಕತೆ ಇದೆ. ಕಳೆದ ಮೂರು ವರ್ಷಗಳಿಂದ ಏನೂ ಮಾಡದೆ ಜನರಿಗೆ ಮುಖ ತೋರಿಸಲಾಗುತ್ತಿಲ್ಲ ಅದಕ್ಕೆ ಅವರಿಗೆ ಬುರ್ಕಾ ಬೇಕಾಗಿದೆ.
ಮೂರು ವರ್ಷಗಳಲ್ಲಿ ಮೂರು ಕಾಸಿನ ಕೆಲಸವನ್ನು ಮಾಡಿಲ್ಲ. ಸಮಾಜವಾದಿ ಧೋರಣೆಯಿಂದ ಬಂದಿರುವ ಸಿಎಂ ನಿಮಗೆ ಸ್ವಲ್ಪ ಇತಿಹಾಸದ ಜ್ಞಾನ ಇಲ್ಲವಾ.? ಶಾಲೆಗಳಲ್ಲಿ ಸಮವಸ್ತ್ರವನ್ನ ಯಾಕೆ ತಂದಿದ್ದಾರೆ.? ಶಾಲೆಯಲ್ಲಿ ಎಲ್ಲರೂ ಒಂದೆ ಎಂಬ ಭಾವನೆ ತರಲು ಸಮವಸ್ತ್ರ ತಂದಿದ್ದಾರೆ. ಆ ಮೂಲ ಆಶಯಕ್ಕೆ ಕೊಡಲಿ ಪೆಟ್ಟು ಕೊಡ್ತಾ ಇದ್ದೀರಾ.? ಕೇಸರಿ ಶಾಲು ಬೇಡ ಅಂತೀರಾ ಮುಸಲ್ಮಾನ ಯುವಕರಿಗೆ ಟೋಪಿ,ಕುರುಚಲು ಗಡ್ಡ ಬಿಟ್ಟುಕೊಂಡು ಬರಲು ಅವಕಾಶ ಕೊಟ್ಟುಬಿಡಿ.
ಸಿಎಂ ಕರ್ನಾಟಕದ ಖಮನೈ ಆಗಲಿಕ್ಕೆ ಹೊರಟಿದ್ದಾರೆ. ಈ ರೀತಿ ಚಿಲ್ಲರೆ ರಾಜಕಾರಣ ಮಾಡಿ ಹಿಂದುಗಳ ಉರಿಸುವ ಕೆಲಸ ಮಾಡೋದ ಬಿಡಿ. ಕರ್ನಾಟಕದ ಜನರಲ್ಲಿ ಕೇಳಿಕೊಳ್ಳೋದು ಇಷ್ಟೇ. ನೀವು ಮೇಲು ಕೀಳು ಎನ್ನುವುದ ಬಿಟ್ಟು ಒಂದಾಗಿ. ಆಗ ಇವರು ಏನೂ ಮಾಡಲಿಕ್ಕೆ ಆಗಲ್ಲ. ಸಿದ್ದರಾಮಯ್ಯ ಹಿಂದುಗಳ ಭಾವನೆಗೆ ನಿರಂತರ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ಇನ್ನು ಎರಡೇ ವರ್ಷ ಜನ ನಿಮಗೆ ತಕ್ಕ ಬುದ್ದಿ ಕಲಿಸುತ್ತಾರೆ ಎಂದು ಮೈಸೂರಿನಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದಾರೆ.

