ಮೈಸೂರು : ಟಿ ನರಸೀಪುರ ಇನ್ಸ್ಪೆಕ್ಟರ್ ಧನಂಜಯ ಹೇಳಿಕೆಯನ್ನು ಮಾಜಿ ಸಚಿವ ಹೆಚ್ ಸಿ ಮಹದೇವಪ್ಪ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ನಡೆಸುವ ಅಧಿಕಾರಿಗಳು ಸಾಮರಸ್ಯ ಕಾಪಾಡಲು ಕೆಲವೊಮ್ಮೆ ಸೂಚನೆ ಕೊಡ್ತಾರೆ. ಆ ಸೂಚನೆಯನ್ನೇ ತಪ್ಪಾಗಿ ಅರ್ಥೈಸಿ. ಅದಕ್ಕೆ ರಾಜಕೀಯ ಬಣ್ಣ ಬೆರೆಸಿ. ಜನರನ್ನ ಗೊಂದಲಕ್ಕೆ ಸಿಲುಕಿಸೋದು ಯಾಕೆ ಎಂದರು.

ಇದು ಸಂವಿಧಾನದ ಆಶಯಕ್ಕೆ ವಿರುದ್ಧವಾದದ್ದು. ನರಸೀಪುರ ತಾಲ್ಲೂಕಿನಲ್ಲಿ ಇಂತಹ ಘಟನೆಗಳು ಯಾವಾಗಲು ನಡೆದಿಲ್ಲ. ಕಾನೂನಿಗೆ ವಿರುದ್ಧವಾಗಿ ಯಾರಾದ್ರೂ ನಡೆದುಕೊಂಡಿದ್ರೆ ಕ್ರಮ ಆಗಲಿ ಎಂದು
ಟಿ ನರಸೀಪುರದಲ್ಲಿ ಮಾಜಿ ಸಚಿವ ಮಹದೇವಪ್ಪ ಹೇಳಿಕೆ ನೀಡಿದ್ದಾರೆ.