ಮೈಸೂರು : ನಾಲೆಗಳು ಕೆರೆಕಟ್ಟೆಗಳಿಗೆ ನೀರು ಬಿಡುವಂತೆ ರೈತರಿಂದ ಮೈಸೂರಿನ ಕಾಡಾ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.
ರಾಜ್ಯ ಸರ್ಕಾರದ ವಿರುದ್ಧ ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘ, ಕರ್ನಾಟಕ ರಾಜ್ಯ ರೈತ ಸಂಘ ಪ್ರತಿಭಟನೆ ನಡೆಸಲಾಯಿತು. ಈಗಾಗಲೇ ತಮಿಳುನಾಡಿಗೆ ನೀರು ಬಿಟ್ಟಿದ್ದಾರೆ. ಬೇಸಿಗೆ ಆರಂಭವಾಗಿ ನಮ್ಮ ಭಾಗದಲ್ಲಿ ನೀರಿಲ್ಲವಾಗುತ್ತಿದೆ ಎಂದರು.
ಬೇಸಿಗೆಯಲ್ಲಿ ನೊಂದಿರುವ ರೈತರಿಗೆ, ಜನ, ಜಾನುವಾರುಗಳಿಗೆ ನೀರು ಬೇಕು. ಅಂತರ್ಜಲ ವೃದ್ಧಿಗಾಗಿ ಕೆರೆಕಟ್ಟೆ, ನಾಲೆಗಳಿಗೆ ನೀರು ಹರಿಸಬೇಕು. ಜಿಲ್ಲಾಡಳಿತಗಳ ಕಣ್ಣಾಮುಚ್ಚಾಲೆಯಿಂದ ರೈತರು ಸಂಕಷ್ಟಕ್ಕೀಡಾಗಿದ್ದೇವೆ. ವಿದ್ಯುತ್ ಸರಿಯಾಗಿ ಕೊಡುತ್ತಿಲ್ಲ. ಕೆರೆ ಕಟ್ಟೆಗಳು, ನಾಲೆಗಳಿಗೆ ನೀರು ಕೊಟ್ಟಿಲ್ಲ ಎಂದರು.
ಚಾಮರಾಜನಗರ ಮೈಸೂರು ಭಾಗಕ್ಕೆ ನೀರು ಕೊಡಿ. ಇನ್ನೊಂದು ವಾರದೊಳಗೆ ನೀರು ಕೊಡಲಿಲ್ಲವೆಂದರೆ ಉಗ್ರ ಹೋರಾಟ ನಡೆಸಲಾಗುತ್ತದೆ. ಮುಂದಿನ ದಿನಗಳಲ್ಲಿ ಚುನಾಯಿತ ಪ್ರತಿನಿಧಿಗಳಿಗೆ ಮಸಿ ಬಳಿಯುತ್ತೇವೆ ಎಚ್ಚರಿಕೆ ನೀಡಲಾಯಿತು. ಅಧಿಕಾರಿಗಳ ಕಚೇರಿಗೆ ಬೀಗ ಹಾಕುತ್ತೇವೆ ಎಂದು ರೈತರಿಂದ ಆಕ್ರೋಶ ವ್ಯಕ್ತವಾಯಿತು.

