ನಂಜನಗೂಡು: ಕರ್ನಾಟಕ ರಾಜ್ಯ ರೈತ ಸಂಘಕ್ಕೆ ನಂಜನಗೂಡಿನಲ್ಲಿ ನೂತನವಾಗಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ನಂಜನಗೂಡು ನಗರದ ಎಪಿಎಂಸಿ ಆವರಣದ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಶಿರಮಳ್ಳಿ ಸಿದ್ದಪ್ಪ ಮತ್ತು ಪ್ರಧಾನ ಕಾರ್ಯದರ್ಶಿ ಹೆಜ್ಜಿಗೆ ಪ್ರಕಾಶ್ ರವರ ನೇತೃತ್ವದಲ್ಲಿ ಸರಗೂರು, ಹೆಚ್. ಡಿ ಕೋಟೆ ಮತ್ತು ನಂಜನಗೂಡು ಸಂಘದ ನೂತನ ಪದಾಧಿಕಾರಿಗಳ ಮೂಲಕ ಸಂಘಟನೆಗೆ ಕಾಲಿಟ್ಟರು.

ರೈತ ಸಂಘಟನೆಯ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ರವರ ಬಣದಿಂದ ಹೊರಬಂದು, ನೂತನವಾಗಿ ಕರ್ನಾಟಕ ರಾಜ್ಯ ರೈತ ಸಂಘಟನೆಗೆ ಪದಾಧಿಕಾರಿಗಳನ್ನು ಹಸಿರು ಶಾಲು ಹೊದಿಸುವ ಮೂಲಕ ಬರಮಾಡಿಕೊಂಡರು.

ಪ್ರೊ. ಎಂ.ಡಿ ನಂಜುಂಡಸ್ವಾಮಿ ರವರ ತತ್ವ ಸಿದ್ಧಾಂತಗಳೊಂದಿಗೆ ಸಂಘಟನೆಯನ್ನು ಮಾಡಲಾಗುತ್ತಿದ್ದು, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಸಂಘಟನೆ ಮಾಡಲಾಗುತ್ತದೆ. ಒಗ್ಗಟ್ಟಿನಿಂದ ಹೋರಾಟ ನಡೆಸಿ, ನೊಂದ ರೈತರಿಗೆ ನ್ಯಾಯ ಕೊಡಿಸುವುದು ನಮ್ಮ ಉದ್ದೇಶವಾಗಿದ್ದು, ಮುಂಬರುವ ದಿನಗಳಲ್ಲಿ ಜಿಲ್ಲಾಮಟ್ಟದಲ್ಲಿ ಬೃಹತ್ ಸಮಾವೇಶ ಮತ್ತು ಪ್ರತಿಭಟನೆ ಚಳುವಳಿಗಳನ್ನು ನಡೆಸಲಾಗುವುದು ಎಂದು ರೈತ ಸಂಘದ ಅಧ್ಯಕ್ಷ ಶಿರಮಳ್ಳಿ ಸಿದ್ದಪ್ಪ ತಿಳಿಸಿದರು.

ನಂಜನಗೂಡು ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷರಾಗಿ ಕೆ.ಪಿ ಪರಮೇಶ್, ಅಧ್ಯಕ್ಷರಾಗಿ ಶಿರಮಳ್ಳಿ ಸಿದ್ದಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್ಚಿಗೆ ಪ್ರಕಾಶ್, ಜಿಲ್ಲಾ ಮುಖಂಡ ಅಂಕಪ್ಪ, ಸಂಘಟನಾ ಕಾರ್ಯದರ್ಶಿ ಹಂಚಿಪುರ ಮಹದೇವ್, ಉಪಾಧ್ಯಕ್ಷರಾದ ಗಣಪತಿ ಮಹದೇವ್, ಗುಡ್ಡಪ್ಪ, ರಂಗ ನಾಯಕ, ತಾಲ್ಲೂಕು ರೈತ ಯುವ ಘಟಕದ ಅಧ್ಯಕ್ಷ ಸಿದ್ದು, ಹೋಬಳಿ ಅಧ್ಯಕ್ಷರಾದ ರವಿ, ಮಹೇಶ್, ಎಚ್ ಡಿ ಕೋಟೆ ತಾಲೂಕಿನಿಂದ ಅಧ್ಯಕ್ಷರಾಗಿ ರಾಜಣ್ಣ ಉಪಾಧ್ಯಕ್ಷರಾಗಿ ಮಹದೇವ ನಾಯಕ,

ನಂದೀಶ್, ಮಹೇಶ್, ಚೌಡನಾಯಕ, ಮಹೇಂದ್ರ, ಉಪೇಂದ್ರ, ಪಿ ನಾಗರಾಜು, ವೆಂಕಟೇಶ, ಶಿವಣ್ಣೇಗೌಡ, ಸರಗೂರು ತಾಲ್ಲೂಕಿನಿಂದ ಶಿವಕುಮಾರ್, ಚೆನ್ನನಾಯಕ, ಲಿಂಗನಾಯಕ, ಮಹಾಲಿಂಗ, ಕಲ್ಲರಾಜು ಮಹದೇವ ನಾಯಕ, ಚೆಲುವ, ಕೃಷ್ಣ, ನವೀನ್ ರವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಕೊಡಗು ಜಿಲ್ಲಾಧ್ಯಕ್ಷ ಮನೋಸೋಮಯ್ಯ, ಜಿಲ್ಲಾ ಮುಖಂಡ ಸುಬ್ಬಯ್ಯ, ಮೈಸೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಜ್ಜೆಗೆ ಪ್ರಕಾಶ್, ಮೈಸೂರು ವಿಜಯೇಂದ್ರ, ಸರಗೂರು ನಟರಾಜು, ಕೋಟೆ ಮಹದೇವ ನಾಯಕ, ಸರಗೂರು ಚನ್ನನಾಯಕ, ಮಹಾಲಿಂಗು, ಅಂಕಪ್ಪ, ಮಹದೇವಸ್ವಾಮಿ ಸೇರಿದಂತೆ ರೈತರು ಹಾಜರಿದ್ದರು.