ಮೈಸೂರು: ಕರ್ನಾಟಕದ ನೂತನ ರಾಜ್ಯಪಾಲರಾಗಿ ಡಾ ಸುಧಾ ನಾಯಕ್ ರನ್ನ ನೇಮಕ ಮಾಡಲಾಗಿದ್ದು ಶಾಸಕ ಶ್ರೀವತ್ಸ ರಾಷ್ಟ್ರಪತಿಗಳಿಗೆ ಕೃತಜ್ಞತೆ ಸಲ್ಲಿಸುವ ಮೂಲಕ ಸ್ವಾಗತಿಸಿದ್ದಾರೆ.

ವನದುರ್ಗೆಯರ ಆರಾಧನೆ ಸಮಯದಲ್ಲಿ ಮಹಿಳೆಗೆ ಸ್ಥಾನಮಾನ ನೀಡಿರುವುದು ಸಂತಸದ ವಿಚಾರವೆಂದು ಬಣ್ಣಿಸಿದ್ದಾರೆ. ದೆಹಲಿ ಪ್ರತಿಭಟನೆ ನೂಕಾಟದಲ್ಲಿ ಸಿಲುಕಿದ ಸಿಎಂ ಪ್ರಕರಣಕ್ಕೆ ಪ್ರತಿಕ್ರಿಯಿಸಿದ ಶ್ರೀವತ್ಸ ರಾಹುಲ್ ಗಾಂಧಿ ಇರುವಾಗಲೇ ತಳ್ಳಾಡಿ ನೂಕಾಡಿದ್ದಾರೆ.

ಇದು ರಾಜ್ಯದ 7 ಕೋಟಿ ಜನರಿಗೆ ಆದ ಅವಮಾನ. ನಾವು ನಮ್ಮ ಸಿಎಂ ಎಂದು ಗೌರವ ಸೂಚಿಸುತ್ತೇವೆ.ಆದರೆ ಸಿಎಂ ರನ್ನ ಪ್ರತಿಭಟನೆಯಲ್ಲಿ ಎಳೆದಾಡಿದ್ದಾರೆ. ಈ ಬಗ್ಗೆ ಇಂಡಿ ಒಕ್ಕೂಟ ಕ್ಷಮೆ ಕೇಳಬೇಕು. ರಾಜ್ಯದ ಜನತೆಗೆ ಕ್ಷಮಾಪಣೆ ಕೇಳಬೇಕು ಎಂದು ಒತ್ತಾಯಿಸಿದರು.