News Karnataka Kannada
Monday, May 06 2024
ಚಾಮರಾಜನಗರ

ಮಲೆ ಮಹದೇಶ್ವರ ಗ್ರಾಮ  ಪಂಚಾಯಿತಿಯ ಜನರಿಂದ ಚುನಾವಣೆ ಬಹಿಷ್ಕಾರ

ಕರ್ನಾಟಕ ತಮಿಳುನಾಡು ಗಡಿ ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಗ್ರಾಮ  ಪಂಚಾಯಿತಿಗೆ ಸೇರಿದ ಇಂಡಿಗನತ್ತ, ಮೆಂದಾರೆ ,ತುಳಿಸಿಕರೆ ,ತೇಕಣೆ, ಪಡಸಲಗತ್ತ, ಈ ಗ್ರಾಮದಲ್ಲಿ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದೆ ಮತದಾರರು ದೂರ ಉಳಿದಿದ್ದಾರೆ.
Photo Credit : NewsKarnataka

ಚಾಮರಾಜನಗರ: ಕರ್ನಾಟಕ ತಮಿಳುನಾಡು ಗಡಿ ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಗ್ರಾಮ  ಪಂಚಾಯಿತಿಗೆ ಸೇರಿದ ಇಂಡಿಗನತ್ತ, ಮೆಂದಾರೆ ,ತುಳಿಸಿಕರೆ ,ತೇಕಣೆ, ಪಡಸಲಗತ್ತ, ಈ ಗ್ರಾಮದಲ್ಲಿ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದೆ ಮತದಾರರು ದೂರ ಉಳಿದಿದ್ದಾರೆ.

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ತುಳಿಸಿಕರೆಯ 480 ಮತದಾರರು, ಇಂಡಿಗನತ್ತ ಪೋಡಿನ 528 ಮತದಾರರು , ಪಡಸಲನತ್ತ ಪೋಡಿನ 298 ನಿವಾಸಿಗಳು ಮತದಾನದಿಂದ ದೂರವಿದ್ದು, ಮತ ಬಹಿಷ್ಕಾರ ಬಿಸಿ ಮುಟ್ಟಿಸಿದ್ದಾರೆ.

ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಈ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯ ಕೊರತೆ ಇದ್ದರೂ ಸಹ ಯಾರೂ ಇದೂವರೆಗೂ ಸಮಸ್ಯೆ ಬಗೆಹರಿಸಲು ಮುಂದಾಗಲಿಲ್ಲ. ಚುನಾವಣೆ ಬಂದ ಬಳಿಕ ಮಾತ್ರ ಕೇವಲ ಬರವಸೆ ನೀಡಿ ಹೋಗುವ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಪಾಠ ಕಲಿಸಲು ಈ ನಿರ್ಧಾರ ಕೈಗೊಂಡಿದ್ದೇವೆ ಸ್ಥಳೀಯರೊಬ್ಬರು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು