News Karnataka Kannada
Tuesday, April 30 2024
ಚಾಮರಾಜನಗರ

ಡೇರಿ ಚುನಾವಣೆಯಲ್ಲಿ ದಲಿತ ಸಮುದಾಯಕ್ಕೆ ಅನ್ಯಾಯ: ಸದಸ್ಯತ್ವ ರದ್ದುಗೊಳಿಸಲು ಒತ್ತಾಯ

ತಾಲೂಕಿನ ಹೊನ್ನಶೆಟ್ಟರ ಹುಂಡಿ ಗ್ರಾಮದ ಡೇರಿ ಚುನಾವಣೆಯಲ್ಲಿ ದಲಿತ ಸಮುದಾಯಕ್ಕೆ ಅನ್ಯಾಯವೆಸಗಲಾಗಿದ್ದು ಪ್ರಸ್ತುತ ಆಯ್ಕೆ ಮಾಡಿರುವ ಹತ್ತು ಮಂದಿ ಸದಸ್ಯರ ಸದಸ್ಯತ್ವವನ್ನ ರದ್ದುಗೊಳಿಸಬೇಕು ಎಂದು ಸ್ಥಳೀಯರು ಚುನಾವಣಾಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
Photo Credit :

ಗುಂಡ್ಲುಪೇಟೆ: ತಾಲೂಕಿನ ಹೊನ್ನಶೆಟ್ಟರ ಹುಂಡಿ ಗ್ರಾಮದ ಡೇರಿ ಚುನಾವಣೆಯಲ್ಲಿ ದಲಿತ ಸಮುದಾಯಕ್ಕೆ ಅನ್ಯಾಯವೆಸಗಲಾಗಿದ್ದು ಪ್ರಸ್ತುತ ಆಯ್ಕೆ ಮಾಡಿರುವ ಹತ್ತು ಮಂದಿ ಸದಸ್ಯರ ಸದಸ್ಯತ್ವವನ್ನ ರದ್ದುಗೊಳಿಸಬೇಕು ಎಂದು ಸ್ಥಳೀಯರು ಚುನಾವಣಾಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

ಹೊನ್ನಶೆಟ್ಟರಹುಂಡಿ ಡೇರಿ ಚುನಾವಣೆಗೂ ಮುನ್ನವೇ ಯಾವುದೇ ಪತ್ರಿಕಾ ಪ್ರಕಟಣೆ ಮತ್ತು ಮಾಹಿತಿ ನೀಡದೆ ಚುನಾವಣೆಯನ್ನ ನಡೆಸಿ ಅವಿರೋಧವಾಗಿ 10 ಮಂದಿಯನ್ನ ಸದಸ್ಯರನ್ನಾಗಿ ಆಯ್ಕೆ ಮಾಡಿದ್ದು ಸಹಕಾರ ಸಂಘದ ಅಧಿನಿಯಮವನ್ನ ಉಲ್ಲಂಘನೆ ಮಾಡಲಾಗಿದೆ. ಚುನಾವಣಾಧಿಕಾರಿ ಪದ್ಮನಾಭ ಅವರು 13 ಮಂದಿ ಸದಸ್ಯತ್ವ ಇರುವ ಡೇರಿಗೆ 10 ಮಂದಿಯನ್ನ ಆಯ್ಕೆ ಮಾಡಿ ಪ್ರಕಟಣೆ ಹೊರಡಿಸಿರೋದು ಖಂಡನೀಯ.

ಡೇರಿ ಚುನಾವಣೆಗೆ ದಲಿತ ಸಮುದಾಯಕ್ಕೆ ಅನ್ಯಾಯವೆಸಗಿ ಅಪಚಾರವೆಸಗಿದ್ದಾರೆ, ಈ ಕೂಡಲೇ ಆಯ್ಕೆಯಾಗಿರುವ ಅಷ್ಟು ಮಂದಿಯ ಸದಸ್ಯತ್ವವನ್ನ ರದ್ದುಗೊಳಿಸಬೇಕು ಇಲ್ಲವಾದಲ್ಲಿ ಹೋರಾಟ ಮಾಡಲು ಹಿಂಜರಿಯುವುದಿಲ್ಲ ಎಂದು ಸ್ಥಳೀಯ ಮಾಜಿ ಗ್ರಾಮಪಂಚಾಯತಿ ಸದಸ್ಯ ಲೋಕೇಶ್ ಎಚ್ಚರಿಸಿದ್ದು ಮರು ಚುನಾವಣೆ ನಡೆಸುವಂತೆ ಆಗ್ರಹಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು