News Karnataka Kannada
Tuesday, April 23 2024
Cricket
ಚಾಮರಾಜನಗರ

ಪವರ್ ಸ್ಟಾರ್ ಮೇಲಿನ ಅಭಿಮಾನ : ಗುಂಡ್ಲುಪೇಟೆಯಿಂದ ಪಾದಯಾತ್ರೆ ಹೊರಟ ಅಭಿಮಾನಿ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಯಾದ ಗುಂಡ್ಲುಪೇಟೆ ತಾಲೂಕಿನ ಭೀಮನಭೀಡು ಗ್ರಾಮದ ಯುವಕ ರಾಜೇಂದ್ರ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿಗೆ ನಮಿಸಲು ಪಾದಯಾತ್ರೆ ಆರಂಭಿಸಿದ್ದಾರೆ.
Photo Credit : News Kannada

ಗುಂಡ್ಲುಪೇಟೆ: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಯಾದ ಗುಂಡ್ಲುಪೇಟೆ ತಾಲೂಕಿನ ಭೀಮನಭೀಡು ಗ್ರಾಮದ ಯುವಕ ರಾಜೇಂದ್ರ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿಗೆ ನಮಿಸಲು ಪಾದಯಾತ್ರೆ ಆರಂಭಿಸಿದ್ದಾರೆ.

ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದಲ್ಲಿ ಅಪ್ಪು ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪಾದಯಾತ್ರೆ ಆರಂಭಿಸಿರೋ ರಾಜೇಂದ್ರ ಡಾ.ರಾಜ್ ಕುಮಾರ್ ಕುಟುಂಬದ ಅಪ್ಪಟ ಅಭಿಮಾನಿಯಾಗಿದ್ದು ಒಮ್ಮೆಯಾದರೂ ಅಪ್ಪುವನ್ನ ಹತ್ತಿರದಿಂದ ಭೇಟಿಯಾಗುವ ಬಯಕೆ ಹೊಂದಿದ್ದರು ಆದ್ರೆ ಅದು ಆಗಲಿಲ್ಲ ಅಪ್ಪು ಅಕಾಲಿಕ ಮರಣದಿಂದ ನನ್ನ ಆಸೆ ಪಲಿಸಲಿಲ್ಲ ಎಂಬ ನೋವಿನ ಮಾತುಗಳನ್ನಾಡಿದ್ದಾರೆ.

ಈಗಾಗಲೇ ತನ್ನ ಸ್ವಗ್ರಾಮದಿಂದ ಹೊರಟಿರೋ ರಾಜೇಂದ್ರ ಸರಿಸುಮಾರು 230 ಕಿಲೋಮೀಟರ್ ಕ್ರಮಿಸಿ ಪವರ್ ಸ್ಟಾರ್ ಸಮಾಧಿಗೆ ತೆರಳಿ ನಮನ ಸಲ್ಲಿಸಿ ವಾಪಾಸ್ಸಾಗುವೆ ಎಂದು ತಿಳಿಸಿದ್ದು ಗ್ರಾಮದ ಮಂಜು, ಮಣಿ ಇನ್ನಿತರ ಸ್ನೇಹಿತರು ರಾಜೇಂದ್ರನನ್ನ ಬೀಳ್ಕೊಟ್ಟಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು